Sai Pallavi: ಡಾಕ್ಟರ್ ಓದಿದ್ದ ಸಾಯಿ ಪಲ್ಲವಿ ನಟಿ ಆಗಿದ್ದು ಹೇಗೆ?
ಸಾಯಿ ಪಲ್ಲವಿ ಜನಿಸಿದ್ದು 1992ರಲ್ಲಿ. ಅವರದ್ದು ತಮಿಳು ಕುಟಂಬ. ಅವರ ಆಡು ಭಾಷೆ ಬಡಗ. ಇದು ತಮಿಳು ಹಾಗೂ ಕನ್ನಡ ಭಾಷೆಯ ಮಿಶ್ರಣ. ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಕಣ್ಣನ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಾಯಿ ಪಲ್ಲವಿ ವೈದ್ಯೆ ಆಗಬೇಕು ಎಂದು ಕೊಂಡವರು.
ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಇಂದು (ಮೇ 9) ಜನ್ಮದಿನ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅಭಿಮಾನಿಗಳು ಸಾಯಿ ಪಲ್ಲವಿಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ. ಅಂದಹಾಗೆ ಸಾಯಿ ಪಲ್ಲವಿ ಓದಿದ್ದು ಮೆಡಿಕಲ್. ಆದರೆ, ಅವರು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಡ್ಯಾನ್ಸ್ನಲ್ಲಿ ಸಾಯಿ ಪಲ್ಲವಿ ನಿಪುಣರು. ಪ್ರತಿ ಸಿನಿಮಾಗಳಲ್ಲಿ ನಿರ್ದೇಶಕರು ಅವರಿಗೆ ತಮ್ಮ ನೃತ್ಯ ಕಲೆಯನ್ನು ತೋರಿಸೋಕೆ ಅವಕಾಶ ಕೊಡುತ್ತಾರೆ. ಅಂದಹಾಗೆ, ಅವರು ನಟಿ ಆಗಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಸಾಯಿ ಪಲ್ಲವಿ ಜನಿಸಿದ್ದು 1992ರಲ್ಲಿ. ಅವರದ್ದು ತಮಿಳು ಕುಟಂಬ. ಅವರ ಆಡು ಭಾಷೆ ಬಡಗ. ಇದು ತಮಿಳು ಹಾಗೂ ಕನ್ನಡ ಭಾಷೆಯ ಮಿಶ್ರಣ. ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಕಣ್ಣನ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಾಯಿ ಪಲ್ಲವಿ ವೈದ್ಯೆ ಆಗಬೇಕು ಎಂದು ಕೊಂಡವರು. ಆದರೆ, ಅವರಿಗೆ ದಿನ ಕಳೆದಂತೆ ನಟನೆಯತ್ತ ಒಲವು ಮೂಡಿತು. ಹೀಗಾಗಿ, ಅವರು ನಟನೆ ಆಯ್ಕೆ ಮಾಡಿಕೊಂಡರು. ಸಾಯಿ ಪಲ್ಲವಿ 2015ರಲ್ಲಿ ರಿಲೀಸ್ ಆದ ‘ಪ್ರೇಮಂ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾದಲ್ಲಿ ಪ್ರಾಧ್ಯಾಪಕಿಯ ಪಾತ್ರ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಗಳಿಕೆ ಮಾಡಿತ್ತು. ಈ ಚಿತ್ರದಿಂದ ಸಾಯಿ ಪಲ್ಲವಿ ವೃತ್ತಿ ಬದುಕು ಬದಲಾಯಿತು.
ಸಾಯಿ ಪಲ್ಲವಿ ಅವರ ನಟನೆಯ ‘ಕಾಳಿ’ (2016), ‘ಫಿದಾ’ (2017), ‘ಮಿಡ್ಲ್ ಕ್ಲಾಸ್ ಅಬ್ಬಾಯಿ’ (2017), ‘ಮಾರಿ’ (2018), ‘ಲವ್ ಸ್ಟೋರಿ’ (2021), ‘ಶ್ಯಾಮ್ ಸಿಂಘ ರಾಯ್’ (2021), ‘ಗಾರ್ಗಿ’ (2022) ಮೊದಲಾದ ಸಿನಿಮಾಗಳು ಮೆಚ್ಚುಗೆ ಪಡೆಯಿತು 2020ರಲ್ಲಿ ಸಾಯಿ ಪಲ್ಲವಿ ಅವರು ಫೋರ್ಬ್ಸ್ ಇಂಡಿಯಾ ಲಿಸ್ಟ್ ಅಲ್ಲಿ ಸ್ಥಾನ ಪಡೆದಿದ್ದರು. ಸಾಯಿ ಪಲ್ಲವಿ 2005-2009ರ ಅವಧಿಯಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದರು. 2009ರಲ್ಲಿ ‘ಢೀ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅವರು ಫೈನಲಿಸ್ಟ್ ಆಗಿದ್ದರು. ಇದರಿಂದ ಅವರಿಗೆ ಬಣ್ಣದ ಲೋಕದ ಜೊತೆ ಒಲವು ಬೆಳೆಯಿತು.
ಇದನ್ನೂ ಓದಿ: ‘ರಾಮಾಯಣ’ ನಟಿ ಸಾಯಿ ಪಲ್ಲವಿ ಅಭಿನಯದ ಇನ್ನೊಂದು ಚಿತ್ರ 40 ಕೋಟಿ ರೂ.ಗೆ ಸೇಲ್
ಸಾಯಿ ಪಲ್ಲವಿ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಶಿವಕಾರ್ತಿಕೇಯ ನಟನೆಯ ‘ಅಮರನ್’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ. ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ನಾಗ ಚೈತನ್ಯ ಅವರ 23ನೇ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ. ಇದಲ್ಲದೆ ಹಲವು ಸಿನಿಮಾಗಳು ಅವರನ್ನು ಹುಡುಕಿ ಬಂದಿವೆ. ಅಳೆದು ತೂಗಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.