Rajamouli | Jr NTR | Ram Charan: ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರತಂಡ ಪ್ರಚಾರದ ಭಾಗವಾಗಿ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಸಾಥ್ ನೀಡುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ವಾರಣಾಸಿ, ಏಕತಾ ಪ್ರತಿಮೆ, ಗೋಲ್ಡನ್ ಟೆಂಪಲ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ್ದು, ಫೋಟೋಗಳು ಇಲ್ಲಿವೆ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಮಾರ್ಚ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಪ್ರಚಾರ ಕಾರ್ಯದಲ್ಲಿ ನಾಯಕ ನಟರಾದ ಜ್ಯೂ.ಎನ್ಟಿಆರ್, ರಾಮ್ಚರಣ್ ಹಾಗೂ ರಾಜಮೌಳಿ ಭಾಗವಹಿಸುತ್ತಿದ್ದಾರೆ. ದೇಶಾದ್ಯಂತ ಪ್ರಮುಖ ಸ್ಥಳಗಳಿಗೆ ಚಿತ್ರತಂಡ ಭೇಟಿ ನೀಡುತ್ತಿದ್ದು, ಎಲ್ಲೆಡೆ ಜನಜಾತ್ರೆ ಸೇರುತ್ತಿದೆ. ಚಿತ್ರತಂಡ ಇದುವರೆಗೆ ಎಲ್ಲೆಲ್ಲಿ ಭೇಟಿ ನೀಡಿದೆ? ಸಚಿತ್ರ ಮಾಹಿತಿ ಇಲ್ಲಿದೆ.
1 / 9
ನಿರ್ದೇಶಕ ರಾಜಮೌಳಿ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಯಾವ ಸ್ಟಾರ್ ನಟರಿಗೂ ಅವರು ಕಡಿಮೆಯಿಲ್ಲ. ಹಾಗಾಗಿಯೇ ಚಿತ್ರದ ಪ್ರಚಾರದಲ್ಲಿ ನಾಯಕರ ಜತೆಗೆ ರಾಜಮೌಳಿ ಕೂಡ ಹಾಜರಿರುತ್ತಾರೆ. ರಾಜಸ್ಥಾನದ ಜೈಪುರದ ಸುಪ್ರಸಿದ್ಧ ಹವಾ ಮಹಲ್ ಎದುರು ‘ಆರ್ಆರ್ಆರ್’ ಚಿತ್ರತಂಡ.
2 / 9
ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಿ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿದ್ದ ಚಿತ್ರತಂಡ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಾಥ್ ನೀಡಿದ್ದು ವಿಶೇಷ.
3 / 9
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಆಮಿರ್ ಖಾನ್ ಸಾಥ್ ನೀಡಿದ್ದರು. ನಟಿ ಆಲಿಯಾ ಭಟ್ ಕೂಡ ಜತೆಯಿದ್ದಾರೆ.
4 / 9
ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ರಾಜಮೌಳಿ, ರಾಮ್ಚರಣ್ ಹಾಗೂ ಜ್ಯೂ.ಎನ್ಟಿಆರ್