AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಬಂದವರಿಗೆ ಸಮಂತಾ ಕೊಟ್ಟ ಉಡುಗೊರೆ ಏನು? ಊಟ ಹೇಗಿತ್ತು?

Samantha Ruth Prabhu: ಸಮಂತಾ ಹಾಗೂ ರಾಜ್ ಅವರು ಕೊಯಮತ್ತೂರಿನ ಇಶಾ ಯೋಗ ಸೆಂಟರ್​​ನಲ್ಲಿ ಸರಳವಾಗಿ ಮದುವೆ ಆಗಿದ್ದು, ಅತ್ಯಂತ ಆಪ್ತರು ಮತ್ತು ಕುಟುಂಬದ ಪ್ರಮುಖರು ಮಾತ್ರವೇ ಈ ಇಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರ ಮದುವೆ ಅತ್ಯಂತ ಸರಳವಾಗಿ ನಡೆದಿದೆ. ಮದುವೆಗೆ ಬಂದವರಿಗೆ ಸಮಂತಾ ಕೊಟ್ಟ ಉಡುಗೊರೆ ಏನು? ಮದುವೆಯಲ್ಲಿ ಊಟ ಹೇಗಿತ್ತು? ಇಲ್ಲಿದೆ ಮಾಹಿತಿ...

ಮದುವೆಗೆ ಬಂದವರಿಗೆ ಸಮಂತಾ ಕೊಟ್ಟ ಉಡುಗೊರೆ ಏನು? ಊಟ ಹೇಗಿತ್ತು?
Samantha Raj
ಮಂಜುನಾಥ ಸಿ.
|

Updated on:Dec 03, 2025 | 1:23 PM

Share

ಸಮಂತಾ ಋತ್ ಪ್ರಭು (Samantha Ruth Prabhu) ಇತ್ತೀಚೆಗಷ್ಟೆ ನಿರ್ದೇಶಕ, ನಿರ್ಮಾಪಕ ರಾಜ್ ನಿಧಿಮೋರು ಜೊತೆಗೆ ವಿವಾಹವಾಗಿದ್ದಾರೆ. ಸಮಂತಾ ಹಾಗೂ ರಾಜ್ ಅವರು ಕೊಯಮತ್ತೂರಿನ ಇಶಾ ಯೋಗ ಸೆಂಟರ್​​ನಲ್ಲಿ ಸರಳವಾಗಿ ಮದುವೆ ಆಗಿದ್ದು, ಅತ್ಯಂತ ಆಪ್ತರು ಮತ್ತು ಕುಟುಂಬದ ಪ್ರಮುಖರು ಮಾತ್ರವೇ ಈ ಇಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರ ಮದುವೆ ಅತ್ಯಂತ ಸರಳವಾಗಿ ನಡೆದಿದೆ. ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಮದುವೆ, ಎರಡನೇ ಮದುವೆ ಸಹ ಬಲು ಅದ್ಧೂರಿಯಾಗಿ ನಡೆಯುತ್ತವೆ. ಆದರೆ ಸಮಂತಾ ಮತ್ತು ರಾಜ್ ಬಹಳ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.

ಸಮಂತಾರ ಆಪ್ತ ಗೆಳತಿ ಶಿಲ್ಪಾ ರೆಡ್ಡಿ ಸಹ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯ ಚಿತ್ರಗಳು ಮತ್ತು ಕೆಲ ಮಾಹಿತಿಯನ್ನು ಶಿಲ್ಪಾ ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಸಮಂತಾ ಹಾಗೂ ರಾಜ್ ಅವರ ಮದುವೆ ಸಮಾರಂಭ ನಡೆದಿದೆ. ಇಶಾ ಯೋಗ ಸೆಂಟರ್​​ನಲ್ಲಿರುವ ಲಿಂಗ ಭೈರವಿ ದೇವಿಯ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದ್ದು, ಭೂತ ಶುದ್ಧಿ ಪದ್ಧತಿಯಲ್ಲಿ ಈ ಜೋಡಿಯ ವಿವಾಹ ನಡೆದಿದೆ.

ಮದುವೆ ಎಂದರೆ ಅಲ್ಲಿ ಊಟವೇ ಹೈಲೆಟ್. ಮದುವೆ ಊಟಕ್ಕೆ ಎಲ್ಲಿಲ್ಲದ ಪ್ರಾಶಸ್ತ್ಯ. ಆದರೆ ಸಮಂತಾ ಅವರ ಮದುವೆ ಊಟ ಅತ್ಯಂತ ಸರಳವಾಗಿತ್ತು. ಶಿಲ್ಪಾ ರೆಡ್ಡಿ, ಮದುವೆ ಊಟದ ಚಿತ್ರವನ್ನು ಹಂಚಿಕೊಂಡಿದ್ದು, ಅನ್ನ, ಬೇಳೆಯ ತೊವ್ವೆ ರೀತಿಯ ಸಾರು, ಬೆಂಡೆಕಾಯಿ ಪಲ್ಯ, ಪಾಯಸ, ಒಂದು ಸಣ್ಣ ರೊಟ್ಟಿ, ಒಂದು ಕಡಲೆ ವಡೆ, ಕೋಸಂಬರಿ, ಸಿಹಿಗುಂಬಳದ ಪಲ್ಯ, ಇವಿಷ್ಟೆ ಮದುವೆಯ ಊಟ. ಯಾವ ಅದ್ಧೂರಿ ಮೆನು ಇಲ್ಲದೆ ಅತ್ಯಂತ ಸರಳವಾದ ಊಟದೊಂದಿಗೆ ಮದುವೆ ಮುಗಿಸಿದ್ದಾರೆ ಸಮಂತಾ ಮತ್ತು ರಾಜ್.

ಇದನ್ನೂ ಓದಿ:ಭೂತ ಶುದ್ಧಿ ಪದ್ಧತಿಯಲ್ಲಿ ವಿವಾಹವಾದ ಸಮಂತಾ: ಪದ್ಧತಿಯ ವಿಶೇಷತೆ ಏನು?

ಇನ್ನು ಮದುವೆಗೆ ಬಂದ ಅತಿಥಿಗಳಿಗೆ ಸಮಂತಾ ಹಾಗೂ ರಾಜ್ ಕಡೆಯಿಂದ ಸಣ್ಣ ಉಡುಗೊರೆಯನ್ನೂ ನೀಡಲಾಗಿದೆಯಂತೆ. ಉಡುಗೊರೆಯಲ್ಲಿ ಇಶಾ ಫೌಂಡೇಶನ್ ತಯಾರಿಸಿರುವ ಊದುಬತ್ತಿ, ಕರ್ಪೂರಗಳು, ಸದ್ಗುರು ಸಂದೇಶ, ಭಾರತದಲ್ಲಿ ತಯಾರಾದ ಕೆಲವು ಚಾಕಲೇಟ್​​ಗಳು, ಸಮಂತಾ ಹೂಡಿಕೆ ಮಾಡಿರುವ ಸೀಕ್ರೆಟ್ ಆಲ್ಟ್​​ಮಿಸ್ಟ್​ ಬ್ರ್ಯಾಂಡಿನ ಪರ್ಫ್ಯೂಮ್ ಬಾಟಲಿಗಳನ್ನು ನೀಡಲಾಗಿದೆ.

ಸಮಂತಾ ಮತ್ತು ರಾಜ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರು ಲಿವಿನ್ ರಿಲೇಷನ್​​ನಲ್ಲಿದ್ದರು. ಕಳೆದ ಕೆಲ ತಿಂಗಳುಗಳಿಂದ ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದರು. ಇದೀಗ ಅಂತಿಮವಾಗಿ ಇಬ್ಬರೂ ಮದುವೆ ಆಗಿದ್ದಾರೆ. ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Wed, 3 December 25

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ