‘ಟೈಗರ್​ 3’ ರಿಲೀಸ್​ ದಿನಾಂಕ ಘೋಷಣೆ; ಸಲ್ಮಾನ್​ ಸಿನಿಮಾಗಾಗಿ ಕಾಯಬೇಕು ಇನ್ನೂ ಒಂದು ವರ್ಷ

‘ಟೈಗರ್​ 3’ ರಿಲೀಸ್​ ದಿನಾಂಕ ಘೋಷಣೆ; ಸಲ್ಮಾನ್​ ಸಿನಿಮಾಗಾಗಿ ಕಾಯಬೇಕು ಇನ್ನೂ ಒಂದು ವರ್ಷ
ಕತ್ರಿನಾ-ಸಲ್ಮಾನ್

ಸಲ್ಮಾನ್​ ಖಾನ್​ ಅವರು ‘ಈದ್​’ ಹಬ್ಬದಂದು ತಮ್ಮ ನಟನೆಯ ಸಿನಿಮಾ ತೆರೆಗೆ ತರೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಹಲವು ಸಿನಿಮಾಗಳು ಈ ವಿಶೇಷ ದಿನದಂದು ತೆರೆಗೆ ಬಂದಿದೆ.

TV9kannada Web Team

| Edited By: Rajesh Duggumane

Mar 04, 2022 | 3:41 PM

ಸಲ್ಮಾನ್​ ಖಾನ್​ (Salman Khan) ಹಾಗೂ ಕತ್ರಿನಾ ಕೈಫ್ (Katrina Kaif)​ ನಟನೆಯ ‘ಟೈಗರ್​ 3’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಈ ಸರಣಿಯಲ್ಲಿ ತೆರೆಗೆ ಬಂದ ಎರಡೂ ಸಿನಿಮಾಗಳು ಹಿಟ್​ ಆಗಿವೆ. ಹೀಗಾಗಿ, ‘ಟೈಗರ್​ 3’ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಚಿತ್ರದಲ್ಲಿ ಆ್ಯಕ್ಷನ್​ ದೃಶ್ಯಗಳು ಭರಪೂರವಾಗಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ‘ಟೈಗರ್ 3’ ಸಿನಿಮಾ (Tiger 3 Movie) ರಿಲೀಸ್​ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಬೇಸರದ ಸಂಗತಿ ಎಂದರೆ ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಇನ್ನೂ ಒಂದು ವರ್ಷ ಕಾಯಲೇಬೇಕಿದೆ.

ಸಲ್ಮಾನ್​ ಖಾನ್​ ಅವರು ‘ಈದ್​’ ಹಬ್ಬದಂದು ತಮ್ಮ ನಟನೆಯ ಸಿನಿಮಾ ತೆರೆಗೆ ತರೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಹಲವು ಸಿನಿಮಾಗಳು ಈ ವಿಶೇಷ ದಿನದಂದು ತೆರೆಗೆ ಬಂದಿದೆ. ಈಗ ‘ಟೈಗರ್​ 3’ ಕೂಡ ಈದ್ ಹಬ್ಬದ ಪ್ರಯುಕ್ತ 2023ರ ಏಪ್ರಿಲ್​ 21ರಂದು ರಿಲೀಸ್​ ಆಗುತ್ತಿದೆ. ಅಂದರೆ, ಈ ಸಿನಿಮಾ ತೆರೆಕಾಣೋಕೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ವಿಶೇಷ ವಿಡಿಯೋ ಮೂಲಕ ತಂಡ ಈ ಘೋಷಣೆ ಮಾಡಿದೆ.

2012ರಲ್ಲಿ ‘ಏಕ್ ಥಾ ಟೈಗರ್​’ ತೆರೆಗೆ ಬಂತು. ಈ ಸಿನಿಮಾ ಸೂಪರ್​ ಹಿಟ್​ ಆಯಿತು. ಕಬೀರ್​ ಖಾನ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದರ ಮುಂದಿನ ಭಾಗವಾಗಿ 2017ರಲ್ಲಿ ‘ಟೈಗರ್​ ಜಿಂದಾ ಹೈ’ ಚಿತ್ರ ರಿಲೀಸ್​ ಆಯಿತು. ಈ ಚಿತ್ರಕ್ಕೆ ಅಲಿ ಅಬ್ಬಾಸ್​ ಜಫರ್​ ಆ್ಯಕ್ಷನ್​ ಕಟ್​ ಹೇಳಿದ್ದರು. ಈಗ ‘ಟೈಗರ್​ 3’ಗೆ ಮನೀಶ್​ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲಿನ ಎರಡು ಪಾರ್ಟ್​​ಗಳನ್ನು ನಿರ್ಮಾಣ ಮಾಡಿದ್ದ ಆದಿತ್ಯ ಚೋಪ್ರಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ನಿಜ ಜೀವನದಲ್ಲಿ ಕತ್ರಿನಾ ಹಾಗೂ ಸಲ್ಮಾನ್​ ಖಾನ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕ ಇವರ ಪ್ರೀತಿ ಮದುವೆವರೆಗೆ ಹೋಗಲೇ ಇಲ್ಲ. ಆದರೆ, ಕತ್ರಿನಾ ಹಾಗೂ ಸಲ್ಲು ನಡುವೆ ಒಳ್ಳೆಯ ಗೆಳೆತನವಿದೆ. ಕತ್ರಿನಾ ಕೈಫ್​ಗೆ ಈಗ ನಟ ವಿಕ್ಕಿ ಕೌಶಲ್​ ಜತೆ ವಿವಾಹ ನೆರವೇರಿದೆ. ಮದುವೆ ನಂತರವೂ ಚಿತ್ರರಂಗದಲ್ಲಿ ಕತ್ರಿನಾ ಆ್ಯಕ್ಟೀವ್​ ಆಗಿದ್ದಾರೆ.

ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಬೇಟೆಯಾಡಿದ್ದ ಕೃಷ್ಣ ಮೃಗದ ನೆನಪಲ್ಲಿ ನಿರ್ಮಾಣ ಆಗಲಿದೆ ಬೃಹತ್​ ಸ್ಮಾರಕ 

Salman Khan: ಸೂಪರ್ ಸ್ಟಾರ್ ಆದರೂ ಅಮ್ಮನ ಮಡಿಲಲ್ಲಿ ಇನ್ನೂ ಪುಟ್ಟ ಮಗು; ಸಲ್ಮಾನ್ ಖಾನ್ ಫೋಟೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada