ಬಾಕ್ಸ್ ಆಫೀಸ್​ನಲ್ಲಿ ಎರಡನೇ ದಿನವೂ ‘ಆರ್​ಆರ್​ಆರ್​’ ಅಬ್ಬರ; ಶೀಘ್ರವೇ 500 ಕೋಟಿ ಕ್ಲಬ್​?

| Updated By: ರಾಜೇಶ್ ದುಗ್ಗುಮನೆ

Updated on: Mar 27, 2022 | 1:59 PM

ಎರಡನೇ ದಿನ ಈ ಸಿನಿಮಾ 90 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಹಿಂದಿ ಅವತರಣಿಕೆಯಿಂದ ಚಿತ್ರಕ್ಕೆ 26.5 ಕೋಟಿ ರೂಪಾಯಿ ಸಂದಾಯವಾಗಿದೆ. ತೆಲುಗು ವರ್ಷನ್​ನಲ್ಲಿ 32 ಕೋಟಿ ಗಳಿಕೆ ಆಗಿದೆ.

ಬಾಕ್ಸ್ ಆಫೀಸ್​ನಲ್ಲಿ ಎರಡನೇ ದಿನವೂ ‘ಆರ್​ಆರ್​ಆರ್​’ ಅಬ್ಬರ; ಶೀಘ್ರವೇ 500 ಕೋಟಿ ಕ್ಲಬ್​?
ಜ್ಯೂ.ಎನ್​ಟಿಆರ್​-ರಾಮ್ ಚರಣ್
Follow us on

‘ಆರ್​ಆರ್​ಆರ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ (RRR Movie Box Office Collection) ಬಿರುಗಾಳಿ ಎಬ್ಬಿಸಿದೆ. ಮೊದಲ ದಿನ ಸುಮಾರು 250 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಎರಡನೇ ದಿನವೂ ತನ್ನ ಅಬ್ಬರ ಮುಂದುವರಿಸಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಎರಡನೇ ದಿನ ಅಂದರೆ ಶನಿವಾರ (ಮಾರ್ಚ್​ 26) ಚಿತ್ರದ ಕಲೆಕ್ಷನ್ ತಗ್ಗಿದೆ. ಆದರೆ, ಸಿನಿಮಾ ಗಳಿಕೆ ಮಾಡುತ್ತಿರುವ ವೇಗ ನೋಡಿದರೆ ಶೀಘ್ರವೇ 500 ಕೋಟಿ ಕ್ಲಬ್​ ಸೇರುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ‘ಆರ್​ಆರ್​ಆರ್​’ ಚಿತ್ರ ರೆಡಿ ಆದಂತಿದೆ. ಹಲವು ದಾಖಲೆಗಳನ್ನು ಅಳಿಸಿ, ಹೊಸ ದಾಖಲೆಗಳನ್ನು ‘ಆರ್​ಆರ್​ಆರ್’​ (RRR Movie) ಸೃಷ್ಟಿ ಮಾಡುತ್ತಿದೆ.

ಮೊದಲ ದಿನ ಕರ್ನಾಟಕದಿಂದ 16 ಕೋಟಿ ರೂಪಾಯಿ, ಆಂಧ್ರ ಹಾಗೂ ತೆಲಂಗಾಣದಿಂದ 120 ಕೋಟಿ,  ಹಿಂದಿ ವರ್ಷನ್​ನಿಂದ 25 ಕೋಟಿ, ತಮಿಳುನಾಡು ಹಾಗೂ ಕೇರಳದಿಂದ ಚಿತ್ರಕ್ಕೆ 17 ಕೋಟಿ, ವಿದೇಶದಿಂದ 78 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ ಈ ಚಿತ್ರ ಸುಮಾರು 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್​ ಎರಡೇ ದಿನಕ್ಕೆ ಸುಮಾರು 350 ಕೋಟಿ ರೂ. ದಾಟಿದೆ!

ಎರಡನೇ ದಿನ ಈ ಸಿನಿಮಾ 90 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಹಿಂದಿ ಅವತರಣಿಕೆಯಿಂದ ಚಿತ್ರಕ್ಕೆ 26.5 ಕೋಟಿ ರೂಪಾಯಿ ಸಂದಾಯವಾಗಿದೆ. ತೆಲುಗು ವರ್ಷನ್​ನಲ್ಲಿ 32 ಕೋಟಿ ಗಳಿಕೆ ಆಗಿದೆ. ಎರಡನೇ ದಿನ ತೆಲುಗು ವರ್ಷನ್​ನಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗಳಿಕೆ ಆಗಿದ್ದು ಇದೇ ಮೊದಲು ಎಂದು ಸಿನಿಪಂಡಿತರು ಹೇಳಿದ್ದಾರೆ. ಹೀಗಾಗಿ, ಚಿತ್ರದ ಒಟ್ಟೂ ಗಳಿಕೆ 340-350 ಕೋಟಿ ರೂಪಾಯಿ ಆಗಿದೆ.

ಇಂದು (ಮಾರ್ಚ್​ 27) ಭಾನುವಾರ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಹಲವು ಶೋಗಳು ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕೆ ಇಂದಿನ ಗಳಿಕೆ 100 ಕೋಟಿ ರೂಪಾಯಿ ದಾಟಬಹುದು ಎನ್ನಲಾಗುತ್ತಿದೆ. ಮುಂದಿನ ವಾರಕ್ಕೆ ಈ ಚಿತ್ರ 500 ಕೋಟಿ ರೂಪಾಯಿ ಕ್ಲಬ್​ ಸೇರಿದರೂ ಅಚ್ಚರಿ ಏನಿಲ್ಲ ಎನ್ನುತ್ತಿದ್ದಾರೆ ಬಾಕ್ಸ್​ ಆಫೀಸ್​ ಪಂಡಿತರು.

ಈ ಸಿನಿಮಾದಲ್ಲಿ ಬರುವ ಪಾತ್ರಗಳು ನಿಜವಾದವು. ಆದರೆ, ಕಥೆ ಕಾಲ್ಪನಿಕವಾಗಿದೆ. ಈ ಫ್ಯಾಂಟಸಿ ಕಥೆಯನ್ನು ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್​ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾದ ಬಜೆಟ್​ 500 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಒದಿ: RRR Box Office Collection: ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಅಬ್ಬರ; ವಿಶ್ವಾದ್ಯಂತ ಧೂಳೆಬ್ಬಿಸಿತು ರಾಜಮೌಳಿ ಸಿನಿಮಾ

Alia Bhatt: ‘ಆರ್​ಆರ್​ಆರ್​’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್​ ಫ್ಯಾನ್ಸ್

Published On - 1:46 pm, Sun, 27 March 22