ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ದಾಖಲೆ ಮುರಿಯಲಿದೆ ‘RRR​’? 8,000 ಥಿಯೇಟರ್​ನಲ್ಲಿ ರಾಜಮೌಳಿ ಸಿನಿಮಾ 

| Updated By: ರಾಜೇಶ್ ದುಗ್ಗುಮನೆ

Updated on: Mar 24, 2022 | 5:14 PM

ವಿಶ್ವಾದ್ಯಂತ ಈ ಸಿನಿಮಾ ಬರೋಬ್ಬರಿ 8 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ. ದಿನಕ್ಕೆ ಕನಿಷ್ಠ ನಾಲ್ಕು ಶೋ ಎಂದು ಪರಿಗಣಿಸಿದರೂ ‘ಆರ್​ಆರ್​ಆರ್​’ ಚಿತ್ರದ 32,000 ಸಾವಿರ ಶೋಗಳು ಶುಕ್ರವಾರ ಪ್ರದರ್ಶನ ಕಾಣಲಿವೆ.

ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ದಾಖಲೆ ಮುರಿಯಲಿದೆ ‘RRR​’? 8,000 ಥಿಯೇಟರ್​ನಲ್ಲಿ ರಾಜಮೌಳಿ ಸಿನಿಮಾ 
RRR ಟೀಂ
Follow us on

ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸೋಕೆ ರೆಡಿ ಆಗಿದೆ. ಈ ಸಿನಿಮಾ ಮೊದಲ ದಿನ (ಮಾರ್ಚ್​ 25) ಬೆಂಗಳೂರಿನಲ್ಲಿ ಒಂದೇ 600ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ಇನ್ನು ರಾಜ್ಯದ ನಾನಾ ಕಡೆಗಳಲ್ಲಿ ಈ ಸಿನಿಮಾದ ಪ್ರೀ-ಟಿಕೆಟ್ ಬುಕಿಂಗ್​ ಜೋರಾಗಿ ಸಾಗುತ್ತಿದೆ. ಇನ್ನು, ತೆಲುಗು ಚಿತ್ರೋದ್ಯಮದ ಕೇಂದ್ರಬಿಂದು ಹೈದರಾಬಾದ್​ನಲ್ಲಿ ಈ ಚಿತ್ರಕ್ಕೆ 1000ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇದರಲ್ಲಿ ಬಹುತೇಕ ಶೋನ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ. ಸಿನಿಮಾ ಸೃಷ್ಟಿ ಮಾಡುತ್ತಿರುವ ಅಬ್ಬರ ನೋಡಿದರೆ ಒಳ್ಳೆಯ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ. ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ಸಿನಿಮಾ (Bahubali 2) ದಾಖಲೆಯನ್ನು ಮುರಿದರೂ ಅಚ್ಚರಿ ಏನಿಲ್ಲ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕೋಮರಾಮ್​ ಭೀಮ್ ಅವರ ಜೀವನವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ‘ಆರ್​ಆರ್​ಆರ್​’ ಸಿನಿಮಾ ಸಿದ್ಧಗೊಂಡಿದೆ. ಆದರೆ, ಚಿತ್ರದ ಕಥೆ ಸಂಪೂರ್ಣ ಕಾಲ್ಪನಿಕ ಎಂದು ರಾಜಮೌಳಿ ಹೇಳಿದ್ದಾರೆ. ಸ್ವಾತಂತ್ರ್ಯ ಪೂರ್ವ ಭಾರತದ ಕಥೆಯನ್ನು ರಾಜಮೌಳಿ ಹೇಳುತ್ತಿದ್ದಾರೆ. ಜ್ಯೂ.ಎನ್​ಟಿಆರ್​ ಅವರು ಕೋಮರಾಮ್​ ಭೀಮ್​ ಆಗಿ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮ ಪಾತ್ರದಲ್ಲಿ ರಾಮ್​ ಚರಣ್​ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ನಿಂದ ನಿರೀಕ್ಷೆ ಹುಟ್ಟಿದೆ. ಹೀಗಾಗಿ, ಸಿನಿಮಾಗೆ ಸಾಕಷ್ಟು ಚಿತ್ರಮಂದಿರಗಳು ಸಿಕ್ಕಿವೆ.

ವಿಶ್ವಾದ್ಯಂತ ಈ ಸಿನಿಮಾ ಬರೋಬ್ಬರಿ 8 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ. ದಿನಕ್ಕೆ ಕನಿಷ್ಠ ನಾಲ್ಕು ಶೋ ಎಂದು ಪರಿಗಣಿಸಿದರೂ ‘ಆರ್​ಆರ್​ಆರ್​’ ಚಿತ್ರದ 32,000 ಸಾವಿರ ಶೋಗಳು ಶುಕ್ರವಾರ ಪ್ರದರ್ಶನ ಕಾಣಲಿವೆ. ಇದರಿಂದ ಚಿತ್ರದ ಕಲೆಕ್ಷನ್​ 125 ಕೋಟಿ ದಾಟಿದರೂ ಅಚ್ಚರಿ ಏನಿಲ್ಲ.

ಬೆಂಗಳೂರಿನ ಹಲವು ಕಡೆಗಳಲ್ಲಿ ತಡರಾತ್ರಿ 1 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಫ್ಯಾನ್​​ ಶೋನ ಸಿನಿಮಾದ ಟಿಕೆಟ್​ ದರ ಕನಿಷ್ಠ ಬೆಲೆ 400 ರೂಪಾಯಿ. ಗರಿಷ್ಠ 700, 800 ರೂಪಾಯಿ ವರೆಗೂ ಇದೆ. ಟಿಕೆಟ್​ ದರ ಗಗನಕ್ಕೆ ಏರಿದರೂ ಬೆಂಗಳೂರಿನಲ್ಲಿ ಜನರು ಮುಗಿಬಿದ್ದು ಟಿಕೆಟ್​ ಬುಕ್ ಮಾಡುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾ ಮೊದಲ ದಿನ 50 ಕೋಟಿ ಹಾಗೂ ‘ಬಾಹುಬಲಿ 2’ 122 ಕೋಟಿ ರೂಪಾಯಿಯನ್ನು ಕಲೆ ಹಾಕಿತ್ತು. ಈಗ ‘ಆರ್​ಆರ್​ಆರ್​’ ಅಬ್ಬರ ನೋಡಿದರೆ ಈ ಎಲ್ಲಾ ದಾಖಲೆಗಳು ಪುಡಿ ಆಗುವ ಸೂಚನೆ ಸಿಕ್ಕಿದೆ.

ಹಿಂದಿ ಚಿತ್ರರಂಗದಿಂದಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ 100 ಕೋಟಿ ಕಮಾಯಿ ಮಾಡಿದೆ. ಅದೇ ರೀತಿ ‘ಆರ್​ಆರ್​ಆರ್​’ ಕೂಡ ಹಿಂದಿ ವರ್ಷನ್​ನಿಂದ ಒಳ್ಳೆಯ ಹಣ ಬಾಚುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಟೀಂ ಕಡೆಯಿಂದ ಒಂದು ಗುಡ್​ ನ್ಯೂಸ್, ಒಂದು ಬ್ಯಾಡ್​ ನ್ಯೂಸ್​

ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​

Published On - 4:01 pm, Thu, 24 March 22