ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಇದೆ ರಾಜಕೀಯ ನಂಟು?

Samantha Ruth Prabhu: ಸಮಂತಾ-ನಾಗ ಚೈತನ್ಯ ವಿಚ್ಛೇದನದ ಬಗ್ಗೆ ತೆಲಂಗಾಣ ಸಚಿವೆ ನೀಡಿರುವ ಹೇಳಿಕೆಯಿಂದ ಇವರಿಬ್ಬರ ವಿಚ್ಛೇದನದ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನಕ್ಕೆ ರಾಜಕೀಯ ನಂಟು ಇದೆ ಎನ್ನಲಾಗುತ್ತಿದೆ.

ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಇದೆ ರಾಜಕೀಯ ನಂಟು?
Follow us
|

Updated on: Oct 03, 2024 | 3:54 PM

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದು ಮೂರು ವರ್ಷಕ್ಕೂ ಹೆಚ್ಚು ಸಮಯವಾಯ್ತು. ಆದರೆ ಈಗಲೂ ಸಹ ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇದನದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಿನ್ನೆ, ತೆಲಂಗಾಣ ಸಚಿವೆಯೊಬ್ಬರು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಬಗ್ಗೆ ನೀಡಿರುವ ಕೀಳು ಹೇಳಿಕೆಯಿಂದ ಇಬ್ಬರ ವಿಚ್ಛೇದನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ರಾಜಕೀಯ ವ್ಯಕ್ತಿಯೊಬ್ಬರು, ಸಚಿವೆಯೊಬ್ಬರು ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇದನದ ಬಗ್ಗೆ ಮಾತನಾಡಿದ್ದು ಏಕೆ?

ಅಸಲಿಗೆ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಘೋಷಿಸಿದಾಗ ಯಾವ ಕಾರಣಕ್ಕೆ ಈ ಜೋಡಿ ದೂರಾಗುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಅವರು ಅದನ್ನು ಬಹಿರಂಗ ಗೊಳಿಸಿರಲೂ ಇಲ್ಲ. ಅವರ ಹತ್ತಿರದವರಿಗೂ ಸಹ ಈ ವಿಷಯ ಗೊತ್ತಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಮಂತಾರನ್ನೇ ಈ ವಿಷಯಕ್ಕೆ ದೂಷಿಸಲಾಗಿತ್ತು. ಸಮಂತಾಗೆ ಮಗು ಬೇಕಿರಲಿಲ್ಲವೆಂದು, ಸಮಂತಾಗೆ ಫಿಟ್​ನೆಸ್ ಟ್ರೈನರ್ ಒಬ್ಬನೊಂದಿಗೆ ಸಂಬಂಧ ಇದೆ ಎಂದು, ಸಮಂತಾ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿತೆಂದು ಇನ್ನೂ ಹಲವು ವಿಷಯಗಳು ಚರ್ಚೆ ಆಗಿದ್ದವು. ಆದರೆ ಅವಲ್ಲ ಸುಳ್ಳೆಂದು ಸ್ವತಃ ಸಮಂತಾ ಹೇಳಿದ್ದರು.

ಇದನ್ನೂ ಓದಿ:ಎಲ್ಲರೂ ಛೀಮಾರಿ ಹಾಕಿದ ಬಳಿಕ ಸಮಂತಾ ಬಳಿ ಕ್ಷಮೆ ಕೇಳಿದ ಸುರೇಖಾ

ಆದರೆ ವರ್ಷದ ಹಿಂದೆ ತೆಲಂಗಾಣದಲ್ಲಿ ಚುನಾವಣೆ ನಡೆದು ಸರ್ಕಾರ ಬದಲಾವಣೆ ಆಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊರಬಂದ ಹಗರಣದಲ್ಲಿ ಮತ್ತೆ ಸಮಂತಾ ನಾಗ ಚೈತನ್ಯ ವಿಚ್ಛೇದನ ವಿಚಾರ ಚರ್ಚೆಗೆ ಬಂತು. ಅದುವೇ ಫೋನ್ ಟ್ಯಾಪಿಂಗ್ ಹಗರಣ. ಈ ಹಿಂದಿನ ಕೆಸಿಆರ್ ಸರ್ಕಾರ ಇದ್ದಾಗ ಕೆಲ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಫೋನ್ ಟ್ಯಾಪಿಂಗ್ ಮಾಡಿರುವ ವಿಚಾರ ರಾಜಕೀಯ ಕೋಲಾಹಲವನ್ನೇ ತೆಲಂಗಾಣದಲ್ಲಿ ಸೃಷ್ಟಿಸಿತು. ಇಸ್ರೇಲ್​ನಿಂದ ಅತ್ಯಾಧುನಿಕ ಡಿವೈಸ್ ಒಂದನ್ನು ತರಿಸಿ, ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳ ಫೋನ್ ಟ್ಯಾಪಿಂಗ್ ಮಾಡಿ ಅವರನ್ನು ಬ್ಲಾಕ್​ಮೇಲ್ ಮಾಡಲಾಗಿತ್ತು ಎಂಬ ಅಂಶ ಹೊರಗೆ ಬಂತು.

ಅದೇ ಪ್ರಕರಣದಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಹೆಸರು ಸಹ ಕೇಳಿ ಬಂತು. ಮೂಲಗಳ ಪ್ರಕಾರ, ನಾಗ ಚೈತನ್ಯರ ಫೋನ್ ಟ್ಯಾಪ್ ಮಾಡಿಸಿದ್ದ ಸಮಂತಾ, ನಾಗ್​ ಯುವತಿಯೊಬ್ಬರೊಟ್ಟಿಗೆ ಆತ್ಮೀಯವಾಗಿರುವುದು ಪತ್ತೆ ಹಚ್ಚಿ ನಾಗ್​ಗೆ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತು. ಈ ಪ್ರಕರಣದಲ್ಲಿ ಸಮಂತಾರ ವಿಚಾರಣೆಯನ್ನು ಸಹ ಎಸ್​ಐಟಿ ಮಾಡಲಿದೆ ಎನ್ನಲಾಗಿತ್ತು. ಆದರೆ ಹಾಗೆ ನಡೆಯಲಿಲ್ಲ. ಈ ಫೋನ್ ಟ್ಯಾಪಿಂಗ್ ಹಿಂದೆ ಆಗ ಸಚಿವರಾಗಿದ್ದ ಕೆಟಿಆರ್ ಹೆಸರು ತುಸು ಗಟ್ಟಿಯಾಗಿಯೇ ಕೇಳಿ ಬಂದಿತ್ತು.

ಈಗ, ಕೊಂಡ ಸುರೇಖ ಹೇಳಿಕೆಯಿಂದ ಮತ್ತೊಮ್ಮೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ವಿವಾದ ಮುನ್ನೆಲೆಗೆ ಬಂದಿದೆ. ಗಮನಿಸಬೇಕಾದ ಅಂಶವೆಂದರೆ ಕೆಸಿಆರ್ ಸರ್ಕಾರದ ಅವಧಿಯಲ್ಲಿಯೂ ಸಹ ಎನ್ ಕನ್ವೆನ್ಷನ್ ಸೆಂಟರ್ ವಿವಾದದ ಸುದ್ದಿಯಾಗಿತ್ತು. ಆದರೆ ಆಗ ಅದನ್ನು ಬೀಳಿಸಿರಲಿಲ್ಲ. ಈಗ ರೇವಂತ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಬೀಳಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ