AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾ ಇಂಟರ್ವೆಲ್ ಸೀನ್ ಲೀಕ್: ಗಾಢವಾಗಿದೆ ‘ಕೆಜಿಎಫ್’ ಛಾಯೆ

Salaar: ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಇಂಟರ್ವೆಲ್ ಸೀನ್ ಲೀಕ್ ಆಗಿದೆ. ಅಂದಹಾಗೆ 'ಕೆಜಿಎಫ್' ಸಿನಿಮಾದ ಕ್ಲೈಮ್ಯಾಕ್ಸ್​ಗೂ 'ಸಲಾರ್' ಸಿನಿಮಾದ ಇಂಟರ್ವೆಲ್ ಸೀನ್​ಗೂ ಇದೆಯಂತೆ ಲಿಂಕ್!?

'ಸಲಾರ್' ಸಿನಿಮಾ ಇಂಟರ್ವೆಲ್ ಸೀನ್ ಲೀಕ್: ಗಾಢವಾಗಿದೆ 'ಕೆಜಿಎಫ್' ಛಾಯೆ
ಸಲಾರ್-ಕೆಜಿಎಫ್
Follow us
ಮಂಜುನಾಥ ಸಿ.
|

Updated on: Aug 05, 2023 | 4:18 PM

ಸಾಲು-ಸಾಲು ಸೋಲು ಕಂಡಿರುವ ಪ್ರಭಾಸ್ (Prabhas) ಒಂದು ಪಕ್ಕಾ ಬ್ಲಾಕ್ ಬಸ್ಟರ್​ಗಾಗಿ ಹಪಹಪಿಸುತ್ತಿದ್ದಾರೆ. ಸದ್ಯಕ್ಕೆ ಪ್ರಭಾಸ್ ಅಭಿಮಾನಿಗಳ ನಿರೀಕ್ಷೆಯೆಲ್ಲ ‘ಸಲಾರ್‘ (Salaar) ಸಿನಿಮಾದ ಮೇಲಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿ ಪ್ರಭಾಸ್ ನಟಿಸಿರುವ ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಬಗ್ಗೆ ಪ್ರಚಾರ ಕಾರ್ಯ ನಿಧಾನಕ್ಕೆ ಆರಂಭಗೊಳ್ಳುತ್ತಿದೆ. ಈ ನಡುವೆ ‘ಸಲಾರ್’ ದ ಇಂಟರ್ವೆಲ್ ಸೀನ್ ಕತೆ ಲೀಕ್ ಆಗಿದೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

‘ಕೆಜಿಎಫ್’ ಸಿನಿಮಾ ಸರಣಿ ಖ್ಯಾತಿಯ ಪ್ರಶಾಂತ್ ನೀಲ್ ಅವರಿಗೆ ಅವರದ್ದೇ ಆದ ಮೇಕಿಂಗ್ ಹಾಗೂ ಕತೆ ನಿರೂಪಣಾ ಶೈಲಿ ಇದೆ. ಅದನ್ನು ಪ್ರೇಕ್ಷಕ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾದಲ್ಲಿ ನೋಡಿದ್ದಾನೆ. ‘ಸಲಾರ್’ ಸಿನಿಮಾವನ್ನೂ ಸಹ ಪ್ರಶಾಂತ್ ನೀಲ್, ‘ಕೆಜಿಎಫ್’ ಶೈಲಿಯಲ್ಲಿಯೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಶೈಲಿ ಮಾತ್ರವೇ ಅಲ್ಲ, ‘ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಆ ಸಿನಿಮಾದ ದೃಶ್ಯವೊಂದನ್ನು ‘ಸಲಾರ್’ನಲ್ಲಿ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

‘ಕೆಜಿಎಫ್’ ಸಿನಿಮಾದ ಮೊದಲ ಭಾಗದ ಕ್ಲೈಮ್ಯಾಕ್ಸ್ ದೃಶ್ಯ ನೆನಪಿರಬೇಕು, ದೊಡ್ಡ ದೇವಿಯ ವಿಗ್ರಹದ ಮುಂದೆ ರಾಕಿ ಭಾಯ್, ಗರುಡನ ತಲೆ ಕತ್ತರಿಸುವ ದೃಶ್ಯ. ಆ ದೃಶ್ಯದಿಂದ ಸ್ಪೂರ್ತಿ ಪಡೆದು ‘ಸಲಾರ್’ ನಲ್ಲಿ ಅಂಥಹುದೇ ಒಂದು ದೃಶ್ಯವನ್ನು ಸೃಷ್ಟಿಸಿದ್ದಾರೆ. ‘ಸಲಾರ್’ ಇಂಟರ್ವೆಲ್ ಸೀನ್​ನಲ್ಲಿ ಕಾಳಿ ದೇವಿಯ ದೊಡ್ಡ ವಿಗ್ರಹದ ಮುಂದೆ ಪ್ರಭಾಸ್ ವಿಲನ್​ಗಳೆದುರು ಫೈಟ್ ಮಾಡುವ ಸೀನ್ ಇದೆಯಂತೆ. ಆ ಫೈಟ್ ಸೀನ್ ಮೂಲಕವೇ ಪ್ರಭಾಸ್ ಹಾಗೂ ವಿಲನ್​ಗಳ ನಡುವೆ ಮೊದಲ ಫೈಟ್ ನಡೆಯಲಿದೆ. ಆ ಫೈಟ್ ಮೂಲಕವೇ ವಿಲನ್​ಗಳ ಸಂಪೂರ್ಣ ಗಮನ ಪ್ರಭಾಸ್ ಪಾತ್ರದ ಕಡೆಗೆ ತಿರುಗುತ್ತದೆ. ಹಾಗಾಗಿ ಭಾರಿ ಭರ್ಜರಿಯಾಗಿ ಫೈಟ್ ಅನ್ನು ಆ ದೃಶ್ಯದಲ್ಲಿ ಕಂಪೋಸ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಇಂಟರ್ವೆಲ್ ಬ್ಯಾಂಗ್ ಆಗಿಯೂ ಈ ದೃಶ್ಯವನ್ನು ಬಳಸಲಾಗಿದೆ.

ಇದನ್ನೂ ಓದಿ:Prabhas: ಆಂಧ್ರ, ತೆಲಂಗಾಣದಲ್ಲಿ ‘ಸಲಾರ್​’ ಚಿತ್ರಕ್ಕೆ 200 ಕೋಟಿ ರೂ. ಬಿಸ್ನೆಸ್​ ಮಾತುಕತೆ? ಹೆಚ್ಚಿತು ನಿರೀಕ್ಷೆ

‘ಸಲಾರ್’ ಸಿನಿಮಾವನ್ನು ಸಹ ‘ಕೆಜಿಎಫ್’ ಮಾದರಿಯಲ್ಲಿ ಎರಡು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಸಿನಿಮಾದಲ್ಲಿ ಭಾರಿ ದೊಡ್ಡ ತಾರಾಗಣವೇ ಇದೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡದ ಕೆಲವು ನಟರು, ನಾಯಕಿಯಾಗಿ ಶೃತಿ ಹಾಸನ್ ಇನ್ನೂ ಹಲವರು ನಟಿಸಿದ್ದಾರೆ. ತಂತ್ರಜ್ಞರ ತಂಡದಲ್ಲಿ ಬಹುತೇಕ ‘ಕೆಜಿಎಫ್’ ತಂತ್ರಜ್ಞರೇ ಇದ್ದಾರೆ. ಇವುಗಳ ಜೊತೆಗೆ ನಟ ಯಶ್ ಸಹ ‘ಸಲಾರ್​’ನ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಸಲಾರ್ ಸಿನಿಮಾವನ್ನು ಭಾರಿ ಬಜೆಟ್​ನಲ್ಲಿ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾದ ಟೀಸರ್ ಒಂದು ಈಗಾಗಲೇ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿಕೊಂಡಿದೆ. ಟೀಸರ್​ನಲ್ಲಿ ಡೈಲಾಗ್ ಒಂದು ಸಖತ್ ವೈರಲ್ ಆಗಿದೆ. ‘ಸಲಾರ್’ ಸಿನಿಮಾ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್