AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಛೀಮಾರಿ ಹಾಕಿದ ಬಳಿಕ ಸಮಂತಾ ಬಳಿ ಕ್ಷಮೆ ಕೇಳಿದ ಸುರೇಖಾ

ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರು ಬಾಯಿ ಹರಿಬಿಟ್ಟಿದ್ದಾರೆ. ಬಿಆರ್​ಎಸ್​ ಅಧ್ಯಕ್ಷ ಕೆಟಿ ರಾಮ್ ರಾವ್ ಅವರು ಸಮಂತಾನ ತಮ್ಮ ಬಳಿ ಕಳಿಸೋಕೆ ಅಕ್ಕಿನೇನಿ ನಾಗಾರ್ಜುನ ಬಳಿ ಹೇಳಿದ್ದರು ಎಂದು ಸುರೇಖಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಎಲ್ಲರೂ ಸಿಡಿದೆದ್ದಿದ್ದಾರೆ. ಅವರ ಬಳಿ ಕ್ಷಮೆಗೆ ಆಗ್ರಹಿಸಲಾಗಿತ್ತು. ಕೊನೆಗೂ ಅವರು ಕ್ಷಮೆ ಕೇಳಿದ್ದಾರೆ.

ಎಲ್ಲರೂ ಛೀಮಾರಿ ಹಾಕಿದ ಬಳಿಕ ಸಮಂತಾ ಬಳಿ ಕ್ಷಮೆ ಕೇಳಿದ ಸುರೇಖಾ
ರಾಜೇಶ್ ದುಗ್ಗುಮನೆ
|

Updated on: Oct 03, 2024 | 11:40 AM

Share

ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರು ನಟಿ ಸಮಂತಾ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೇಳಿದ್ದಾರೆ. ಅವರು ತಮ್ಮ ಉದ್ದೇಶವನ್ನು ಹೇಳಿ ಮಾತನ್ನು ಹಿಂಪಡೆದಿದ್ದಾರೆ. ಸಮಂತಾ ಬಗ್ಗೆ ನೀಡಿದ ಅಶ್ಲೀಲ ಕಮೆಂಟ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಜೂನಿಯರ್ ಎನ್​ಟಿಆರ್, ನಾಗ ಚೈತನ್ಯ ಸೇರಿದಂತೆ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು. ಈಗ ಈ ಸಂಬಂಧ ಸುರೇಖಾ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.

‘ಎನ್​ ಕನ್ವೆಷನ್ ಹಾಲ್ ಉಳಿಸಿಕೊಳ್ಳಲು ಸಮಂತಾ ಅವರನ್ನು ಕಳುಹಿಸುವಂತೆ ನಾಗಾರ್ಜುನ ಬಳಿ ಕೆಟಿಆರ್ ಕೇಳಿದ್ದರು. ಆ ಬಳಿಕ ನಾಗಾರ್ಜುನ ಅವರು ಸಮಂತಾ ಬಳಿ ಹೋಗಿ ಈ ಡೀಲ್​ ಬಗ್ಗೆ ಮಾತನಾಡಿದ್ದರು. ಆದರೆ, ಇದಕ್ಕೆ ಒಪ್ಪದ ಸಮಂತಾ ಪತಿ ನಾಗ ಚೈತನ್ಯ ಇಂದ ವಿಚ್ಛೇದನ ಪಡೆದರು’ ಎಂದು ಸುರೇಖಾ ಹೇಳಿಕೆ ನೀಡಿದ್ದರು. ಜೊತೆಗೆ ನಟಿಯರ ಫೋನ್​ನ ಕೆಟಿ ರಾಮ್ ರಾವ್ ಟ್ಯಾಪ್ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು ಎಂದು ಕೂಡ ಹೇಳಿದ್ದರು.

‘ಮಹಿಳೆಯರ ಬಗ್ಗೆ ಆ ನಾಯಕ ಹೊಂದಿರುವ ಕೀಳು ಮನೋಭಾವವನ್ನು ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತೇ ಹೊರತು, ಸಮಂತಾ ಅವರ ಭಾವನೆಗೆ ದಕ್ಕೆ ತರೋದಲ್ಲ. ನೀನು ಸ್ವಶಕ್ತಿಯಿಂದ ಬೆಳೆದು ಬಂದ ಬಗ್ಗೆ ನನಗೆ ಅಭಿಮಾನ ಇದೆ. ಅದು ಆದರ್ಶವೂ ಹೌದು’ ಎಂದು ಕೊಂಡಾ ಸುರೇಖಾ ಟ್ವೀಟ್ ಮಾಡಿದ್ದಾರೆ.

‘ನನ್ನ ಕಾಮೆಂಟ್‌ಗಳಿಂದ ನಿಮಗೆ ಹಾಗೂ ನಿಮ್ಮ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ನನ್ನ ಕಾಮೆಂಟ್‌ಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಅನ್ಯಥಾ ಭಾವಿಸಬೇಡಿ’ ಎಂದು ಸುರೇಖಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಾಜಕೀಯ ಕೆಸರೆರೆಚಾಟದಿಂದ ನನ್ನ ದೂರ ಇಡಿ’; ಸುರೇಖಾ ಹೇಳಿಕೆಗೆ ಸಮಂತಾ ಖಡಕ್ ಉತ್ತರ

ಸುರೇಖಾ ಮೊದಲು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಮಂತಾ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದರು. ‘ರಾಜಕೀಯ ಕೆಸರೆರೆಚಾಟದಲ್ಲಿ ನನ್ನ ಮಧ್ಯೆ ಎಳೆದು ತರಬೇಡಿ’ ಎಂದು ಅವರು ಕೋರಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More