ರಾಜಮೌಳಿಯ ಮುಂದಿನ ಸಿನಿಮಾ ಬರಲು ಇನ್ನೂ ಎರಡು ವರ್ಷ ಬೇಕು
SS Rajamouli: ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷವಾಗುತ್ತಾ ಬಂದಿದೆ. ಎಸ್ಎಸ್ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತೇನೆಂದು ಘೋಷಿಸಿ ಮೂರು ವರ್ಷವಾಗಿದೆ. ಆದರೆ ಸಿನಿಮಾದ ಮುಹೂರ್ತ ಸಹ ಇನ್ನೂ ನಡೆದಿಲ್ಲ. ಆದರೆ ಇದೀಗ ಸಿನಿಮಾದ ಮುಹೂರ್ತ ಮತ್ತು ಬಿಡುಗಡೆ ಕುರಿತ ಮಾಹಿತಿಯೊಂದು ಹೊರಬಿದ್ದಿದೆ.
RRR ಸಿನಿಮಾ ಬಳಿಕ ರಾಜಮೌಳಿಯ ರೇಂಜ್ ಬದಲಾಗಿದೆ. RRR ಸಿನಿಮಾ ನೋಡಿದ ವಿಶ್ವದ ಖ್ಯಾತ ನಿರ್ದೇಶಕರೆನಿಸಿಕೊಂಡಿರುವ ಸ್ಟಿಫನ್ ಸ್ಪೀಲ್ಬರ್ಗ್, ‘ಟೈಟ್ಯಾನಿಕ್’, ‘ಅವತಾರ್’ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅಂಥಹವರೇ ಸಿನಿಮಾ ಅನ್ನು ಕೊಂಡಾಡಿದ್ದು, ರಾಜಮೌಳಿಗೆ ಹಾಲಿವುಡ್ನಲ್ಲಿ ಕೆಲಸ ಮಾಡಲು ಆಹ್ವಾನ ಸಹ ನೀಡಿದ್ದರು. ಆದರೆ ರಾಜಮೌಳಿ, ಹಾಲಿವುಡ್ ಸಿನಿಮಾ ಮಾಡದೆ, ತೆಲುಗು ಸಿನಿಮಾವನ್ನೇ ಹಾಲಿವುಡ್ ಲೆವೆಲ್ಗೆ ಮಾಡಲು ಮುಂದಾಗಿದ್ದಾರೆ. ಆದರೆ ಅದಕ್ಕಾಗಿ ಸಿನಿಮಾ ಪ್ರೇಕ್ಷಕರು ಇನ್ನೂ ಎರಡು ವರ್ಷ ಕಾಯಬೇಕಿದೆ.
RRR ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ತಾವು ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಅವರೊಟ್ಟಿಗೆ ಮಾಡುತ್ತಿರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ RRR ಸಿನಿಮಾ ಬಿಡುಗಡೆ ಆಗಿ ಮೂರು ವರ್ಷವಾಗುತ್ತಾ ಬಂತು ಆದರೆ ಇನ್ನೂ ಅವರ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಪ್ರಾರಂಭವೇ ಆಗಿಲ್ಲ. ಆದರೆ ಇದೀಗ ಸಿನಿಮಾ ಕುರಿತು ಸುದ್ದಿ ಹೊರಬಿದ್ದಿದ್ದು, ಸಿನಿಮಾದ ಮುಹೂರ್ತ ಮತ್ತು ಬಿಡುಗಡೆ ದಿನಾಂಕ ಹೊರಬಿದ್ದಿದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾಕ್ಕೆ ಇದೀಗ ಎಸ್ಎಸ್ಎಂಬಿ29 ರಂದು ತಾತ್ಕಾಲಿಕ ಹೆಸರಿಡಲಾಗಿದ್ದು, ಸಿನಿಮಾದ ಮುಹೂರ್ತ ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ನಡೆಯಲಿದೆ. ಸಂಕ್ರಾಂತಿ ವೇಳೆಗೆ ಭಾರಿ ಅದ್ಧೂರಿಯಾಗಿ ಸಿನಿಮಾದ ಮುಹೂರ್ತ ನಡೆಯಲಿದ್ದು, ಆ ಬಳಿಕ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.
ಈಗಿರುವ ಮಾಹಿತಿಯಂತೆ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ 2027 ರಲ್ಲಿ ಬಿಡುಗಡೆ ಆದರೆ ಎರಡನೇ ಭಾಗ 2029 ರಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಆ ವರೆಗೆ ನಟ ಮಹೇಶ್ ಬಾಬು ಸಂಪೂರ್ಣವಾಗಿ ರಾಜಮೌಳಿಯ ಸಿನಿಮಾದಲ್ಲಿ ಮಾತ್ರವೇ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾದ ಹೊರತಾಗಿ ಇನ್ಯಾವ ಸಿನಿಮಾದಲ್ಲಿಯೂ ಮಹೇಶ್ ಬಾಬು ನಟಿಸುವುದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ:ಪತ್ನಿ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ ರಾಜಮೌಳಿ: ಇಲ್ಲಿದೆ ವಿಡಿಯೋ
ಆರ್ಆರ್ಆರ್ ಸಿನಿಮಾ ಬಿಡುಗಡೆ ಆದ ಕೂಡಲೇ ಮಹೇಶ್ ಬಾಬು ಜೊತೆಗಿನ ಸಿನಿಮಾ ಪ್ರಾರಂಭವಾಗಲಿದೆ ಎನ್ನಲಾಗಿತ್ತು. ಆದರೆ ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆದ ಬಳಿಕ ಅದು ಪ್ರದರ್ಶನ ಕಂಡ ರೀತಿ, ಆಸ್ಕರ್ ಗೆ ಹೋಗಿದ್ದು ಇನ್ನಿತರೆ ಕಾರಣಗಳಿಗಾಗಿ ರಾಜಮೌಳಿಗೆ ಸಿನಿಮಾ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ‘RRR’ ಭಾರಿ ದೊಡ್ಡ ಯಶಸ್ಸು ಗಳಿಸಿದ ಕಾರಣ ಈಗ ರಾಜಮೌಳಿ, ಮಹೇಶ್ ಬಾಬು ಜೊತೆಗಿನ ಸಿನಿಮಾವನ್ನು ಹಾಲಿವುಡ್ ರೇಂಜ್ಗೆ ಮಾಡಲು ಯತ್ನಿಸುತ್ತಿದ್ದು, ಅದರ ತಯಾರಿಗೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ಬರೋಬ್ಬರಿ 1000 ಕೋಟಿ ಬಜೆಟ್ ಹೂಡಲಿದ್ದಾರೆ ರಾಜಮೌಳಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ