ಮಹಿಳೆ ಮೇಲೆ ಎರಡು ವರ್ಷ ಅತ್ಯಾಚಾರ; ಖ್ಯಾತ ನಟನ ಸಿನಿಮಾ ಸೆಟ್ನಿಂದ ನಿರ್ದೇಶಕ ಅರೆಸ್ಟ್
ಮಹಿಳೆ ಒಬ್ಬರು ಕಳೆದ ವಾರ ಕೃಷ್ಣ ವಿರುದ್ಧ ದೂರು ದಾಖಲು ಮಾಡಿದ್ದರು. ತನ್ನ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಮಾಡಿರುವುದಾಗಿ ಆರೋಪ ಮಾಡಿದ್ದರು. ಈ ದೂರನ್ನು ಆಧರಿಸಿ ಕೃಷ್ಣ ಅವರನ್ನು ಬಂಧಿಸಲಾಗಿದೆ.

ಮಲಯಾಳಂ ಚಿತ್ರರಂಗಕ್ಕೆ (Malayalam Cinema Industry)ಈಗತಾನೇ ಕಾಲಿಡುತ್ತಿದ್ದ ನಿರ್ದೇಶಕ ಲಿಜು ಕೃಷ್ಣ (Liju Krishna) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಅವರನ್ನು ಪೊಲೀಸರ ಬಂಧಿಸಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಳಿ (Nivin Pauly) ಹಾಗೂ ಮಂಜು ವಾರಿಯರ್ ಒಟ್ಟಾಗಿ ನಟಿಸುತ್ತಿರುವ ‘ಪಡವೆಟ್ಟು’ ಸಿನಿಮಾಗೆ ಕೃಷ್ಣ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಕಣ್ಣೂರಿನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿರುವಾಗಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೃಷ್ಣ ಅವರನ್ನು ಅರೆಸ್ಟ್ ಮಾಡಿ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ. ಈಗ ಕೋರ್ಟ್ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಹಿಳೆ ಒಬ್ಬರು ಕಳೆದ ವಾರ ಕೃಷ್ಣ ವಿರುದ್ಧ ದೂರು ದಾಖಲು ಮಾಡಿದ್ದರು. ತನ್ನ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಮಾಡಿರುವುದಾಗಿ ಆರೋಪ ಮಾಡಿದ್ದರು. ಈ ದೂರನ್ನು ಆಧರಿಸಿ ಕೃಷ್ಣ ಅವರನ್ನು ಬಂಧಿಸಲಾಗಿದೆ. ‘ಕಳೆದ ಎರಡು ವರ್ಷಗಳಲ್ಲಿ ನಾನಾ ಪ್ರದೇಶಗಳಲ್ಲಿ ನನ್ನ ಮೇಲೆ ಕೃಷ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಲಾಗಿದೆ. ಇದರಿಂದ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಉಂಟಾಗಿದೆ’ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.
‘ಕೃಷ್ಣನಿಂದ ನಾನು ಗರ್ಭಿಣಿ ಆದೆ. ನಂತರ ಗರ್ಭಪಾತ ಮಾಡಿಸಿಕೊಂಡೆ. ಇದರಿಂದ ನಾನು ನಿರಂತರ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾದೆ. ಇದರಿಂದ ನನ್ನ ಬದುಕು ನಾಶವಾಯಿತು’ ಎಂದು ಅವರು ದೂರಿದ್ದಾರೆ.
‘ಕೃಷ್ಣ ನನಗೆ ಎರಡು ವರ್ಷಗಳಿಂದ ದೈಹಿಕ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಾನು ಇದನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದರು. ನನಗಾದ ಅನ್ಯಾದ ಬಗ್ಗೆ ಚಿತ್ರ ತಂಡದವರ ಬಳಿ ಹೇಳಿಕೊಂಡೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಸಂತ್ರಸ್ತೆ ಹೇಳಿದ್ದಾರೆ.
‘ಈ ಪ್ರಕರಣದಲ್ಲಿ ತೀರ್ಪು ಬರುವವರೆಗೆ ಅವರು ಸಿನಿಮಾ ಕೆಲಸಗಳಲ್ಲಿ ತೊಡಗದಂತೆ ನಿರ್ಬಂಧ ಹೇರಬೇಕು’ ಎಂದು ಸಂತ್ರಸ್ತೆ ಕೋರಿದ್ದಾರೆ. ಸದ್ಯ, ಈ ಘಟನೆ ಬೆನ್ನಲ್ಲೇ ‘ಪಡವೆಟ್ಟು’ ಸಿನಿಮಾದ ಶೂಟಿಂಗ್ ನಿಂತಿದೆ. ಈ ಸಿನಿಮಾವನ್ನು ಸನ್ನಿ ವಾಯ್ನೆ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಘಟನೆ ನಂತರದಲ್ಲಿ ನವೀನ್ ಪೌಳಿ ಅವರು ಸಿನಿಮಾದಲ್ಲಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
ದುಬೈನಲ್ಲಿ ಅಕ್ಕಿನೇನಿ ನಾಗಾರ್ಜುನ ಜತೆ ಇರೋ ಈ ಹುಡುಗಿ ಯಾರು? ವೈರಲ್ ಆಯ್ತು ಫೋಟೋ
Published On - 7:43 pm, Thu, 10 March 22




