ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ನೀಡಬೇಕು ಆರ್​ಆರ್​ಆರ್​ ನಿರ್ಮಾಪಕರು; ಹೀಗಾದ್ರೆ ಚಿತ್ರದ ಭವಿಷ್ಯ ಏನು?

| Updated By: ಮದನ್​ ಕುಮಾರ್​

Updated on: Jan 03, 2022 | 8:18 AM

RRR Release Date: ‘ಆರ್​ಆರ್​ಆರ್’​ ಚಿತ್ರದ ಬಗ್ಗೆ ದೊಡ್ಡ ಕ್ರೇಜ್​ ಸೃಷ್ಟಿ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಬೇಕಿತ್ತು.

ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ನೀಡಬೇಕು ಆರ್​ಆರ್​ಆರ್​ ನಿರ್ಮಾಪಕರು; ಹೀಗಾದ್ರೆ ಚಿತ್ರದ ಭವಿಷ್ಯ ಏನು?
ಜ್ಯೂ.ಎನ್​ಟಿಆರ್​-ರಾಮ್​ ಚರಣ್​
Follow us on

ಬಹುನಿರೀಕ್ಷಿತ ‘ಆರ್​ಆರ್​ಆರ್​’ (RRR Movie) ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇದು ಸಿನಿಪ್ರಿಯರಿಗೆ ಬೇಸರ ಮೂಡಿಸಿದೆ. ಈ ಚಿತ್ರಕ್ಕಾಗಿ ರಾಮ್​ ಚರಣ್​ (Ram Charan) ಮತ್ತು ಜ್ಯೂ. ಎನ್​ಟಿಆರ್​ (Jr NTR) ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣಗಳ (Omicron Cases in India) ಕಾರಣದಿಂದ ‘ಆರ್​ಆರ್​ಆರ್​’ ರಿಲೀಸ್​ ಡೇಟ್​ (RRR Release Date) ಮುಂದೂಡುವುದು ಅನಿವಾರ್ಯ ಆಯಿತು. ರಾಜಮೌಳಿ (SS Rajamouli) ನಿರ್ದೇಶನದ ಈ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಪ್ರೇಕ್ಷಕರಿಗೆ ವಾಪಸ್​ ನೀಡಬೇಕಾದ ಸಂದರ್ಭ ಬಂದಿದೆ! ಹಾಗಾದರೆ ಈ ಸಿನಿಮಾದ ಭವಿಷ್ಯ ಏನಾಗಬಹುದು ಎಂದು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ.

‘ಆರ್​ಆರ್​ಆರ್’​ ಚಿತ್ರದ ಬಗ್ಗೆ ದೊಡ್ಡ ಕ್ರೇಜ್​ ಸೃಷ್ಟಿ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಬೇಕಿತ್ತು. ಅದಕ್ಕಾಗಿ ಕೆಲವು ಕಡೆಗಳಲ್ಲಿ ಮುಂಡಗ ಟಿಕೆಟ್​ ಬುಕಿಂಗ್​ ಸಹ ಆರಂಭ ಆಗಿತ್ತು. ಪ್ರಪಂಚದೆಲ್ಲೆಡೆ ಅಂದಾಜು 10 ಕೋಟಿ ರೂ. ಮೊತ್ತದ ಟಿಕೆಟ್​ ಬುಕ್​ ಆಗಿತ್ತು ಎನ್ನಲಾಗಿದೆ. ಸಿನಿಮಾ ರಿಲೀಸ್​ ಪೋಸ್ಟ್​ಪೋನ್​ ಆಗಿರುವುದರಿಂದ ಆ ಹಣವನ್ನು ಪ್ರೇಕ್ಷಕರಿಗೆ ವಾಪಸ್​ ನೀಡಬೇಕಾಗಿದೆ.

ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಯಾವ ಮಟ್ಟದ ನಿರೀಕ್ಷೆ ಇದೆ ಎಂಬುದಕ್ಕೆ ಮುಂಗಡ ಬುಕಿಂಗ್​ ಆಗಿರುವ ಟಿಕೆಟ್​ಗಳ ಸಂಖ್ಯೆಯೇ ಸಾಕ್ಷಿ ನೀಡುತ್ತಿದೆ. ಈಗ 10 ಕೋಟಿ ರೂಪಾಯಿ ವಾಪಸ್​ ನೀಡಬೇಕಾಗಿರುವುದು ನಿಜ. ಹಾಗಂತ ಇದರಿಂದ ಸಿನಿಮಾದ ಕಲೆಕ್ಷನ್​ಗೆ ತೊಂದರೆ ಆಗುವುದಿಲ್ಲ. ಸೂಕ್ತ ಸಮಯದಲ್ಲಿ ‘ಆರ್​ಆರ್​ಆರ್​’ ಬಿಡುಗಡೆ ಮಾಡಿದರೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಆಗುತ್ತದೆ ಎಂದು ಬಾಕ್ಸ್​ ಆಫೀಸ್​ ವ್ಯವಹಾರ ಬಲ್ಲವರು ಮಾತನಾಡುತ್ತಿದ್ದಾರೆ.

ನಟಿ ಆಲಿಯಾ ಭಟ್​ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಬೇಕು. ಆದರೆ ಹಲವು ಕಡೆಗಳಲ್ಲಿ ಚಿತ್ರಮಂದಿಗರಳು ಕ್ಲೋಸ್​ ಆಗುತ್ತಿವೆ. ಇನ್ನೂ ಕೆಲವೆಡೆ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಎಂದು ‘ಆರ್​ಆರ್​ಆರ್​’ ತಂಡ ನಿರ್ಧರಿಸಿದೆ. ಹೊಸ ರಿಲೀಸ್​ ದಿನಾಂಕವನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ

RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?