ರಾಜ್ ನಿಧಿಮೋರು ಜತೆ ಸಮಂತಾ ಲವ್ ಖಚಿತ? ಫೋಟೋಗಳೇ ಹೇಳುತ್ತಿವೆ ಉತ್ತರ

ನಿರ್ದೇಶಕ ರಾಜ್ ನಿಧಿಮೋರು ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಡೇಟಿಂಗ್ ಮಾಡುತ್ತಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪದೇ ಪದೇ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಮಂತಾ ಹಂಚಿಕೊಂಡ ಕೆಲವು ಫೋಟೋಗಳಲ್ಲಿ ರಾಜ್ ಕೂಡ ಇದ್ದಾರೆ. ಇದರಿಂದ ಅಭಿಮಾನಿಗಳಿಗೆ ಉತ್ತರ ಸಿಕ್ಕಂತೆ ಆಗಿದೆ.

ರಾಜ್ ನಿಧಿಮೋರು ಜತೆ ಸಮಂತಾ ಲವ್ ಖಚಿತ? ಫೋಟೋಗಳೇ ಹೇಳುತ್ತಿವೆ ಉತ್ತರ
Raj Nidimoru, Samantha

Updated on: May 07, 2025 | 9:28 PM

ಕಳೆದ ಕೆಲವು ತಿಂಗಳಿಂದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಲವ್ ಲೈಫ್ ಬಗ್ಗೆ ಸಖತ್ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸಮಂತಾ ಅವರು ರಾಜ್ ಜೊತೆ ಎಲ್ಲ ಕಡೆಗಳಲ್ಲಿ ಸುತ್ತಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ತಿರುಪತಿ ದೇವಾಲಯಕ್ಕೆ ಒಟ್ಟಾಗಿ ಬಂದಿದ್ದರು. ಈಗ ಮತ್ತೆ ರಾಜ್ ನಿಧಿಮೋರು ಜೊತೆ ಇರುವ ಫೋಟೋಗಳನ್ನು ಸಮಂತಾ (Samantha) ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ‘ಹಾಗಾದ್ರೆ ನಿಮ್ ಲವ್ ಖಚಿತ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

‘ಫ್ಯಾಮಿಲಿ ಮ್ಯಾನ್ 2’, ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಳಲ್ಲಿ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಧಿಮೋರು ಅವರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದ್ದರೂ ಕೂಡ ಅದನ್ನು ಅವರು ತಿರಸ್ಕರಿಸಿಲ್ಲ. ಹಾಗೆಯೇ ಒಪ್ಪಿಕೊಂಡಿಲ್ಲ ಕೂಡ. ಆದರೆ ಫೋಟೋ ಪೋಸ್ಟ್ ಮಾಡಿದ್ದರಿಂದ ಜನರಿಗೆ ಖಚಿತತೆ ಸಿಕ್ಕಂತೆ ಆಗಿದೆ.

ಇದನ್ನೂ ಓದಿ
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ
ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಸುತ್ತಾಟ
2025ರಲ್ಲಿ ಸಮಂತಾ 2ನೇ ಮದುವೆ, ತಾಯಿ ಆಗುವ ಸೂಚನೆ ನೀಡಿದ ನಟಿ

ಸಮಂತಾ ಅವರು ಈಗ ನಿರ್ಮಾಪಕಿ ಆಗಿದ್ದಾರೆ. ‘ಶುಭಂ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಮೇ 9ರಂದು ಬಿಡುಗಡೆ ಆಗಲಿದೆ. ನಿರ್ಮಾಣದಲ್ಲಿ ಮೊದಲ ಪ್ರಯತ್ನ ಆದ್ದರಿಂದ ಸಮಂತಾ ಅವರು ಎಗ್ಸೈಟ್ ಆಗಿದ್ದಾರೆ. ಈ ಖುಷಿಯಲ್ಲಿ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜ್ ನಿಧಿಮೋರು ಕೂಡ ಕಾಣಿಸಿಕೊಂಡಿದ್ದಾರೆ.

ರಾಜ್ ನಿಧಿಮೋರು ಮತ್ತು ಸಮಂತಾ ಅವರ ಸೆಲ್ಫಿ ಗಮನ ಸೆಳೆಯುತ್ತಿದೆ. ಸಮಂತಾ ಅವರು ಮುದ್ದಿನ ಶ್ವಾನದ ಜೊತೆಗೂ ರಾಜ್ ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಬ್ಬರ ನಡುವೆ ಹೆಚ್ಚಿನ ಆಪ್ತತೆ ಬೆಳೆದಿರುವುದು ಖಚಿತ ಆಗುತ್ತಿದೆ. ಸಮಂತಾ ಅವರಿಗೆ ಬೆಂಬಲವಾಗಿ ರಾಜ್ ನಿಧಿಮೋರು ನಿಂತಿದ್ದಾರೆ. ಶೀಘ್ರದಲ್ಲೇ ಅವರು ಅಚ್ಚರಿಯ ಸುದ್ದಿ ನೀಡಬಹುದು ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ; ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ

ನಾಗ ಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಮಂತಾ ಅವರು ಸಿಂಗಲ್ ಆಗಿದ್ದರು. ಆದರೆ ಈಗ ಅವರ ಬದುಕಿನಲ್ಲಿ ಪ್ರೀತಿ ಚಿಗುರಿರುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ವರ್ಷ ವ್ಯಾಲೆಂಟೈನ್ಸ್ ಡೇ ದಿನವೇ ಅವರು ಈ ಬಗ್ಗೆ ಸೂಚನೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.