
ಸೋಶಿಯಲ್ ಮೀಡಿಯಾ ಮೂಲಕ ಅನೇಕರು ಖ್ಯಾತಿ ಹೆಚ್ಚಿಸಿಕೊಳ್ಳುತ್ತಾರೆ. ಈ ಸಾಲಿನಲ್ಲಿ ರಿವಾ ಅರೋರಾ (Riva Arora) ಕೂಡ ಇದ್ದಾರೆ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದಾರೆ. ಅವರು ಟಿವಿ ಶೋಗಳಲ್ಲೂ ಮಿಂಚುತ್ತಿದ್ದಾರೆ. ‘ರಾಕ್ಸ್ಟಾರ್’ ಸಿನಿಮಾದಲ್ಲಿ ರಿವಾ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡರು. ಆಗ ಅವರಿಗೆ ಒಂದೂವರೆ ವರ್ಷ. ಈಗ ಹಲವು ಸಿನಿಮಾಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ.
ರಿವಾ ಅರೋರಾ ಅವರು ‘ಉರಿ: ದಿ ಸ್ಟರ್ಜಿಕಲ್ ಸ್ಟ್ರೈಕ್’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗಾಗಲೇ ಅವರು 28 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ನಟನೆಯ ‘ಚತ್ರಿವಾಲಿ’ ಸಿನಿಮಾದಲ್ಲಿ ರಿವಾ ಅರೊರಾ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
ರಿವಾ ಅವರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ 11.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂದರೆ, 1.12 ಕೋಟಿ ಜನರು ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರ ಬೆಳವಣಿಗೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ರಿವಾ ದೇಹ ಬೇಗ ಬೆಳವಣಿಗೆ ಕಾಣಬೇಕು ಎನ್ನುವ ಕಾರಣಕ್ಕೆ ಅವರ ಪಾಲಕರು ಹಾರ್ಮೋನ್ ಬದಲಾವಣೆಗೆ ಚುಚ್ಚುಮದ್ದು ಕೊಡಿಸಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.
ರಿವಾ ಅರೋರಾ ಅವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಅವರಿಗೆ ಇನ್ನೂ 18 ವರ್ಷ ತುಂಬಿಲ್ಲ. ಆಗಲೇ ಸಾಕಷ್ಟು ಬ್ರ್ಯಾಂಡ್ನ ಪ್ರಚಾರ ಮಾಡುತ್ತಿದ್ದಾರೆ. ಅವರ ಬಳಿ 40 ಲಕ್ಷ ರೂಪಾಯಿ ಬೆಲೆಯ ಆಡಿ ಕ್ಯೂ3 ಕಾರು ಇದೆ.
ರಿವಾ ಅವರ ಆಸ್ತಿ 8.2 ಕೋಟಿ ರೂಪಾಯಿ ಎನ್ನಲಾಗಿದೆ. ಈ ಮೂಲಕ ಅವರು ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಭಾರತದ ಶ್ರೀಮಂತ ಬಾಲ ನಟಿ ಎಂಬ ಖ್ಯಾತಿಯೂ ಅವರಿಗೆ ಇದೆ. ಶೀಘ್ರವೇ ಅವರು ನಾಯಕಿ ಆಗಿ ಮಿಂಚಲಿದ್ದಾರೆ.
ರಿವಾ ಅರೋರಾ ಅವರು ಹಲವು ಸೆಲೆಬ್ರಿಟಿಗಳ ಜೊತೆ ಪೋಸ್ ಕೊಟ್ಟಿದ್ದಾರೆ. ಅವರಿಗೆ ಇನ್ನೂ 16 ವರ್ಷ ವಯಸ್ಸು. ರಿವಾ ಅರೋರಾ ಅವರು ಹುಟ್ಟಿದ್ದು ದೆಹಲಿಯಲ್ಲಿ. ಅವರು ನಟಿಯಾಗಬೇಕು ಎಂದು ಕನಸು ಕಂಡಿದ್ದಾರೆ. ನಟನೆ ಹಾಗೂ ಶಿಕ್ಷಣ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೊಗುತ್ತಿದ್ದಾರೆ.
ಇದನ್ನೂ ಓದಿ: ‘ಬುಲ್ಶಿಟ್ ಕಾರಣ ಕೊಡಬೇಡಿ’; ಸ್ನೇಹಿತ್ ನಿರ್ಧಾರದಿಂದ ತೀವ್ರವಾಗಿ ನೊಂದುಕೊಂಡ ನಮ್ರತಾ
‘ಉರಿ’ ಸಿನಿಮಾದಲ್ಲಿ ಸೈನಿಕನ ಮಗಳ ಪಾತ್ರದಲ್ಲಿ ರಿವಾ ಕಾಣಿಸಿಕೊಂಡಿದ್ದರು. ಈ ಮೂಲಕ ಭರ್ಜರಿ ಜನಪ್ರಿಯತೆ ಪಡೆದರು. ರಿವಾ ಅವರ ತಂದೆ ಉದ್ಯಮಿ. ಅವರ ತಾಯಿ ನಿಶಾ ಲಾಯರ್. ರಿವಾ ಅವರು ಹಲವು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಹಣಕಾಸು ವ್ಯವಹಾರವನ್ನು ಪಾಲಕರೇ ನೋಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Sat, 9 December 23