‘ನನಗೆ ಕನ್ನಡ ಚಿತ್ರರಂಗದಲ್ಲಿ ಅಪ್ಪು ಮೊದಲ ಫ್ರೆಂಡ್’; ಸಾಯಿ ಪಲ್ಲವಿ ಪ್ರೀತಿಯ ಮಾತು

ಸಾಯಿ ಪಲ್ಲವಿ, ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ತಮ್ಮ ಮೊದಲ ಸ್ನೇಹಿತ ಎಂದು ಕರೆದು ಭಾವುಕರಾಗಿದ್ದಾರೆ. 'ಪ್ರೇಮಂ' ಬಳಿಕ ಪುನೀತ್ ಅವರು ತಮ್ಮನ್ನು ಅಭಿನಂದಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಹುಟ್ಟುಹಬ್ಬದ ಸನಿಹದಲ್ಲಿ ಸಾಯಿ ಪಲ್ಲವಿ ಅವರ ಈ ವಿಡಿಯೋ ವೈರಲ್ ಆಗಿದೆ.

‘ನನಗೆ ಕನ್ನಡ ಚಿತ್ರರಂಗದಲ್ಲಿ ಅಪ್ಪು ಮೊದಲ ಫ್ರೆಂಡ್’; ಸಾಯಿ ಪಲ್ಲವಿ ಪ್ರೀತಿಯ ಮಾತು
ಸಾಯಿ ಪಲ್ಲವಿ-ಪುನೀತ್
Edited By:

Updated on: Mar 13, 2026 | 7:46 AM

ಪುನೀತ್ ರಾಜ್​​ಕುಮಾರ್ (Puneeth) ಹುಟ್ಟಿದ್ದು ಮಾರ್ಚ್ 17ರಂದು. ಅವರು ಇಂದು ನಮ್ಮ ಜೊತೆ ಇಲ್ಲ ಅಂಬ ನೋವು ಅಭಿಮಾನಿಗಳನ್ನು ಕಾಡಿದೆ. ಅವರು ಅನೇಕರಿಗೆ ಮಾದರಿ. ಕನ್ನಡದವರಿಗೆ ಮಾತ್ರವಲ್ಲ, ಪರಭಾಷೆಯವರಿಗೂ ಪುನೀತ್ ಅವರು ಇಷ್ಟು. ಅನುಪಮಾ ಪರಮೇಶ್ವರನ್, ಅದಾ ಶರ್ಮಾ ಸೇರಿದಂತೆ ಅನೇಕರು ಪುನೀತ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು ನೀವು ಕಾಣಬಹುದು. ಈಗ ಸಾಯಿ ಪಲ್ಲವಿ ಅವರ ಹೊಸ ವಿಡಿಯೋ ವೈರಲ್ ಆಗಿದೆ.

ಸಾಯಿ ಪಲ್ಲವಿ ಅವರು ಇತ್ತೀಚೆಗೆ ಪುನೀತ್ ರಾಜ್​​ಕುಮಾರ್ ಬಗ್ಗೆ ಮಾತನಾಡಿದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ವಿವರಿಸಿದ್ದರು. ‘ಈ ಇಂಡಸ್ಟ್ರಿಯಿಂದ ಮೊದಲು ಭೇಟಿ ಮಾಡಿದ್ದು ಅಂದರೆ ಅದು ಪುನೀತ್ ರಾಜ್ಕುಮಾರ್. ನಾನು, ಫಿಲ್ಮ್ ಫೇರ್ ಅವಾರ್ಡ್ನಲ್ಲಿ ಅವರು ಭೇಟಿ ಮಾಡಿದ್ದೆ. ನಾನು ಆಗತಾನೇ ಇಂಡಸ್ಟ್ರಿಗೆ ಬಂದಿದ್ದೆ. ಪ್ರೇಮಂ ಮಾಡಿದ್ದೆ’ ಎಂದು ಅವರು ಹೇಳಿದ್ದರು.

‘ನಾನು ಅವಾರ್ಡ್ ಫಂಕ್ಷನ್ನಿಂದ ತೆರಳುತ್ತಿದ್ದೆ. ಆಗ ಅವರು ಕರೆದು ಮಾತನಾಡಿಸಿದರು. ನಿಮ್ಮನ್ ಸಿನಿಮಾ ನೋಡಿದೆ. ಸಿನಿಮಾ ಚೆನ್ನಾಗಿದೆ ಎಂದು ಅವರು ನನಗೆ ಹೇಳಿದ್ದರು’ ಎಂಬುದಾಗಿ ಸಾಯಿ ಪಲ್ಲವಿ ವಿವರಿಸಿದ್ದರು. ಸಾಯಿ ಪಲ್ಲವಿ ಅವರ ಈ ವಿಡಿಯೋ ಗಮನ ಸೆಳೆಯುತ್ತಿದೆ. ಎಲ್ಲರೂ ಸಾಯಿ ಪಲ್ಲವಿ ಅವರನ್ನು ಹೊಗಳುತ್ತಿದ್ದಾರೆ. ಪುನೀತ್ ಬಗ್ಗೆ ಇಷ್ಟೊಳ್ಳೆಯ ಮಾತನ್ನು ಆಡಿದ ಅವರಿಗೆ ಧನ್ಯವಾದ ಹೇಳಿದ್ದಾರೆ ಸಾಯಿ ಪಲ್ಲವಿ.

ಇದನ್ನೂ ಓದಿ: ಪುನೀತ್, ವಿನಯ್, ಯುವ ರಾಜ್​​ಕುಮಾರ್ ಒಟ್ಟಿಗೆ ವರ್ಕೌಟ್ ಮಾಡಿದ ಅಪರೂಪದ ವಿಡಿಯೋ

ಪುನೀತ್ ರಾಜ್​​ಕುಮಾರ್ ಅವರು ನಿಧನ ಹೊಂದಿದ್ದು, ಅನೇಕರಿಗೆ ಬೇಸರ ಇದೆ. ಈ ವಿಷಯದಲ್ಲಿ ಅಭಿಮಾನಿಗಳಿಗೆ ಯಾವಾಗಲೂ ಬೇಸರ ಇದೆ. ಅವರು ಇದ್ದಿದ್ದರೆ ಹಲವು ಚಿತ್ರಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈಗ ಬರ್ತ್​​​ಡೇಗೆ ಅವರ ಹೊಸ ಸಿನಿಮಾ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us