ಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ, ಮೊದಲ ಬಾರಿ ರಗಡ್ ಲುಕ್

Sai Pallavi movie: ಸಾಯಿ ಪಲ್ಲವಿ ಈ ವರೆಗೆ ನಟಿಸಿರುವುದು ಸೌಮ್ಯ ನಾಯಕಿಯ ಪಾತ್ರಗಳು. ಒಂದು ಸಿನಿಮಾನಲ್ಲಿ ನಕ್ಸಲೈಟ್, ಮತ್ತೊಂದು ಸಿನಿಮಾನಲ್ಲಿ ದೇವದಾಸಿಯಾಗಿ ನಟಿಸಿದ್ದಾರಾದರೂ ಆ ಸಿನಿಮಾಗಳಲ್ಲಿಯೂ ಅವರದ್ದು ಸೌಮ್ಯವಾದ ಪಾತ್ರಗಳೇ. ಆದರೆ ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ, ಈ ವರೆಗೆ ಪ್ರಯತ್ನಿಸದ ರೀತಿಯ ಅವರ ಪಾಲಿಗೆ ಬಹಳ ಹೊಸದಾದ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ, ಮೊದಲ ಬಾರಿ ರಗಡ್ ಲುಕ್
Sai Pallavi

Updated on: Jun 07, 2026 | 2:48 PM

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ಮತ್ತು ಬಲು ಬೇಡಿಕೆಯ ನಟಿ. ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿಯಾಗಿರುವ ಸಾಯಿ ಪಲ್ಲವಿ, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಬಲು ಚ್ಯೂಸಿ. ತಮ್ಮ ಪಾತ್ರಕ್ಕೆ ತೂಕವಿದ್ದರಷ್ಟೆ ಅವರು ಒಪ್ಪಿಕೊಳ್ಳುವುದು. ದೊಡ್ಡ ಸ್ಟಾರ್ ಜೊತೆಗಿನ ಸಿನಿಮಾ ಆಗಿದ್ದರೂ ಸರಿಯೇ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಂದೇಶವುಳ್ಳ ಚಿತ್ರಗಳಿಗೆ ಮೊದಲ ಆದ್ಯತೆ. ಜಾಹೀರಾತುಗಳಲ್ಲಿ ಯಾವ ಕಾರಣಕ್ಕೂ ನಟಿಸುವುದಿಲ್ಲ, ಸಿನಿಮಾನಲ್ಲಿ ಉಡುವ ಉಡುಗೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಅಂದಹಾಗೆ ಸಾಯಿ ಪಲ್ಲವಿ ಈ ವರೆಗೆ ನಟಿಸಿರುವುದು ಸೌಮ್ಯ ನಾಯಕಿಯ ಪಾತ್ರಗಳು. ಒಂದು ಸಿನಿಮಾನಲ್ಲಿ ನಕ್ಸಲೈಟ್, ಮತ್ತೊಂದು ಸಿನಿಮಾನಲ್ಲಿ ದೇವದಾಸಿಯಾಗಿ ನಟಿಸಿದ್ದಾರಾದರೂ ಆ ಸಿನಿಮಾಗಳಲ್ಲಿಯೂ ಅವರದ್ದು ಸೌಮ್ಯವಾದ ಪಾತ್ರಗಳೇ. ಆದರೆ ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ, ಈ ವರೆಗೆ ಪ್ರಯತ್ನಿಸದ ರೀತಿಯ ಅವರ ಪಾಲಿಗೆ ಬಹಳ ಹೊಸದಾದ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಸಾಯಿ ಪಲ್ಲವಿ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಸಾಮಾನ್ಯ ಪೊಲೀಸ್ ಅಲ್ಲ, ಬಲು ರಗಡ್ ಆದ ಪೊಲೀಸ್. ಈ ಹಿಂದೆ ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ ನಿರ್ದೇಶಿಸಿದ್ದ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಸಾಯಿ ಪಲ್ಲವಿ ಅವರದ್ದು ಪೊಲೀಸ್ ಪಾತ್ರ. ಸಿನಿಮಾದ ನಾಯಕ ಧನುಶ್.

ಇದನ್ನೂ ಓದಿ:ಸಹೋದರಿಯ ಜೊತೆ ಕ್ಯೂಟ್ ವಿಡಿಯೋ ಹಂಚಿಕೊಂಡ ಸಾಯಿ ಪಲ್ಲವಿ

ಧನುಶ್ ಜೊತೆಗೆ ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಇವರು ‘ಮಾರಿ 2’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಈ ಹೊಸ ಸಿನಿಮಾನಲ್ಲಿ ಧನುಶ್ ಕಳ್ಳನ ಪಾತ್ರದಲ್ಲಿ ನಟಿಸಿದರೆ ಸಾಯಿ ಪಲ್ಲವಿ ಪೊಲೀಸ್ ಅಂತೆ. ಇಬ್ಬರ ನಡುವೆ ಸ್ಪಷ್ಟ ವೈರತ್ವ ಇರಲಿದೆ ಎನ್ನಲಾಗುತ್ತಿದೆ. ಆದರೆ ಎರಡೂ ಪಾತ್ರಗಳಿಗೆ ಸಮಾನ ಅವಕಾಶ ಮತ್ತು ಪ್ರಾಧಾನ್ಯತೆ ಇರಲಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ಪಾಲಿಗೆ ಇದು ಬಲು ಸವಾಲಿನ ಪಾತ್ರ ಆಗಲಿದೆ. ಸಾಯಿ ಪಲ್ಲವಿ ಅವರ ಸಿನಿಮಾಗಳ ಪಾತ್ರದ ರೀತಿಯಲ್ಲಿಯೇ ಬಲು ಸೌಮ್ಯ ವ್ಯಕ್ತಿತ್ವದವರು. ಆದರೆ ಪೊಲೀಸ್ ಪಾತ್ರಗಳಿಗೆ ಅದರದ್ದೇ ಆದ ಗಡಸು ವ್ಯಕ್ತಿತ್ವ ಬೇಕಾಗಿರುತ್ತದೆ. ಸಾಯಿ ಪಲ್ಲವಿ ಈ ಪಾತ್ರವನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us