Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಂಜೀವಿಗೆ ನಿರ್ದೇಶನ ಮಾಡಬೇಕಿತ್ತು ಉಪೇಂದ್ರ; ಆ ಸಿನಿಮಾ ಸೆಟ್ಟೇರಲಿಲ್ಲ ಏಕೆ?

Upendra: ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ಉಪೇಂದ್ರಗೆ ದೊಡ್ಡ ಅಭಿಮಾನಿ ವರ್ಗವಿದೆ. ಅಂದಹಾಗೆ ಬಹಳ ವರ್ಷಗಳ ಹಿಂದೆಯೇ ತೆಲುಗಿನ ಮೆಗಾಸ್ಟಾರ್ ಚಿರಂಜೀವಿಗೆ ಉಪೇಂದ್ರ ಸಿನಿಮಾ ಒಂದನ್ನು ನಿರ್ದೇಶಿಸಬೇಕಿತ್ತು.

ಚಿರಂಜೀವಿಗೆ ನಿರ್ದೇಶನ ಮಾಡಬೇಕಿತ್ತು ಉಪೇಂದ್ರ; ಆ ಸಿನಿಮಾ ಸೆಟ್ಟೇರಲಿಲ್ಲ ಏಕೆ?
Upendra Chiranjeevi
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 19, 2024 | 11:35 AM

ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ನಿರ್ದೇಶನವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅವರ ಐಡಿಯಾಗಳು ಭಿನ್ನವಾಗಿರುತ್ತವೆ. ಈ ಮೊದಲು ನಿರ್ದೇಶನ ಮಾಡಿದ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಅವರನ್ನು ಅನೇಕರು ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿದ ‘ಓಂ’, ‘ಉಪೇಂದ್ರ’ ಮೊದಲಾದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗ ಅವರ ‘ಯುಐ’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಉಪೇಂದ್ರ ಅವರು ಈ ಮೊದಲು ಚಿರಂಜೀವಿ ಚಿತ್ರಕ್ಕೆ ನಿರ್ದೇಶನ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಇತ್ತೀಚೆಗೆ ಹೈದರಾಬಾದ್ಗೆ ಉಪೇಂದ್ರ ಅವರು ತೆರಳಿದ್ದರು. ಈ ವೇಳೆ ಅವರು ಅಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ನಾನು ಒಂದು ಸಿನಿಮಾದ ಕಥೆ ಜೊತೆ ಸಾಕಷ್ಟು ಸಮಯ ಕಳೆದೆ. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡೆ. ಆದರೆ, ಅವರ ನನ್ನ ಬರವಣಿಗೆ ಅವರ ರೇಂಜ್ಗೆ ಇಲ್ಲ ಎನಿಸಿತು’ ಎಂದಿದ್ದಾರೆ ಉಪೇಂದ್ರ. ಈ ಬರವಣಿಗೆ ಪ್ರಕ್ರಿಯೆಯಲ್ಲಿ ಸ್ಟಾರ್ಡಂ ಅನ್ನೋದು ಏನು ಎಂಬುದರ ಅರ್ಥ ಅವರಿಗೆ ಆಗಿತ್ತು.

ಇದನ್ನೂ ಓದಿ:‘ಯುಐ’ ಮ್ಯಾಜಿಕ್ ನೋಡಲು ಹೆಚ್ಚಿದೆ ಉಪೇಂದ್ರ ಅಭಿಮಾನಿಗಳ ಕಾತರ

‘ಸ್ಕ್ರಿಪ್ಟ್‌ ಕೆಲಸ ಮಾಡುವಾಗ ಚಿರಂಜೀವಿ ಅವರು ಚಿತ್ರದ ವಿವಿಧ ಅಂಶಗಳನ್ನು ನೋಡಬೇಕಾಗಿತ್ತು. ಅವರು ವಿವಿಧ ವಯಸ್ಸಿನ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಅದಕ್ಕೇ ಅವರು ಮೆಗಾಸ್ಟಾರ್. ನಾನು ಅದೇ ರೀತಿ ಕಥೆ ಮಾಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಉಪೇಂದ್ರ. ‘ಉಪ್ಪಿ 2 ಬಳಿಕ ಈ ಸಿನಿಮಾ ಮಾಡಲು ಎಂಟು ವರ್ಷಗಳು ಹಿಡಿದವು. ಜನರ ಬುದ್ಧಿವಂತಿಕೆ ಸವಾಲಾಗಿ ಈ ಸಿನಿಮಾ ಇರಲಿದೆ’ ಎಂದು ಉಪೇಂದ್ರ ಹೇಳಿದ್ದಾರೆ.

ಉಪೇಂದ್ರ ನಿರ್ದೇಶನ ಮಾಡುತ್ತಿರುವ ‘ಯುಐ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರ ಡಿಸೆಂಬರ್ 20ರಂದು ಕನ್ನಡದ ಜೊತೆಗೆ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಕಥೆ 2040ರಲ್ಲಿ ಸಾಗುವ ರೀತಿಯಲ್ಲಿ ಕಥೆ ತೋರಿಸಲಾಗಿದೆ. ಇದೊಂದು ಸೈಕಲಾಜಿಕಲ್ ಕಲ್ಕಿ ಎಂದು ಉಪೇಂದ್ರ ಅವರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಉಪೇಂದ್ರ ಅವರು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 18 December 24

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!