ಮಾಜಿ ಪತಿಯಿಂದ ತಪ್ಪಿದ್ದ ಆಫರ್​ ಸಮಂತಾಗೆ ಮತ್ತೆ ಸಿಕ್ತು; ಮದುವೆ ತಯಾರಿಯೇ ಇದಕ್ಕೆ ಕಾರಣ

ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಬಾಲಿವುಡ್​ ನಟ ಶಾರುಖ್​ ಖಾನ್​ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು.

ಮಾಜಿ ಪತಿಯಿಂದ ತಪ್ಪಿದ್ದ ಆಫರ್​ ಸಮಂತಾಗೆ ಮತ್ತೆ ಸಿಕ್ತು; ಮದುವೆ ತಯಾರಿಯೇ ಇದಕ್ಕೆ ಕಾರಣ
ಸಮಂತಾ

ಸಮಂತಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದ ಹೊರತಾಗಿಯೂ ಅವರು ಸಿನಿಮಾ ಕೆಲಸಗಳನ್ನು ಬಿಟ್ಟಿಲ್ಲ. ಚಿತ್ರರಂಗದ ಬಗ್ಗೆ ಅವರು ಸಾಕಷ್ಟು ಗಮನ ಹರಿಸುತ್ತಿದ್ದಾರೆ. ಈ ಮಧ್ಯೆ, ಸಮಂತಾ ಅವರಿಗೆ ತಪ್ಪಿ ಹೋಗಿದ್ದ ಆಫರ್​ ಒಂದು ಮರಳಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಬಾಲಿವುಡ್​ ನಟ ಶಾರುಖ್​ ಖಾನ್​ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು. ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅವರು ಶಾರುಖ್​ ಸಿನಿಮಾ ಆಫರ್​ ರಿಜೆಕ್ಟ್​ ಮಾಡಿದ್ದರು. ಆದರೆ, ಆ ಸಂದರ್ಭದಲ್ಲೇ ಅವರ ಕುಟುಂಬದಲ್ಲಿ ಬಿರುಗಾಳಿ ಬೀಸಿತ್ತು. ಸಮಂತಾ ಮತ್ತು ನಾಗ ಚೈತನ್ಯ ಬೇರಾದರು. ಸಮಂತಾಗೆ ಈ ಆಫರ್​ ತಪ್ಪೋಕೆ ನಾಗ ಚೈತನ್ಯ ಅವರೇ ನೇರ ಕಾರಣ ಎಂದು ಅನೇಕರು ದೂರಿದ್ದರು. ಅಚ್ಚರಿ ಎಂಬಂತೆ ಈಗ ಈ ಆಫರ್ ಮರಳಿ ಸಮಂತಾ ಬಳಿ ಬಂದಿದೆ.

ಎಲ್ಲರಿಗೂ ಗೊತ್ತಿರುವಂತೆ ನಯನತಾರಾಗೆ ಶೀಘ್ರವೇ ಮದುವೆ ಆಗುತ್ತಿದೆ. ಬಹುಕಾಲದ ಗೆಳೆಯ, ನಿರ್ದೇಶಕ ವಿಘ್ನೇಶ್​ ಶಿವನ್​ ಜತೆ ಅವರು ಹಸೆಮಣೆ ಏರುತ್ತಿದ್ದಾರೆ. ಇದಕ್ಕೆ ಅವರು ತಯಾರಿ ಆಂಭಿಸಿದ್ದಾರೆ. ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದಿದ್ದರೆ ಶೂಟಿಂಗ್​ ಮುಗಿದ ನಂತರ ನಯನತಾರಾ ಹಸೆಮಣೆ ಏರಬೇಕಿತ್ತು. ಆದರೆ, ಶಾರುಖ್​ ಖಾನ್​ ಮಗ ಆರ್ಯನ್ ಖಾನ್​ ಅವರನ್ನು ಜೈಲಿನಿಂದ ಹೊರ ತರುವ ಪ್ರಯತ್ನದಲ್ಲಿದ್ದಾರೆ. ಈ ಕಾರಣದಿಂದ ಅವರು ಶೂಟಿಂಗ್​ ಸೆಟ್​ಗೆ ಬರುತ್ತಿಲ್ಲ. ಇದರಿಂದ ಶೂಟಿಂಗ್​ ವಿಳಂಬವಾಗಿದೆ. ಈ ಕಾರಣಕ್ಕೆ ನಯನತಾರಾ ಸಿನಿಮಾದಿಂದ ಹೊರ ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ, ನಿರ್ದೇಶಕರು ಮರಳಿ ಸಮಂತಾ ಬಳಿಯೇ ತೆರಳಿದ್ದಾರೆ. ಸಮಂತಾ ಮರುಮಾತಿಲ್ಲದೆ ಈ ಆಫರ್​ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಸಮಂತಾ ನನ್ನ ಮೊಮ್ಮಗಳಿದ್ದಂತೆ’; ನಟಿಗೆ ಸಾಕಷ್ಟು ಅಕ್ರಮ ಸಂಬಂಧ ಇದೆ ಎಂದಿದ್ದ ವೈದ್ಯನ ಹೊಸ ಹೇಳಿಕೆ

ಮಗಳ ಮದುವೆ ಬಗ್ಗೆ ಚಿಂತೆ ಮಾಡುವ ಪಾಲಕರಿಗೆ ಸಮಂತಾ ವಿಶೇಷ ಮನವಿ 

Click on your DTH Provider to Add TV9 Kannada