ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು.

ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!
ಮಹೇಶ್​ ಬಾಬು-ಸಲ್ಮಾನ್​ ಖಾನ್​- ಪೃಥ್ವಿರಾಜ್​

Updated on: Apr 11, 2021 | 5:39 PM

ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರು ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದರು. ಇವರ ಜೀವನ ಆಧರಿಸಿ ಈಗ ಮೇಜರ್​ ಹೆಸರಿನ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕಾಗಿ ಸಲ್ಮಾನ್​ ಖಾನ್​, ಮಹೇಶ್​ ಬಾಬು ಹಾಗೂ ಪೃಥ್ವಿರಾಜ್​ ಒಂದಾಗಿದ್ದಾರೆ. ಹಾಗಂತ ಇವರು ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಿಗೆ ಚಿತ್ರದ ಟೀಸರ್​ ರಿಲೀಸ್​ ಮಾಡುತ್ತಿದ್ದಾರೆ.

ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಸಿನಿಮಾ ತಂಡ ಲಾಂಚ್​ ಮಾಡುತ್ತಿದೆ. ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ ಬಾಬು ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಟೀಸರ್​ ಲಾಂಚ್ ಮಾಡುತ್ತಿದ್ದಾರೆ.

ಸಂದೀಪ್​ ಅವರು ಜೀವನದಲ್ಲಿ ಹೇಗಿದ್ದರು, ಮುಂಬೈ ದಾಳಿ ವೇಳೆ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವುದನ್ನು ಟೀಸರ್​ನಲ್ಲಿ ತೋರಿಸಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು. 2008ರಲ್ಲಿ ಮುಂಬೈ ದಾಳಿ ನಡೆದಿತ್ತು. ಈ ದಾಳೆ ವೇಳೆ ಮೇಜರ್​ ಸಂದೀಪ್​ ಹುತಾತ್ಮರಾಗಿದ್ದರು. ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಶಶಿ ಕಿರಣ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳು ಸಾಕಷ್ಟು ತೆರೆಗೆ ಬರುತ್ತಿವೆ. ಬೇರೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಪ್ಯಾನ್​ ಇಂಡಿಯಾ ಸಿನಿಮಾ ಸಹಕಾರಿ. ಸಂದೀಪ್​ ಖ್ಯಾತಿ ಇಡೀ ದೇಶಾದ್ಯಂತ ಹಬ್ಬಿದೆ. ಹೀಗಾಗಿ, ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪುವ ಆಲೋಚನೆ ನಿರ್ದೇಶಕರದ್ದು.

ಇದನ್ನೂ ಓದಿ: ಮದಗಜ; ನಿರ್ದೇಶಕ ಮಹೇಶ್​ಗೆ ರಾಬರ್ಟ್​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!

ವಕೀಲ್​ ಸಾಬ್​ ಸಿನಿಮಾಗೆ ಮಹೇಶ್​ ಬಾಬು ವಿಮರ್ಶೆ! ಪವನ್​ ಕಲ್ಯಾಣ್​ ಚಿತ್ರದಲ್ಲಿ ಪ್ರಿನ್ಸ್​ ಮೆಚ್ಚಿದ್ದೇನು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us