ರಾಜಮೌಳಿ ಹೊಸ ಡಾಕ್ಯುಮೆಂಟರಿ ನಾಲ್ಕು ದಿನಕ್ಕೆ ಗಳಿಸಿದ್ದು ಕೇವಲ 6 ಲಕ್ಷ ರೂಪಾಯಿ

|

Updated on: Dec 24, 2024 | 3:16 PM

ರಾಜಮೌಳಿ ಅವರ ‘ಆರ್​ಆರ್​ಆರ್’ ಚಿತ್ರದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ ಥಿಯೇಟರ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ಕಂಡಿದೆ. ಕಡಿಮೆ ಪ್ರೇಕ್ಷಕರ ಸಂಖ್ಯೆ ಮತ್ತು ಕಡಿಮೆ ಗಳಿಕೆಯಿಂದಾಗಿ ಇದು ಒಟಿಟಿಗೆ ಬರಲು ರೆಡಿ ಇದೆ. ಡಾಕ್ಯುಮೆಂಟರಿಯಲ್ಲಿ ಚಿತ್ರದ ಮೇಕಿಂಗ್, ಸೆಟ್, ಮತ್ತು ನಟರ ಸಂದರ್ಶನಗಳನ್ನು ಒಳಗೊಂಡಿದೆ.

ರಾಜಮೌಳಿ ಹೊಸ ಡಾಕ್ಯುಮೆಂಟರಿ ನಾಲ್ಕು ದಿನಕ್ಕೆ ಗಳಿಸಿದ್ದು ಕೇವಲ 6 ಲಕ್ಷ ರೂಪಾಯಿ
ರಾಜಮೌಳಿ
Follow us on

ರಾಜಮೌಳಿ ಅವರು ಯಾವುದೇ ಸಿನಿಮ ಮಾಡಿದರೂ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಗಳಿಕೆ ಫಿಕ್ಸ್. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ‘ಆರ್​ಆರ್​ಆರ್​: ಬಿಹೈಂದ್ ಆ್ಯಂಡ್ ಬಿಯಾಂಡ್’ ಡಾಕ್ಯುಮೆಂಟರಿ ಈಗ ಥಿಯೇಟರ್​​​ನಲ್ಲಿ ರಿಲೀಸ್ ಆಗಿ ಮುಗ್ಗರಿಸಿದೆ. ಈ ಡಾಕ್ಯುಮೆಂಟರಿ ಅವಧಿ 1 ಗಂಟೆ 40 ನಿಮಿಷ ಇದೆ. ಇದಕ್ಕೆ 200 ರೂಪಾಯಿ ಕೊಟ್ಟು ವೀಕ್ಷಿಸಲು ಜನರು ನಿರಾಸಕ್ತಿ ತೋರಿದ್ದಾರೆ.

‘ಆರ್​ಆರ್​ಆರ್​’ ಡಾಕ್ಯುಮೆಂಟರಿ ಒಟಿಟಿಗೆ ಹೊಂದಾಣಿಕೆ ಆಗುವಂಥದ್ದು. ಆದರೆ, ರಾಜಮೌಳಿ ಓವರ್ ಕಾನ್ಫಿಡೆನ್ಸ್​ನಿಂದ ಈ ಚಿತ್ರವನ್ನು ಥಿಯೇಟರ್​ನಲ್ಲಿ ರಿಲೀಸ್ ಮಾಡಿದ್ದಾರೆ. ‘ಆರ್​ಆರ್​ಆರ್’ ಚಿತ್ರದ ಮೇಕಿಂಗ್ ಹೇಗಿತ್ತು ಎಂಬುದನ್ನು ಈ ಡಾಕ್ಯುಮೆಂಟರಿ ವರ್ಣಿಸುತ್ತದೆ. ಇದರ ಜೊತೆಗೆ ಸೆಟ್ ಯಾವ ರೀತಿ ಇತ್ತು, ಸಿಬ್ಬಂದಿ ಸಂದರ್ಶನವೂ ಇದರಲ್ಲಿ ಇದೆ.

ರಾಮ್ ಚರಣ್ ಅವರ ಪೊಲೀಸ್ ಸ್ಟೇಷನ್ ಫೈಟ್, ಜೂನಿಯರ್ ಎಂಟಿಆರ್ ಅವರ ಟೈಗರ್ ಜೊತೆಗಿನ ಫೈಟ್, ಮಧ್ಯಂತರದಲ್ಲಿ ಪ್ರಾಣಿಗಳು ಟ್ರಕ್​ನಿಂದ ಜಿಗಿದು ಬರೋದು, ನಾಟು ನಾಟು ಹಾಡಿನ ಮೇಕಿಂಗ್ ಸೇರಿದಂತೆ ಅನೇಕ ದೃಶ್ಯಗಳ ವಿವರಣೆ ಈ ಡಾಕ್ಯುಮೆಂಟರಿಯಲ್ಲಿ ಇದೆ.

‘ಆರ್​ಆರ್​ಆರ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಈ ಡಾಕ್ಯುಮೆಂಟರಿ ಕೇವಲ ಆರು ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಅನೇಕರಿಗೆ ಈ ಡಾಕ್ಯುಮೆಂಟರಿ ಥಿಯೇಟರ್​ನಲ್ಲಿ ರಿಲೀಸ್ ಆದ ವಿಚಾರ ಗೊತ್ತೇ ಇಲ್ಲ. ಇನ್ನೂ ಕೆಲವರಿಗೆ ಈ ಬಗ್ಗೆ ಆಸಕ್ತಿ ಉಳಿದುಕೊಂಡಿಲ್ಲ.

‘ಆರ್​ಆರ್​ಆರ್’ ರಿಲೀಸ್ ಆಗಿ 3 ವರ್ಷ ಕಳೆಯುತ್ತಾ ಬಂದಿದೆ. ಈ ಅವಧಿಯಲ್ಲಿ ಸಾಕಷ್ಟು ಸಿನಿಮಾ ಬಂದು ಹೋಗಿದೆ. ಹೀಗಾಗಿ, ಚಿತ್ರದ ಬಗ್ಗೆ ಅಷ್ಟಾಗಿ ಕ್ರೇಜ್ ಉಳಿದುಕೊಂಡಿಲ್ಲ. ಈ ಕಾರಣಕ್ಕೆ ಡಾಕ್ಯುಮೆಂಟರಿ ಹಿಟ್ ಆಗಿಲ್ಲ. ಒಂದೊಮ್ಮೆ ಇದು ಒಟಿಟಿ ರಿಲೀಸ್ ಕಂಡರೆ ಭರ್ಜರಿ ಮೆಚ್ಷುಗೆ ಪಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ರಾಜಮೌಳಿಯ ಮುಂದಿನ ಸಿನಿಮಾ ಬರಲು ಇನ್ನೂ ಎರಡು ವರ್ಷ ಬೇಕು

ಈ ಡಾಕ್ಯುಮೆಂಟರಿ ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ವಾರಕ್ಕೆ ಅಂದರೆ 27ರಂದು ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ರಿಲೀಸ್ ಆಗಲಿದೆ. ಒಟಿಟಿಯಲ್ಲಿ ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Tue, 24 December 24