‘ರಾಜಕೀಯ ಕೆಸರೆರೆಚಾಟದಿಂದ ನನ್ನ ದೂರ ಇಡಿ’; ಸುರೇಖಾ ಹೇಳಿಕೆಗೆ ಸಮಂತಾ ಖಡಕ್ ಉತ್ತರ

ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಸಮಂತಾ ರುತ್​ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ಎಲ್ಲರಿಂದ ತೀವ್ರ ವಿರೋಧ್ಯ ವ್ಯಕ್ತವಾಗುತ್ತಿದೆ. ಸಮಂತಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ರಾಜಕೀಯ ಕೆಸರೆರೆಚಾಟದಿಂದ ನನ್ನ ದೂರ ಇಡಿ’; ಸುರೇಖಾ ಹೇಳಿಕೆಗೆ ಸಮಂತಾ ಖಡಕ್ ಉತ್ತರ
ಸಮಂತಾ -ಸುರೇಖಾ
Follow us
ರಾಜೇಶ್ ದುಗ್ಗುಮನೆ
|

Updated on: Oct 03, 2024 | 10:08 AM

ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರು ಬಾಯಿ ಹರಿಬಿಟ್ಟಿದ್ದಾರೆ. ಬಿಆರ್​ಎಸ್​ ಅಧ್ಯಕ್ಷ ಕೆಟಿ ರಾಮ್ ರಾವ್ ಅವರು ಸಮಂತಾನ ತಮ್ಮ ಬಳಿ ಕಳಿಸೋಕೆ ಅಕ್ಕಿನೇನಿ ನಾಗಾರ್ಜುನ ಬಳಿ ಹೇಳಿದ್ದರು ಎಂದು ಸುರೇಖಾ ಹೇಳಿಕೆ ನೀಡಿದ್ದರು. ನಾಗಾರ್ಜುನ ಕೂಡ ಸಮಂತಾನ ಕಳಿಸೋಕೆ ರೆಡಿ ಆಗಿದ್ದರು ಎಂದು ಸುರೇಖಾ ಹೇಳಿದ್ದರು. ಈ ಹೇಳಿಕೆ ವಿರುದ್ಧ ಎಲ್ಲರೂ ಸಿಡಿದೆದ್ದಿದ್ದಾರೆ. ಅವರ ಬಳಿ ಕ್ಷಮೆಗೆ ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸುರೇಖಾ ಹೇಳಿಕೆ ಏನು?

‘ಕೆಟಿ ರಾಮ್ ರಾವ್ ಅವರಿಂದ ಸಮಂತಾ ವಿಚ್ಛೇದನ ಆಯಿತು. ಆ ಸಮಯದಲ್ಲಿ ಕೆಟಿ ರಾಮ್ ರಾವ್ ಸಚಿವರಾಗಿದ್ದರು. ಅವರು ನಟಿಯರ ಫೋನ್ ಟ್ಯಾಪ್ ಮಾಡಿ ಅವರ ವೀಕ್​ನೆಸ್ ಕಂಡುಹಿಡಿದುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು. ಅವರನ್ನು ಡ್ರಗ್ ಅಡಿಕ್ಟ್ ಆಗುವಂತೆ ಮಾಡುತ್ತಿದ್ದರು’ ಎಂದಿದ್ದರು. ಇದರ ಜೊತೆಗೆ ಸಮಂತಾ ವಿಚ್ಛೇದನದ ಬಗ್ಗೆ ಕಟ್ಟುಕಥೆ ಹೇಳಿದ್ದರು.

ಸಮಂತಾ ಉತ್ತರ

‘ಮಹಿಳೆಯಾಗಿ ಬಣ್ಣದ ಲೋಕದಲ್ಲಿ ಬದುಕುಳಿಯಲು ಬಹಳಷ್ಟು ಧೈರ್ಯ ಮತ್ತು ಶಕ್ತಿ ಬೇಕು. ಕೊಂಡಾ ಸುರೇಖಾ ಅವರೇ ಈ ಪ್ರಯಾಣ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದ ಬಗ್ಗೆ ಖುಷಿ ಇದೆ. ಅದನ್ನು ಕ್ಷುಲ್ಲಕಗೊಳಿಸಬೇಡಿ. ಸಚಿವರಾಗಿ ನಿಮ್ಮ ಮಾತುಗಳು ಗಮನಾರ್ಹವಾದ ತೂಕವನ್ನು ಹೊಂದಿವೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಖಾಸಗಿತನಕ್ಕೆ ಗೌರವ ನೀಡಿ’ ಎಂದು ಕೋರಿದ್ದಾರೆ ಸಮಂತಾ.

ಇದನ್ನೂ ಓದಿ: ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ

‘ವಿಚ್ಛೇದನ ವಿಚಾರವು ನನ್ನ ವೈಯಕ್ತಿಕ ವಿಚಾರ. ವಿಷಯಗಳನ್ನು ಖಾಸಗಿಯಾಗಿ ಇಡೋದು ನಮ್ಮ ಆಯ್ಕೆ. ಅದನ್ನು ತಪ್ಪಾಗಿ ನಿರೂಪಣೆ ಮಾಡಬಾರದು. ವಿಚ್ಛೇದನದಲ್ಲಿ ಯಾವುದೇ ರಾಜಕೀಯ ಪಿತೂರಿ ಒಳಗೊಂಡಿರಲಿಲ್ಲ. ದಯವಿಟ್ಟು ನನ್ನ ಹೆಸರನ್ನು ರಾಜಕೀಯ ಕೆಸರೆರೆಚಾಟದಿಂದ ದೂರವಿಡಿ.  ನಾನು ಯಾವಾಗಲೂ ರಾಜಕೀಯದಿಂದ ದೂರ ಉಳಿದಿದ್ದೇನೆ ಮತ್ತು ಅದನ್ನು ಮುಂದುವರಿಸಲು ಬಯಸುತ್ತೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ