ಸೆಟ್ಟೇರುವ ಮೊದಲೇ ನಿಂತೇ ಹೋಯಿತು ಸಲ್ಮಾನ್​ ಖಾನ್​ ಸಿನಿಮಾ; ‘ಟೈಗರ್​’ ಹೆದರಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Mar 10, 2022 | 4:54 PM

ರವೀಂದ್ರ ಕೌಶಿಕ್​ ಭಾರತದ ಅತ್ಯುತ್ತಮ ಸ್ಪೈ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ಲ್ಯಾಕ್​ ಟೈಗರ್​ ಎಂದೇ ಖ್ಯಾತಿ ಪಡೆದುಕೊಂಡವರು. ಈ ಸಿನಿಮಾ ಸ್ಕ್ರಿಪ್ಟ್​ಗಾಗಿ ರಾಜ್ ​ಕುಮಾರ್ ಬರೋಬ್ಬರಿ 5 ವರ್ಷ ಕೆಲಸ ಮಾಡಿದ್ದರು.

ಸೆಟ್ಟೇರುವ ಮೊದಲೇ ನಿಂತೇ ಹೋಯಿತು ಸಲ್ಮಾನ್​ ಖಾನ್​ ಸಿನಿಮಾ; ‘ಟೈಗರ್​’ ಹೆದರಿದ್ದೇಕೆ?
ಸಲ್ಮಾನ್ ಖಾನ್
Follow us on

ಸಲ್ಮಾನ್​ ಖಾನ್​ (Salman Khan) ಕಾಲ್​ಶೀಟ್​ ಸಿಗೋದು ಸುಲಭದ ಮಾತಲ್ಲ. ಒಮ್ಮೆ ಕಾಲ್​ಶೀಟ್​ ಸಿಕ್ಕ ನಂತರದಲ್ಲಿ ನಿರ್ಮಾಪಕರು, ನಿರ್ದೇಶಕರು ಕೈ ಕಟ್ಟಿ ಕೂರುವುದಿಲ್ಲ. ಸಿನಿಮಾಗೆ ಏನೆಲ್ಲ ತಯಾರಿ ಬೇಕೋ ಅದೆಲ್ಲವನ್ನೂ ಮಾಡಿಕೊಳ್ಳುತ್ತಾರೆ. ನಿರ್ದೇಶಕ ರಾಜ್​ ಕುಮಾರ್​ ಗುಪ್ತಾ ಅವರಿಗೂ ಸಲ್ಲು ಕಾಲ್​ಶೀಟ್​ ಸಿಕ್ಕಿತ್ತು. ಖ್ಯಾತ ರಾ ಏಜೆಂಟ್ರವೀಂದ್ರ ಕೌಶಿಕ್ (Ravindra Kaushik)​ ಕುರಿತು ಬಯೋಪಿಕ್​ ಮಾಡಲು ರಾಜ್​ ಕುಮಾರ್​ ಗುಪ್ತಾ (Raj Kumar Gupta)  ರೆಡಿ ಆಗಿದ್ದರು. ಇದರಲ್ಲಿ ನಟಿಸೋಕೆ ಸಲ್ಲು ಕೂಡ ಒಪ್ಪಿದ್ದರು. ಆದರೆ, ಈಗ ಸಿನಿಮಾ ಸೆಟ್ಟೇರುವ ಮೊದಲೇ ನಿಂತೇ ಹೋಗಿದೆ.

ರವೀಂದ್ರ ಕೌಶಿಕ್​ ಭಾರತದ ಅತ್ಯುತ್ತಮ ಸ್ಪೈ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ಲ್ಯಾಕ್​ ಟೈಗರ್​ ಎಂದೇ ಖ್ಯಾತಿ ಪಡೆದುಕೊಂಡವರು. ಈ ಸಿನಿಮಾ ಸ್ಕ್ರಿಪ್ಟ್​ಗಾಗಿ ರಾಜ್ ​ಕುಮಾರ್ ಬರೋಬ್ಬರಿ 5 ವರ್ಷ ಕೆಲಸ ಮಾಡಿದ್ದರು. ಈ ಚಿತ್ರ ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಇರಲಿದೆ ಎನ್ನಲಾಗಿತ್ತು. ಇನ್ನು, ಸಿನಿಮಾಗೆ ‘ಬ್ಲ್ಯಾಕ್​ ಟೈಗರ್’​ ಎಂದೇ  ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಸಿನಿಮಾ ಸೆಟ್ಟೇರುತ್ತಿಲ್ಲ.

ರವೀಂದ್ರ ಕೌಶಿಕ್​ ಸಹೋದರಿ ಅಲ್ವಿರಾ ಅಗ್ನಿಹೋತ್ರಿ ಮತ್ತು ಅವರ ಭಾವ ಅತುಲ್​ ಅಗ್ನಿಹೋತ್ರಿ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ‘ಕಭಿ ಈದ್​ ಕಭಿ ದಿವಾಲಿ’ ಚಿತ್ರದ ಶೂಟಿಂಗ್​ ಬಳಿಕ ಸಲ್ಮಾನ್​ ಈ ಸಿನಿಮಾದಲ್ಲಿ ಬ್ಯುಸಿ ಆಗಬೇಕಿತ್ತು. ಆದರೆ, ಈ ಪ್ರಾಜೆಕ್ಟ್​ ನಿಂತಿದೆ. ಈಗಾಗಲೇ ಸಲ್ಮಾನ್​ ಖಾನ್ ‘ಏಕ್​ ಥಾ ಟೈಗರ್’​, ‘ಟೈಗರ್​ ಜಿಂದಾ ಹೈ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟೈಗರ್​ 3’ ಚಿತ್ರದ ಶೂಟಿಂಗ್​ ಪ್ರಗತಿಯಲ್ಲಿದೆ. ಶೀರ್ಷಿಕೆ ವಿಚಾರದಲ್ಲಿ, ಕಾನ್ಸೆಪ್ಟ್​ ವಿಚಾರದಲ್ಲಿ ‘ಟೈಗರ್​ 3’ ಹಾಗೂ ‘ಬ್ಲ್ಯಾಕ್​ ಟೈಗರ್​’ ನಡುವೆ ಕ್ಲ್ಯಾಶ್​ ಏರ್ಪಡಬಹುದು. ಹೀಗಾಗಿ, ನಿರ್ದೇಶಕ ರಾಜ್​ ಕುಮಾರ್ ಹಾಗೂ ಸಲ್ಮಾನ್​ ಇಬ್ಬರೂ ಸೇರಿ ಸಿನಿಮಾ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

‘ಟೈಗರ್​ 3’ ರಿಲೀಸ್​ ದಿನಾಂಕ ಘೋಷಣೆ

ಸಲ್ಮಾನ್​ ಖಾನ್​ ಅವರು ‘ಈದ್​’ ಹಬ್ಬದಂದು ತಮ್ಮ ನಟನೆಯ ಸಿನಿಮಾ ತೆರೆಗೆ ತರೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಹಲವು ಸಿನಿಮಾಗಳು ಈ ವಿಶೇಷ ದಿನದಂದು ತೆರೆಗೆ ಬಂದಿದೆ. ಈಗ ‘ಟೈಗರ್​ 3’ ಕೂಡ ಈದ್ ಹಬ್ಬದ ಪ್ರಯುಕ್ತ 2023ರ ಏಪ್ರಿಲ್​ 21ರಂದು ರಿಲೀಸ್​ ಆಗುತ್ತಿದೆ. ಅಂದರೆ, ಈ ಸಿನಿಮಾ ತೆರೆಕಾಣೋಕೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ವಿಶೇಷ ವಿಡಿಯೋ ಮೂಲಕ ತಂಡ ಈ ಘೋಷಣೆ ಮಾಡಿದೆ.

2012ರಲ್ಲಿ ‘ಏಕ್ ಥಾ ಟೈಗರ್​’ ತೆರೆಗೆ ಬಂತು. ಈ ಸಿನಿಮಾ ಸೂಪರ್​ ಹಿಟ್​ ಆಯಿತು. ಕಬೀರ್​ ಖಾನ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದರ ಮುಂದಿನ ಭಾಗವಾಗಿ 2017ರಲ್ಲಿ ‘ಟೈಗರ್​ ಜಿಂದಾ ಹೈ’ ಚಿತ್ರ ರಿಲೀಸ್​ ಆಯಿತು. ಈ ಚಿತ್ರಕ್ಕೆ ಅಲಿ ಅಬ್ಬಾಸ್​ ಜಫರ್​ ಆ್ಯಕ್ಷನ್​ ಕಟ್​ ಹೇಳಿದ್ದರು. ಈಗ ‘ಟೈಗರ್​ 3’ಗೆ ಮನೀಶ್​ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲಿನ ಎರಡು ಪಾರ್ಟ್​​ಗಳನ್ನು ನಿರ್ಮಾಣ ಮಾಡಿದ್ದ ಆದಿತ್ಯ ಚೋಪ್ರಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?