ಮಗಳ ಮದುವೆ ಬಗ್ಗೆ ಚಿಂತೆ ಮಾಡುವ ಪಾಲಕರಿಗೆ ಸಮಂತಾ ವಿಶೇಷ ಮನವಿ 

ಸಮಂತಾ ಅಕ್ಕಿನೆನಿ ವಿಚ್ಛೇದನ ಘೋಷಣೆ ಮಾಡಿದಾಗಿನಿಂದಲೂ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿಯನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ನಿರಂತರವಾಗಿ ಪೋಸ್ಟ್​ ಮಾಡುತ್ತಿದ್ದಾರೆ.

ಮಗಳ ಮದುವೆ ಬಗ್ಗೆ ಚಿಂತೆ ಮಾಡುವ ಪಾಲಕರಿಗೆ ಸಮಂತಾ ವಿಶೇಷ ಮನವಿ 
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 27, 2021 | 6:51 PM

ಸಮಂತಾ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಬೀಸಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ದೂರವಾಗಿದ್ದಾರೆ. ಇದಾದ ಕೆಲವೇ ದಿನಕ್ಕೆ ಅವರು ರಿಷಿಕೇಷಕ್ಕೆ ಭೇಟಿ ನೀಡಿದ್ದರು. ಈಗ ಸಮಂತಾ ದುಬೈಗೆ ತೆರಳಿದ್ದಾರೆ. ಸುತ್ತಾಟ ನಡೆಸುವ ಮೂಲಕ ತಮಗಾದ ನೋವನ್ನು ಮರೆಯೋಕೆ ಅವರು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸಮಂತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಮಾತನಾಡಿದ್ದಾರೆ. ಈ ಪೋಸ್ಟ್​ ಸಾಕಷ್ಟು ವೈರಲ್​ ಆಗುತ್ತಿದೆ. ಅನೇಕರು ಸಮಂತಾ ಅವರನ್ನು ಬೆಂಬಲಿಸಿದ್ದಾರೆ.

ಸಮಂತಾ ವಿಚ್ಛೇದನ ಘೋಷಣೆ ಮಾಡಿದಾಗಿನಿಂದಲೂ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿಯನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ನಿರಂತರವಾಗಿ ಪೋಸ್ಟ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವಿವಿಧ ರೀತಿಯ ಸಾಲುಗಳನ್ನು ಕೂಡ ಹಾಕುತ್ತಿದ್ದಾರೆ. ಈಗ ಸಮಂತಾ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

‘ನಿಮ್ಮ ಮಗಳನ್ನು ಸಮರ್ಥವಾಗಿ ಬೆಳೆಸಿ. ಈ ಮೂಲಕ ತಾವು ಯಾರನ್ನು ಮದುವೆ ಆಗುತ್ತೇವೆ ಎನ್ನುವ ಚಿಂತೆಯೇ ಅವರಿಗೆ ಬರದಿರಲಿ. ಮಗಳ ಮದುವೆಗೆ ಹಣ ಕೂಡಿಡುವ ಬದಲು, ಅವರ ಶಿಕ್ಷಣಕ್ಕೆ ಆ ಹಣ ಬಳಸಿ. ಅವರನ್ನು ಮದುವೆಗೆ ಮಾನಸಿಕವಾಗಿ ಸಿದ್ಧಪಡಿಸುವ ಬದಲು ಅವರನ್ನು ವೈಯಕ್ತಿಕವಾಗಿ ಗಟ್ಟಿಗೊಳಿಸಿ. ಸೆಲ್ಫ್​ ಲವ್​, ಆತ್ಮವಿಶ್ವಾಸವನ್ನು ಅವರಲ್ಲಿ ಬೆಳೆಸಿ’ ಎಂದು ಸಮಂತಾ ಮನವಿ ಮಾಡಿಕೊಂಡಿದ್ದಾರೆ.

ನಟಿ ಸಮಂತಾ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಿ ಎಷ್ಟು ಸುಳ್ಳು, ಎಷ್ಟು ನಿಜ ಎಂಬುದು ತಿಳಿದಿಲ್ಲ. ನಾಗ ಚೈತನ್ಯ ಜೊತೆಗಿನ ಕಿರಿಕ್​, ವಿಚ್ಛೇದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಬಣ್ಣಬಣ್ಣದ ಗಾಸಿಪ್​ಗಳು ಕೇಳಿಬಂದಿದ್ದು ಸಮಂತಾಗೆ ನಿಜಕ್ಕೂ ಬೇಸರ ಮೂಡಿಸಿದೆ. ಹಾಗಾಗಿ ಸಮಂತಾ ಕಾನೂನು ಸಮರ ಸಾರಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಆಗುವಂತಹ ಮಾಹಿತಿಯನ್ನು ಪ್ರಸಾರ ಮಾಡಿದ ಯೂಟ್ಯೂಬರ್​ಗಳ ಮೇಲೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಮಂತಾಗೆ ಹಿನ್ನಡೆ ಆಗಿತ್ತು. ಹೈದರಾಬಾದ್​ನ ಸ್ಥಳೀಯ ನ್ಯಾಯಾಲಯದಲ್ಲಿ ಸಮಂತಾ ಈ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ ಈ ಕೇಸ್​ ವಿಚಾರಣೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಸಮಂತಾ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ಕೋರ್ಟ್​ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?

‘ಸಮಂತಾ ನನ್ನ ಮೊಮ್ಮಗಳಿದ್ದಂತೆ’; ನಟಿಗೆ ಸಾಕಷ್ಟು ಅಕ್ರಮ ಸಂಬಂಧ ಇದೆ ಎಂದಿದ್ದ ವೈದ್ಯನ ಹೊಸ ಹೇಳಿಕೆ

Published On - 6:28 pm, Wed, 27 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ