ಪತ್ನಿ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ ರಾಜಮೌಳಿ: ಇಲ್ಲಿದೆ ವಿಡಿಯೋ

SS Rajamouli: ಎಸ್​ಎಸ್ ರಾಜಮೌಳಿ ಗಂಭೀರ ಸ್ವಭಾವದವರು, ಹಾಡು, ಡ್ಯಾನ್ಸು ಇದರಿಂದ ತುಸು ದೂರ. ಅವರ ಪತ್ನಿ ರಮಾ ಅಂತೂ ಬಹಳ ನಾಚಿಕೆ ಸ್ವಭಾವದವರು. ಆದರೆ ಇಬ್ಬರೂ ಒಟ್ಟಿಗೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ತೆಲುಗು ಹಾಡೊಂದಕ್ಕೆ ಈ ಜೋಡಿ ವೇದಿಕೆ ಮೇಲೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಪತ್ನಿ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ ರಾಜಮೌಳಿ: ಇಲ್ಲಿದೆ ವಿಡಿಯೋ
ರಾಜಮೌಳಿ-ರಮಾ
Follow us
ಮಂಜುನಾಥ ಸಿ.
|

Updated on: Dec 15, 2024 | 7:38 AM

ನಿರ್ದೇಶಕ ಎಸ್​ಎಸ್ ರಾಜಮೌಳಿ ತುಸು ಗಂಭೀರ ಸ್ವಭಾವದವರು, ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ಸಣ್ಣ ಪುಟ್ಟ ತಮಾಷೆ ಮಾಡುತ್ತಾರಾದರೂ ಡ್ಯಾನ್ಸ್, ಹಾಡು ಇನ್ನಿತರೆಗಳಿಂದ ತುಸು ದೂರ. ಅಸಲಿಗೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಪ್ರತಿ ಸೀನ್​ ಅನ್ನು ಮೊದಲೇ ನಟಿಸಿ ನಟರಿಗೆ ತೋರಿಸುವ ರಾಜಮೌಳಿ, ಡ್ಯಾನ್ಸ್ ವಿಷಯದಲ್ಲಿ ದೂರ ಇದ್ದು ಬಿಡುತ್ತಾರಂತೆ. ಹಾಗೆಂದು ರಾಜಮೌಳಿಗೆ ಡ್ಯಾನ್ಸ್ ಬಾರದು ಎಂದೇನೂ ಅಲ್ಲ. ರಾಜಮೌಳಿ ಬಹಳ ಒಳ್ಳೆಯ ಡ್ಯಾನ್ಸರ್ ಇದೀಗ ಅದಕ್ಕೆ ಸಾಕ್ಷಿ ಸಹ ದೊರೆತಿದೆ. ಪತ್ನಿಯೊಟ್ಟಿಗೆ ವೇದಿಕೆ ಮೇಲೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಎಸ್​ಎಸ್ ರಾಜಮೌಳಿ ಅವರು ನಟನೊಬ್ಬನ ಮದುವೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಖತ್ ಸ್ಟೆಪ್​ ಹಾಕಿದ್ದಾರೆ. ಅವರ ಪತ್ನಿ ರಮಾ ಅವರೂ ಸಹ ರಾಜಮೌಳಿ ಅವರೊಟ್ಟಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಟಾರ್ ನಟಿ

ಎಸ್​ಎಸ್ ರಾಜಮೌಳಿ ಅವರ ಹತ್ತಿರದ ಸಂಬಂಧಿ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರ ಪುತ್ರ ಶ್ರೀ ಸಿಂಹ ಕೋಡೂರಿ ಅವರ ವಿವಾಹ ಫಿಲಂ ನಗರ್​ನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಶ್ರೀ ಸಿಂಹ ಕೋಡೂರಿ ಅವರು ಹಿರಿಯ ನಟ ಮುರಿಳಿ ಮೋಹನ್ ಅವರ ಮೊಮ್ಮಗಳನ್ನು ವಿವಾಹವಾದರು. ಈ ವಿವಾಹದ ಸಂಗೀತ್ ಕಾರ್ಯಕ್ರಮದಲ್ಲಿ ಎಸ್​ಎಸ್ ರಾಜಮೌಳಿ ಹಾಗೂ ಅವರ ಪತ್ನಿ ರಮಾ ವೇದಿಕೆ ಮೇಲೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

‘ಲಂಚಿಕೊಸ್ತಾವ’ ಹಾಡಿಗೆ ಎಸ್​ಎಸ್ ರಾಜಮೌಳಿ ಹಾಗೂ ರಮಾ ಅವರು ಸ್ಟೆಪ್ ಹಾಕಿದ್ದಾರೆ. ರಾಜಮೌಳಿ ಅವರಂತೂ ವೃತ್ತಿಪರ ಡ್ಯಾನ್ಸರ್​ಗಳ ರೀತಿಯಲ್ಲಿಯೇ ಹೆಜ್ಜೆ ಹಾಕಿದ್ದಾರೆ. ರಮಾ ಅವರು ಸಹ ತಾವೇನೂ ಕಡಿಮೆ ಇಲ್ಲ ಎಂಬಂತೆ ಸ್ಟೆಪ್ಸ್ ಹಾಕಿದ್ದಾರೆ. ರಮಾ ಅವರು ಬಹಳ ನಾಚಿಕೆ ಸ್ವಭಾವದವರು, ಕ್ಯಾಮೆರಾ ಮುಂದೆ ಬರುವುದು ಬಹಳ ಅಪರೂಪ, ಹಾಗಿದ್ದರೂ ಸಹ ರಮಾ ಅವರು ಚಳಿ ಬಿಟ್ಟು, ಪತಿಯೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್