ಒಂದೇ ವೇದಿಕೆ ಮೇಲೆ ಮಾಜಿ ಅತ್ತೆ-ಸೊಸೆ; ಸಮಂತಾ ಮಾತಿಗೆ ಅಮಲಾಗೆ ಖುಷಿಯೋ ಖುಷಿ

Samantha Ruth Prabhu: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ನಂತರ, ಅವರ ಮಾಜಿ ಅತ್ತೆ ಅಮಲಾ ಅಕ್ಕಿನೇನಿ ಜೊತೆ ಸಮಂತಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಂತಾ ತಮ್ಮ 15 ವರ್ಷಗಳ ಚಿತ್ರರಂಗದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮಲಾ ಅವರ ಸಂತೋಷದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

ಒಂದೇ ವೇದಿಕೆ ಮೇಲೆ ಮಾಜಿ ಅತ್ತೆ-ಸೊಸೆ; ಸಮಂತಾ ಮಾತಿಗೆ ಅಮಲಾಗೆ ಖುಷಿಯೋ ಖುಷಿ
Samantha Amala
Edited By:

Updated on: May 23, 2025 | 4:19 PM

ಸಮಂತಾ (Samantha) ಅವರು ವಿಚ್ಛೇದನ ಪಡೆದು ಹಲವು ಸಮಯ ಕಳೆದಿದೆ. ಇದಾದ ಬಳಿಕ ನಾಗ ಚೈತನ್ಯ ಹಾಗೂ ಸಮಂತಾ ಎದುರುಬದುರಾಗಿಲ್ಲ. ಆ ರೀತಿಯ ಪರಿಸ್ಥಿತಿ ಬರದಂತೆ ಅವರು ನೋಡಿಕೊಂಡಿದ್ದಾರೆ. ಈಗ ಸಮಂತಾ ಹಾಗೂ ಅವರ ಮಾಜಿ ಅತ್ತೆ ಅಮಲಾ ಅಕ್ಕಿನೇನಿ ಒಂದೇ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮೊದಲೇನು ಅಲ್ಲ. ಅನೇಕ ಬಾರಿ ಈ ರೀತಿ ಆಗಿದ್ದು ಇದೆ. ಈಗ ಇವರು ಮತ್ತೊಮ್ಮೆ ಒಂದೇ ಕಡೆ ಬಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸಮಂತಾ ಹಾಗೂ ನಾಗ ಚೈತನ್ಯ 2021ರಲ್ಲಿ ಬೇರೆ ಆದರು. ಬೇರೆ ಆದ ಬಳಿಕ ನಾವು ಒಳ್ಳೆಯ ಗೆಳೆಯರಾಗಿ ಇರುತ್ತೇವೆ ಎಂದು ಹೇಳಿದ್ದರು. ಆದರೆ, ಆ ರೀತಿ ಆಗೋಕೆ ಸಾಧ್ಯವೇ ನೀವೇ ಹೇಳಿ. ಇಬ್ಬರೂ ಬೇರೆ ಆಗಿದ್ದು, ಮತ್ತೆ ಒಬ್ಬರ ಮುಖವನ್ನು ಒಬ್ಬರು ನೋಡೋಕೆ ಇಷ್ಟಪಟ್ಟುಕೊಳ್ಳುತ್ತಿಲ್ಲ. ಆ ರೀತಿಯ ಪರಿಸ್ಥಿತಿಯೂ ಬಂದಿಲ್ಲ. ಆದರೆ, ನಾಗ ಚೈತನ್ಯ ಕುಟುಂಬದವರನ್ನು ಭೇಟಿ ಮಾಡಲು ಸಮಂತಾಗೆ ಯಾವುದೇ ಮುಜುಗರ ಇಲ್ಲ. ಜೀ ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಇವರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು.

ಸಮಂತಾ ಅವರು ಚಿತ್ರರಂಗದಲ್ಲಿ 15 ವರ್ಷ ಕಳೆದಿದ್ದಾರೆ. ಈ ವೇಳೆ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳು ತಮ್ಮ ಜೊತೆ ಇದ್ದಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಅಮಲಾ ಅವರು ಪ್ರತಿಕ್ರಿಯೆ ನೀಡಿದ್ದು ಇದು ವೈರಲ್ ಆಗಿದೆ.

ಇದನ್ನೂ ಓದಿ:ಅವರನ್ನು ನಂಬ ಬೇಡಿ; ಸಮಂತಾ ಅಭಿಮಾನಿಗಳಿಗೆ ಕಿವಿಮಾತು 

‘ತೆಲುಗು ಇಂಡಸ್ಟ್ರಿ ನನಗೆ ಎಲ್ಲವನ್ನೂ ನೀಡಿದೆ. ಇದುವೇ ನನ್ನ ಕರ್ಮಭೂಮಿ’ ಎಂದು ಹೇಳುವಾಗ ಅಮಲಾ ಅವರು ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ. ಸಮಂತಾ ಬಗ್ಗೆ ಅವರಿಗೆ ಹೆಮ್ಮೆ ಇದೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ ಎನ್ನಬಹುದು.

ನಾಗ ಚೈತನ್ಯ ಅವರು ವಿಚ್ಛೇದನದ ಬಳಿಕ ಶೋಭಿತಾ ದುಲಿಪಾಲ್​ ಅವರನ್ನು ವಿವಾಹ ಆಗಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಸಮಂತಾ ಅವರು ನಿರ್ದೇಶಕ ರಾಜ್​ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಅವರ ಮ್ಯಾನೇಜರ್ ಅವರು ತಳ್ಳಿ ಹಾಕಿದ್ದಾರೆ. ಸಮಂತಾ ಅವರು ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ