Salaar Teaser: ಚೀತಾ, ಹುಲಿಗಿಂತಲೂ ಡೇಂಜರ್ ಈ ‘ಸಲಾರ್’; ಟೀಸರ್​ನಲ್ಲಿ ದೊಡ್ಡ ಸೀಕ್ರೆಟ್ ರಿವೀಲ್​

Salaar: Ceasefire: ‘ಕೆಜಿಎಫ್ 2’ ಬಳಿಕ ಹೊಂಬಾಳೆ ಮೇಲೆ ಹಾಗೂ ಪ್ರಶಾಂತ್ ನೀಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ನಿರೀಕ್ಷೆಯನ್ನು ‘ಸಲಾರ್’ ಟೀಸರ್ ದ್ವಿಗುಣಗೊಳಿಸಿದೆ . ಚಿತ್ರದಲ್ಲಿ ಬರುವ ಸೆಟ್​ಗಳು ‘ಕೆಜಿಎಫ್’ ಸಿನಿಮಾದ ಸೆಟ್​ಗಳನ್ನು ನೆನೆಪಿಸುವಂತಿದೆ.

Salaar Teaser: ಚೀತಾ, ಹುಲಿಗಿಂತಲೂ ಡೇಂಜರ್ ಈ ‘ಸಲಾರ್’; ಟೀಸರ್​ನಲ್ಲಿ ದೊಡ್ಡ ಸೀಕ್ರೆಟ್ ರಿವೀಲ್​
ಪ್ರಭಾಸ್
Edited By:

Updated on: Jul 06, 2023 | 9:08 AM

‘ಸಲಾರ್’ ಸಿನಿಮಾ ಬಗ್ಗೆ ಹುಟ್ಟಿಕೊಂಡ ವದಂತಿಗಳು ಒಂದೆರಡಲ್ಲ. ‘ಕೆಜಿಎಫ್ 2’ ಚಿತ್ರಕ್ಕೂ ಈ ಸಿನಿಮಾಗೂ ಲಿಂಕ್ ಇದೆ ಎಂದು ಅನೇಕರು ಹೇಳಿದ್ದರು. ಈಗ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಂದು (ಜುಲೈ 6) ಮುಂಜಾನೆ 5:11ಕ್ಕೆ ಈ ಟೀಸರ್ (Salaar Teaser) ಬಿಡುಗಡೆ ಆಗಿದೆ ಅನ್ನೋದು ವಿಶೇಷ. ಈ ಟೀಸರ್ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಪ್ರಭಾಸ್ ಅವರು ರಗಡ್ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಪಾತ್ರ ಕೂಡ ಗಮನ ಸೆಳೆದಿದೆ.

‘ಕೆಜಿಎಫ್ 2’ ಬಳಿಕ ಹೊಂಬಾಳೆ ಮೇಲೆ ಹಾಗೂ ಪ್ರಶಾಂತ್ ನೀಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ನಿರೀಕ್ಷೆಯನ್ನು ದ್ವಿಗುಣಗೊಳಿಸುವಂತಿದೆ ‘ಸಲಾರ್’ ಟೀಸರ್. ಚಿತ್ರದಲ್ಲಿ ಬರುವ ಸೆಟ್​ಗಳು ‘ಕೆಜಿಎಫ್’ ಸಿನಿಮಾದ ಸೆಟ್​ಗಳನ್ನು ನೆನೆಪಿಸುವಂತಿದೆ. ಮೇಕಿಂಗ್​, ಮ್ಯೂಸಿಕ್ ವಿಚಾರದಲ್ಲೂ ‘ಕೆಜಿಎಫ್ 2’ ಚಿತ್ರಕ್ಕಿಂತ ಇದೇನು ಕಡಿಮೆ ಇಲ್ಲ. ಒಂದು ದೃಶ್ಯದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಹೀಗೆ ಬಂದು ಹಾಗೆ ಹಾದು ಹೋಗುತ್ತಾರೆ. ಹೆಚ್ಚು ವಿಚಾರವನ್ನು ಟೀಸರ್​ನಲ್ಲಿ ಬಿಟ್ಟುಕೊಟ್ಟಿಲ್ಲ.

‘ಸಲಾರ್’ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ಎಂಬುದು ಈ ಮೊದಲೇ ಸುದ್ದಿ ಆಗಿತ್ತು. ಅದು ಟೀಸರ್​ನಲ್ಲಿ ಖಚಿತವಾಗಿದೆ. ಈ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವ ವಿಚಾರವನ್ನು ತಂಡದವರು ಖಚಿತಪಡಿಸಿದ್ದಾರೆ. ಈ ಮೂಲಕ ದೊಡ್ಡ ಸೀಕ್ರೆಟ್ ರಿವೀಲ್ ಆಗಿದೆ. ಮೊದಲ ಪಾರ್ಟ್​​ಗೆ ‘ಸಲಾರ್​: ಸೀಸ್​ಫೈರ್’ ಎಂದು ಹೆಸರು ಇಡಲಾಗಿದೆ. ಎಲ್ಲಿಯೂ ‘ಕೆಜಿಎಫ್: ಚಾಪ್ಟರ್​ 2’ಗೆ ಟೀಸರ್ ಕನೆಕ್ಟ್ ಆಗಿಲ್ಲ.


YouTube video player

ಇದನ್ನೂ ಓದಿ: ‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ಗೂ, ‘ಸಲಾರ್’ ಟೀಸರ್ ರಿಲೀಸ್​ ಸಮಯಕ್ಕೂ ಇದೆ ಕನೆಕ್ಷನ್​; ಇದು ಊಹೆಗೂ ಮೀರಿದ್ದು

‘ಕೆಜಿಎಫ್ 2’ ಚಿತ್ರದ ಮೂಲಕ ಪ್ರಶಾಂತ್ ನೀಲ್ ಜನಪ್ರಿಯತೆ ಹೆಚ್ಚಿಸಿಕೊಂಡರು. ಈ ಕಾರಣಕ್ಕೂ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಈಗ ಅವರು ‘ಸಲಾರ್’ ಸಿನಿಮಾ ಮೂಲಕ ಅವರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಶ್ರುತಿ ಹಾಸನ್ ಅವರು ಈ ಚಿತ್ರದ ನಾಯಕಿ. ಪೃಥ್ವಿರಾಜ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:33 am, Thu, 6 July 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us