ಅರೆಬೆತ್ತಲೆ ಫೋಟೋ ವಿವಾದ; ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಸಮಂತಾ
ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿದೆ. ಅದು ಸಮಂತಾ ರುತ್ ಪ್ರಭು ಅವರ ಫೋಟೋ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಆದರೆ ಅದು ಮಾರ್ಫ್ ಮಾಡಿದ ಫೋಟೋ ಎಂಬುದು ತಿಳಿದುಬಂದಿದೆ. ಈ ವೈರಲ್ ಫೋಟೋದ ವಿಚಾರದ ಬಗ್ಗೆ ಸಮಂತಾ ಅವರು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ವಿವಾದಗಳಿಂದ ಆದಷ್ಟು ದೂರ ಇರಲು ಪ್ರಯತ್ನಿಸುತ್ತಾರೆ. ಆದರೂ ಕೆಲವೊಮ್ಮೆ ಕಿರಿಕ್ ಶುರುವಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಇರುವ ವ್ಯಕ್ತಿ ಆದ್ದರಿಂದ ಅನಗತ್ಯ ಕಾಂಟ್ರವರ್ಸಿಗಳು ಕೂಡ ಆಗಾಗ ಸೃಷ್ಟಿ ಆಗುತ್ತವೆ. ಇತ್ತೀಚೆಗೆ ಅವರದ್ದು ಎನ್ನಲಾದ ಅರೆ ಬೆತ್ತಲೆ ಫೋಟೋವೊಂದು (Samantha Viral Photo) ವೈರಲ್ ಆಗಿತ್ತು. ಆ ಘಟನೆಯ ಬಗ್ಗೆ ಸಮಂತಾ (Samantha) ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳಿಗೆ ತಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ ಅವರು ಆಗಾಗ ಮಾಹಿತಿ ಹಂಚಿಕೊಳ್ಳುತ್ತಾರೆ. ಅನಾರೋಗ್ಯಕ್ಕೆ ಅವರು ವಿವಿಧ ಬಗೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುರಿತು ಅವರು ಕೆಲವು ಫೋಟೋಗಳನ್ನು ಇತ್ತೀಚೆಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಅವರು ಅರೆ ಬೆತ್ತಲೆ ಫೋಟೋ ಅಪ್ಲೋಡ್ ಮಾಡಿ, ನಂತರ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದರು.
ಮಾರ್ಫ್ ಮಾಡಿದ ಅರೆ ಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಅದು ಸಮಂತಾ ಅವರ ಫೋಟೋ ಎಂದು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಕೋಟ್ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್ ವಿಡಿಯೋ ಸಾಕ್ಷಿ
ಹಲವು ಪ್ರಾಜೆಕ್ಟ್ಗಳಲ್ಲಿ ಸಮಂತಾ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ಜನ್ಮದಿನದ ಪ್ರಯುಕ್ತ ‘ಮಾ ಇಂಟಿ ಬಂಗಾರಂ’ ಸಿನಿಮಾ ಅನೌನ್ಸ್ ಆಯಿತು. ಅಲ್ಲದೇ ಅದರ ಪೋಸ್ಟರ್ ಕೂಡ ಅನಾವರಣ ಆಯಿತು. ಅನಾರೋಗ್ಯದ ನಡುವೆಯೂ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರುಣ್ ಧವನ್ ಜೊತೆ ಸಮಂತಾ ನಟಿಸಿರುವ ‘ಹನಿ ಬನಿ’ ವೆಬ್ ಸಿರೀಸ್ ಬಿಡುಗಡೆಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.