Samantha: ‘ನೀವು ಗೆಲುವಿಗೆ ಅರ್ಹರು’; ಆರ್​​ಸಿಬಿ ಜಯಕ್ಕೆ ಪ್ರಾರ್ಥಿಸಿದ್ರಾ ಸಮಂತಾ?

ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಆರ್​ಸಿಬಿ ಗೆಲ್ಲಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಸಮಂತಾ ಅವರು ವಿರಾಟ್ ಕೊಹ್ಲಿ ಅವರ ಆರ್​ಸಿಬಿ ತಂಡ ಗೆಲ್ಲಲಿ ಎಂದು ಪ್ರಾರ್ಥಿಸಿದರೇ ಎನ್ನುವ ಅನುಮಾನ ಮೂಡಿದೆ.

Samantha: ‘ನೀವು ಗೆಲುವಿಗೆ ಅರ್ಹರು’; ಆರ್​​ಸಿಬಿ ಜಯಕ್ಕೆ ಪ್ರಾರ್ಥಿಸಿದ್ರಾ ಸಮಂತಾ?
ವಿರಾಟ್-ಸಮಂತಾ

Updated on: May 22, 2024 | 10:42 AM

ನಟಿ ಸಮಂತಾ (Samantha) ಅವರು ಇತ್ತೀಚೆಗೆ ಬೇರೆ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅನಾರೋಗ್ಯ ಕಾರಣದಿಂದ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಸಖತ್ ಬೇಸರ ಇದೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್​ಗಳು ಆಗಾಗ ಗಮನ ಸೆಳೆಯುತ್ತವೆ. ಈಗ ಸಮಂತಾ ಅವರ ಪೋಸ್ಟ್ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಆರ್​ಸಿಬಿ ಗೆಲುವಿಗೆ ಪ್ರಾರ್ಥಿಸಿದರೇ ಎನ್ನುವ ಅನುಮಾನ ಮೂಡಿದೆ.

ಆರ್​ಸಿಬಿ ಅಭಿಮಾನಿ ಬಳಗ ದೊಡ್ಡದು. ರಾಜ್ಯ, ದೇಶದ ಗಡಿ ಮೀರಿ ಈ ತಂಡಕ್ಕೆ ಅಭಿಮಾನಿಗಳು ಇದ್ದಾರೆ. ಇಂದಿನ (ಮೇ 22) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಆರ್​ಸಿಬಿ ಗೆಲ್ಲಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಸಮಂತಾ ಅವರು ವಿರಾಟ್ ಕೊಹ್ಲಿ ಅವರ ಆರ್​ಸಿಬಿ ತಂಡ ಗೆಲ್ಲಲಿ ಎಂದು ಪ್ರಾರ್ಥಿಸಿದರೇ ಎನ್ನುವ ಅನುಮಾನ ಮೂಡಿದೆ.

ಇದನ್ನೂ ಓದಿ: ಅರೆಬೆತ್ತಲೆ ಫೋಟೋ ವಿವಾದ; ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಸಮಂತಾ

ಇನ್​ಸ್ಟಾಗ್ರಾಮ್​ನಲ್ಲಿ ‘ನಾನು ನಿಮ್ಮ ಗೆಲುವನ್ನು ನೋಡಲು ಬಯಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ ಸಮಂತಾ. ಇಷ್ಟಕ್ಕೆ ನಿಂತಿಲ್ಲ. ಅವರು ಇದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ನಿಮ್ಮ ಹೃದಯವು ಏನನ್ನು ಬಯಸಿದರೂ, ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿಮಗಾಗಿ ಬೇರೂರಿರುವೆ. ನೀವು ಗೆಲುವಿಗೆ ಅರ್ಹರು’ ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ. ಇದರಿಂದ ಸಮಂತಾ ಆರ್​​ಸಿಬಿ ತಂಡಕ್ಕೆ ಬೆಂಬಲ ಸೂಚಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.  

ಸಮಂತಾ ಅವರು ಈ ಮೊದಲು  ಹಲವು ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಅವರ ಕಂಬ್ಯಾಕ್​ನಿಂದ ತಮಗೆ ಸ್ಫೂರ್ತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಬಾರಿಯ ಆರ್​ಸಿಬಿ ಕಂಬ್ಯಾಕ್​ನ ಯಾರೊಬ್ಬರೂ ಊಹಿಸಿರಲಿಲ್ಲ. ಇದರಿಂದ ಸಮಂತಾ ಇಂಪ್ರೆಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್​ನ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.