ಏರ್ಪೋರ್ಟ್ನಲ್ಲೇ ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ; ಅವರ ಎನರ್ಜಿ ನೋಡಿ ಅಚ್ಚರಿಪಟ್ಟ ಫ್ಯಾನ್ಸ್
ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ಅನೇಕ ಜಾಹೀರಾತು ಶೂಟಿಂಗ್ನಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಫ್ಲೈಟ್ನಲ್ಲಿ ಸುತ್ತಾಡುತ್ತಾರೆ.

ನಟಿ ಸಮಂತಾ ಅವರು (Samantha) ನಟನೆ ಮಾತ್ರವಲ್ಲದೆ ತಮ್ಮ ಅದ್ಭುತ ಡ್ಯಾನ್ಸ್ ಮೂಲಕವೂ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ಅವರು ಹಾಕೋ ಸ್ಟೆಪ್ಗೆ ಪಡ್ಡೆಗಳು ಹುಚ್ಚೆದ್ದು ಕುಣಿಯುತ್ತಾರೆ. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದ (Pushpa Movie) ‘ಹೂ ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಸಮಂತಾ ಹಾಕಿರೋ ಸ್ಟೆಪ್ಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ‘ಪುಷ್ಪ’ ಸಿನಿಮಾ ಹಿಟ್ ಆಗೋಕೆ ಈ ಹಾಡಿನ ಕೊಡುಗೆಯೂ ದೊಡ್ಡದಿದೆ. ಈಗ ಅವರು ಏರ್ಪೋರ್ಟ್ನಲ್ಲಿ (Airport) ಸ್ಟೆಪ್ ಹಾಕಿರೋ ಹೊಸ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ಅನೇಕ ಜಾಹೀರಾತು ಶೂಟಿಂಗ್ನಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಫ್ಲೈಟ್ನಲ್ಲಿ ಸುತ್ತಾಡುತ್ತಾರೆ. ಕೆಲವೊಮ್ಮೆ ವಿಮಾನ ಲೇಟ್ ಆದಾಗ, ನಿಲ್ದಾಣದಲ್ಲೇ ಕಾಯಬೇಕಾಗುತ್ತದೆ. ಮಧ್ಯರಾತ್ರಿ ವಿಮಾನ ಏರೋಕೆ ಹೋದರೆ ನಿದ್ರೆಯೆಲ್ಲ ಹಾಳು. ಸಮಂತಾಗೂ ಮಧ್ಯರಾತ್ರಿ ಫ್ಲೈಟ್ ಇತ್ತು. ಈ ಸಂದರ್ಭದಲ್ಲಿ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ನಟನೆಯ ‘ಬೀಸ್ಟ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ‘ದಿ ಅರೇಬಿಕ್ ಕುಥು..’ ಹಾಡು ಇತ್ತೀಚೆಗೆ ರಿಲೀಸ್ ಆಗಿದ್ದು ಸಖತ್ ವೈರಲ್ ಆಗುತ್ತಿದೆ. ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಈ ಹಾಡು ಎರಡನೇ ಸ್ಥಾನದಲ್ಲಿದೆ. ಈ ಹಾಡನ್ನು ಮತ್ತಷ್ಟು ವೈರಲ್ ಮಾಡೋಕೆ ತಂಡ ಒಂದು ಚಾಲೆಂಜ್ ಕೂಡ ನೀಡಿದೆ. ‘ಬೀಸ್ಟ್’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಆ ವಿಡಿಯೋ ಶೇರ್ ಮಾಡಿಕೊಳ್ಳಬೇಕು. ಸಮಂತಾ ಕೂಡ ಈಗ ಅದನ್ನೇ ಮಾಡಿದ್ದಾರೆ.
View this post on Instagram
ಸಮಂತಾ ಅವರು ವಿಮಾನ ನಿಲ್ದಾಣದಲ್ಲೇ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅವರ ಎನರ್ಜಿ ನೋಡಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಕೆಲವು ಸೆಲೆಬ್ರಿಟಿಗಳು ಈ ಪೋಸ್ಟ್ನ ಕಮೆಂಟ್ ಬಾಕ್ಸ್ನಲ್ಲಿ ಫೈರ್ ಎಮೋಜಿ ಪೋಸ್ಟ್ ಮಾಡಿದ್ದಾರೆ.
ಸಮಂತಾ ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಲಿಪ್ ಜಾನ್ ನಿರ್ದೇಶನದ ‘ಅರೇಂಜ್ಮೆಂಟ್ಸ್ ಆಫ್ ಲವ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಇದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಹಲವು ಆಫರ್ ಒಪ್ಪಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್ಗೆ ಹೀಗೊಂದು ಆಸೆ
ನಾಗ ಚೈತನ್ಯ ಮೊದಲ ಹೆಂಡತಿ ಬಗ್ಗೆ ಮಾತನಾಡಿದ್ದ ಸಮಂತಾ; ಸ್ಯಾಮ್ ಹೀಗೆ ಹೇಳಿದ್ದಕ್ಕೂ ಇತ್ತು ಕಾರಣ
Published On - 2:58 pm, Fri, 18 February 22




