
ಸಿನಿಮಾಗಳಲ್ಲಿ ನಟಿಸುವುದು ಎಷ್ಟೋ ಮಂದಿ ಕಲಾವಿದರ ಕನಸು. ಅದರಲ್ಲೂ ದೊಡ್ಡ ನಟರ, ದೊಡ್ಡ ಬ್ಯಾನರ್ನ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿತೆಂದರೆ ಅದೃಷ್ಟವೇ ಸರಿ. ಆದರೆ ಹೀಗೆ ಸಿಕ್ಕ ಅವಕಾಶ ಕೊನೆಯ ಕ್ಷಣದಲ್ಲಿ ಕೈಕೊಟ್ಟರೆ? ಚಿತ್ರರಂಗದ ಹಲವರಿಗೆ ಇದರ ಅನುಭವ ಆಗಿರುತ್ತದೆ. ತಾವು ನಟಿಸಿದ ಪಾತ್ರ ಕೊನೆಯ ಕ್ಷಣದಲ್ಲಿ ಕಟ್ ಆಗಿ ಹೋಗಿರುತ್ತದೆ. ಆದರೆ ನಿರ್ದೇಶಕರ ಮೇಲಿನ ಗೌರವ, ಮತ್ತೆ ಪಾತ್ರ ಸಿಗದೇನೋ ಎಂಬ ಭಯದಲ್ಲಿ ಹೆಚ್ಚಿನ ಕಲಾವಿದರು ಆ ಬಗ್ಗೆ ಮಾತನಾಡುವುದಿಲ್ಲ. ಆದರೆ ಇಲ್ಲೊಬ್ಬ ಕಲಾವಿದರು, ಈ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ತೆಲುಗಿನ ಸ್ಟಾರ್ ನಟ ನಾನಿಯ ‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಿದೆ. ಭಾರಿ ಬಜೆಟ್ನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾನಲ್ಲಿ ಖಯಾದು ಲೋಹರ್ ನಾಯಕಿ, ಮೋಹನ್ಬಾಬು, ಬಾಲಿವುಡ್ನ ರಾಘವ್ ಜುರೆಲ್ ವಿಲನ್. ಹಲವು ಅದ್ಭುತ ಕಲಾವಿದರು ಈ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಭಾರಿ ವೈಲೆನ್ಸ್ ಇರುವ ಈ ಸಿನಿಮಾನಲ್ಲಿ ಕೆಲವು ದೈತ್ಯ ಬಾಡಿಬಿಲ್ಡರ್ಗಳು ಸಹ ಇದ್ದಾರೆ. ಅವರುಗಳಲ್ಲಿ ರೆಮೊ ರಹೀಮ್ ಸಹ ಒಬ್ಬರು.
ಇದೀಗ ರೆಮೊ ರಹೀಮ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಾವು ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ಸುಮಾರು ಏಳು ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಿರುವುದನ್ನು ಹೇಳಿಕೊಂಡಿದ್ದಾರೆ. ‘ದಿ ಪ್ಯಾರಡೈಸ್’ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಮಾತನಾಡಿರುವ ಅವರು, ‘ಸಿನಿಮಾ ಅನ್ನು ಕೊಲ್ಲಬೇಡಿ, ಖುದ್ದು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ’ ಎಂದಿದ್ದಾರೆ.
ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾಕ್ಕೆ ತೀವ್ರ ಟೀಕೆ: ನಟ ನಾನಿ ಹೇಳಿದ್ದೇನು?
‘ಸಿನಿಮಾನಲ್ಲಿ ನಾನು ನಟಿಸಿದ ಏಳು ನಿಮಿಷದ ಫುಟೇಜ್ ಡಿಲೀಟ್ ಮಾಡಲಾಗಿದೆ. ಸಿನಿಮಾನಲ್ಲಿ ಬರುವ ಎರಡನೇ ಫೈಟ್ನಲ್ಲಿ ನಾನಿದ್ದೆ ಆದರೆ ಆ ಫೈಟ್ನ ದೃಶ್ಯಗಳನ್ನು ಕತ್ತರಿಸಲಾಗಿದೆ. ಆದರೆ ಆ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ನೆಗೆಟಿವ್ ಟ್ರೋಲುಗಳಿಂದ ಒಂದು ಸಿನಿಮಾ ಅನ್ನು ಕೊಲ್ಲಬೇಡಿ, ದಯವಿಟ್ಟು ಚಿತ್ರರಂಗಕ್ಕೆ ಬನ್ನಿ’ ಎಂದು ಅವರು ಮನವಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ