ವಿಮರ್ಶೆಯಲ್ಲಿ ಗೆದ್ದ ಸಾಯಿ ಪಲ್ಲವಿ ಚಿತ್ರ ‘ಗಾರ್ಗಿ’; ಆದರೆ, ಚಿತ್ರಮಂದಿರದಲ್ಲಿ ಹೇಗಿದೆ ರೆಸ್ಪಾನ್ಸ್?

ಸಾಯಿ ಪಲ್ಲವಿ ಅವರು ಪಾತ್ರ ಹಾಗೂ ಕಥೆ ಆಯ್ಕೆಯಲ್ಲಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರು ಎಂದಿಗೂ ಗ್ಲಾಮರ್ ಹಿಂದೆ ಬಿದ್ದವರಲ್ಲ. ಅವರು ನೈಜ ಎನಿಸುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

ವಿಮರ್ಶೆಯಲ್ಲಿ ಗೆದ್ದ ಸಾಯಿ ಪಲ್ಲವಿ ಚಿತ್ರ ‘ಗಾರ್ಗಿ’; ಆದರೆ, ಚಿತ್ರಮಂದಿರದಲ್ಲಿ ಹೇಗಿದೆ ರೆಸ್ಪಾನ್ಸ್?
ಸಾಯಿ ಪಲ್ಲವಿ
Edited By:

Updated on: Jul 16, 2022 | 8:43 PM

ನಟಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಗಾರ್ಗಿ’ ಸಿನಿಮಾ (Gargi Movie) ಜುಲೈ​ 15ರಂದು ತೆರೆಕಂಡಿದೆ. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರವನ್ನು ಕೊಂಡಾಡಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಮೊದಲು ಸಿದ್ಧಗೊಂಡು ಉಳಿದ ಭಾಷೆಗೆ ಡಬ್ ಆಗಿ ತೆರೆಕಂಡಿದೆ. ಆದರೆ, ತಮಿಳು ಭಾಗದಲ್ಲಿ ಚಿತ್ರಕ್ಕೆ ಹೇಳಿಕೊಳ್ಳವಂತಹ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಸಾಯಿ ಪಲ್ಲವಿ ಅವರು ಪಾತ್ರ ಹಾಗೂ ಕಥೆ ಆಯ್ಕೆಯಲ್ಲಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರು ಎಂದಿಗೂ ಗ್ಲಾಮರ್ ಹಿಂದೆ ಬಿದ್ದವರಲ್ಲ. ಅವರು ನೈಜ ಎನಿಸುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ‘ಗಾರ್ಗಿ’ ಸಿನಿಮಾದಲ್ಲೂ ಅವರ ಪಾತ್ರ ತುಂಬಾನೇ ನೈಜವಾಗಿ ಮೂಡಿ ಬಂದಿದೆ. ಈ ಕಾರಣಕ್ಕೆ ವಿಮರ್ಶಕರಿಗೆ ಹಾಗೂ ಸಾಯಿ ಪಲ್ಲವಿ ಫ್ಯಾನ್ಸ್​ಗೆ ಸಿನಿಮಾ ಇಷ್ಟವಾಗಿದೆ. ಆದರೆ, ಚಿತ್ರ ಮಂದಿರಕ್ಕೆ ಹೆಚ್ಚು ಜನರು ತೆರಳುತ್ತಿಲ್ಲ.

ವಿಮರ್ಶೆಯಲ್ಲಿ ಗೆದ್ದ ಸಿನಿಮಾಗಳೆಲ್ಲವೂ ಬಾಕ್ಸ್ ಆಫೀಸ್​ನಲ್ಲಿ ಗೆದ್ದೇ ಬಿಡಬೇಕು ಎಂಬುದೇನು ಇಲ್ಲ. ಕೆಲ ಚಿತ್ರಗಳು ವಿಮರ್ಶೆಯಲ್ಲಿ ಗೆದ್ದ ಹೊರತಾಗಿಯೂ ಥಿಯೇಟರ್​ಗೆ ಜನ ಬರದೆ ಇದ್ದ ಉದಾಹರಣೆ ಇದೆ. ಈಗ ‘ಗಾರ್ಗಿ’ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡದೆ ಇರುವುದು ಸಿನಿಮಾಗೆ  ಜನರು ಬರದೆ ಇರಲು ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿಯೂ ನಿರ್ಮಾಣ ಆಗಿದೆ. ಇದರಿಂದಲೂ ಚಿತ್ರಮಂದರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿಲ್ಲ.

ಇದನ್ನೂ ಓದಿ
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಸಿನಿಮಾ ತೆರೆಕಂಡ ಆರಂಭದಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ಪಡೆದುಕೊಂಡು, ಮುಂದಿನ ದಿನಗಳಲ್ಲಿ ಚಿತ್ರ ಹೌಸ್​​ಫುಲ್ ಓಡಿದ ಉದಾಹರಣೆ ಇದೆ. ‘ಗಾರ್ಗಿ’ ಚಿತ್ರದಲ್ಲೂ ಹಾಗೆ ಆದರೂ ಅಚ್ಚರಿ ಏನಿಲ್ಲ. ಈ ಚಿತ್ರಕ್ಕೆ ಬಾಯಿಮಾತಿನಿಂದ ಪ್ರಚಾರ ಸಿಕ್ಕು ಒಳ್ಳೆಯ ಕಲೆಕ್ಷನ್ ಮಾಡಿದರೂ ಮಾಡಬಹುದು.

ಇದನ್ನೂ ಓದಿ:  ಹೇಗಿದೆ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರ? ಫಸ್ಟ್​ ಡೇ ಫಸ್ಟ್​ ಶೋ ನೋಡಿದವರ ವಿಮರ್ಶೆ ಇಲ್ಲಿದೆ..

ಈ ಮೊದಲು ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ, ಒಟಿಟಿಯಲ್ಲಿ ಜನರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದರು. ‘ಗಾರ್ಗಿ’ ಚಿತ್ರವನ್ನು ಪ್ರೇಕ್ಷಕರು ಅದೇ ರೀತಿಯಲ್ಲಿ ನೋಡುತ್ತಾರಾ ಎಂಬ ಕುತೂಹಲ ಇದೆ.

Published On - 4:51 pm, Sat, 16 July 22