ವಿಚ್ಛೇದನಕ್ಕೂ ತಿಂಗಳು ಮೊದಲು ಸಮಂತಾ ಅವರು ಅಕ್ಕಿನೇನಿ ಸರ್ ನೇಮ್ ಅನ್ನು ಸೋಶಿಯಲ್ ಮೀಡಿಯಾ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ‘ಎಸ್’ ಎಂದಷ್ಟೇ ಇಟ್ಟಿದ್ದರು. ಈ ಮೂಲಕ ವಿಚ್ಛೇದನ ಸುದ್ದಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಈಗ ವಿಚ್ಛೇದನ ಪಡೆದ ಮರುದಿನ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ.
ಇಂದು (ಅಕ್ಟೋಬರ್ 3) ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಮದುವೆಗೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರು ಸಮಂತಾ ರುತ್ ಪ್ರಭು ಎಂಬುದಾಗಿ ಇತ್ತು. ಈಗ ಅವರು ಆ ಹೆಸರಿಗೆ ಮರಳಿಲ್ಲ.
‘ಅಕ್ಟೋಬರ್ 2ರಂದು ಈ ಜೋಡಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿತ್ತು. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿತ್ತು. ಅ.7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ತೀವ್ರ ನಿರಾಸೆ ಉಂಟು ಮಾಡಿದೆ.
ಇದನ್ನೂ ಓದಿ: ಸಮಂತಾಗೆ ಸಿಗುತ್ತಿರುವ ಜೀವನಾಂಶದ ಮೊತ್ತದ ಬಗ್ಗೆ ಹೊರಬಿತ್ತು ಅಚ್ಚರಿಯ ಮಾಹಿತಿ
ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು
Published On - 8:37 pm, Sun, 3 October 21