Samantha Akkineni: ಕೋರ್ಟ್​ ಮೆಟ್ಟಿಲೇರಲು ಮುಂದಾದ ಸಮಂತಾ ಅಕ್ಕಿನೇನಿ; ಕಾರಣವೇನು?

ಸಮಂತಾ ಅಕ್ಕಿನೇನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸರ್​ನೇಮ್​ ತೆಗೆದು ಹಾಕುವ ಮೂಲಕ ವಿಚ್ಛೇದ ವದಂತಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಇದಾದ ನಂತರ ಅವರು ನಡೆದುಕೊಂಡ ರೀತಿ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

Samantha Akkineni: ಕೋರ್ಟ್​ ಮೆಟ್ಟಿಲೇರಲು ಮುಂದಾದ ಸಮಂತಾ ಅಕ್ಕಿನೇನಿ; ಕಾರಣವೇನು?
ಸಮಂತಾ-ನಾಗ ಚೈತನ್ಯ
Updated By: ರಾಜೇಶ್ ದುಗ್ಗುಮನೆ

Updated on: Sep 23, 2021 | 9:21 PM

ನಟಿ ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಡಿವೋರ್ಸ್​ ವಿಚಾರ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರವಾಗುತ್ತಿಲ್ಲ. ಅಕ್ಕಿನೇನಿ ಕುಟುಂಬದವರು ಎಷ್ಟೇ ಪ್ರಯತ್ನಿಸಿದರೂ ಈ ಗಾಸಿಪ್​ಗೆ ಬ್ರೇಕ್​ ಹಾಕೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಸಮಂತಾ ಇದಕ್ಕೆ ಬ್ರೇಕ್​ ಹಾಕೋಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಕೋರ್ಟ್​ ಮೆಟ್ಟಿಲೇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತು ಮೂಲಗಳಿಂದ ಕೇಳಿ ಬಂದಿದೆ.

ಸಮಂತಾ ಅಕ್ಕಿನೇನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸರ್​ನೇಮ್​ ತೆಗೆದು ಹಾಕುವ ಮೂಲಕ ವಿಚ್ಛೇದ ವದಂತಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಇದಾದ ನಂತರ ಅವರು ನಡೆದುಕೊಂಡ ರೀತಿ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು. ಈ ಕಾರಣಕ್ಕೆ ಅವರ ವಿಚ್ಛೇದನ ವಿಚಾರ ಮುನ್ನೆಲೆಗೆ ಬರುತ್ತಿದೆ. ಸಮಂತಾ ಸಾರ್ವಜನಿಕವಾಗಿ ಎದುರಾದಾಗೆಲ್ಲ ಅವರಿಗೆ ಈ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಅವು ಸಂಪೂರ್ಣವಾಗಿ ಬ್ರೇಕ್​ ಹಾಕೋಕೆ ನಿರ್ಧರಿಸಿದ್ದಾರೆ.

ಕೋರ್ಟ್​ ಮೆಟ್ಟಿಲೇರಿ ತಡೆಯಾಜ್ಞೆ​ ಆರ್ಡರ್​ ತೆಗೆದುಕೊಂಡು ಬರಬಹುದು. ಹಾಗಾದರೆ, ನೆಗೆಟಿವ್​ ವಿಚಾರಗಳನ್ನು ಸುದ್ದಿ ವಾಹಿನಗಳು ಪ್ರಕಟಿಸುವಂತಿಲ್ಲ. ಸಮಂತಾ ಕೂಡ ಇದೇ ಪ್ಲ್ಯಾನ್​ ರೂಪಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಾಧ್ಯಮಗಳಲ್ಲಿ ಬಿತ್ತರ ಆಗುವ ವರದಿಗೆ ಅವರು ಬ್ರೇಕ್​ ಹಾಕೋಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ ಅಕ್ಕಿನೇನಿಗೆ ಈ ವಿಚಾರದಲ್ಲಿ ನಾಗಚೈತನ್ಯ ಕಿವಿಮಾತೊಂದನ್ನು ಹೇಳಿದ್ದಾರೆ. ‘ಸೆಲೆಬ್ರಿಟಿಗಳ ಲೈಫ್​ ಎಂದಮೇಲೆ ಗಾಸಿಪ್​ಗಳು ಸಹಜ. ಹೊಸ ವದಂತಿ ಹುಟ್ಟಿಕೊಂಡ ನಂತರ ಈ ವದಂತಿ ಸಾಯುತ್ತದೆ. ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ’ ಎಂದು ಸಮಂತಾಗೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಈ ವಿಚಾರ ಕೂಡ ಚರ್ಚೆಯಲ್ಲಿದೆ.

ಸಮಂತಾ ಅಕ್ಕಿನೇನಿ ಅವರಿಗೆ ಸಿಗುವ ಜೀವನಾಂಶದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಸಮಂತಾ ಅವರು ಅಂದಾಜು 50 ಕೋಟಿ ರೂ. ಹಣವನ್ನು ಜೀವನಾಂಶವಾಗಿ ಪಡೆಯಲಿದ್ದಾರೆ. ಅವರು ಬಹುಬೇಡಿಕೆಯ ನಟಿ ಆಗಿರುವುದರಿಂದ ವಿಚ್ಛೇದನದ ಬಳಿಕ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ಗಳಿಂದಲೂ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿದೆ. ಈ ವರ್ಷ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸರಣಿ ಯಶಸ್ಸಿನ ನಂತರ ಸಮಂತಾ ಇಮೇಜ್​ ಬದಲಾಗಿದೆ.

ಇದನ್ನೂ ಓದಿ: ದೇವಸ್ಥಾನದಲ್ಲೂ ಡಿವೋರ್ಸ್​ ವಿಚಾರ; ಸಿಟ್ಟಾದ ಸಮಂತಾ ರಿಯಾಕ್ಷನ್​ ನೋಡಿ ಚಪ್ಪಾಳೆ ಹೊಡೆದ ಅಭಿಮಾನಿಗಳು

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

Published On - 8:58 pm, Thu, 23 September 21