AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾ ಇಂಟಿ ಬಂಗಾರಂ’ ಟ್ವಿಟ್ಟರ್ ವಿಮರ್ಶೆ, ಸಮಂತಾ ಮ್ಯಾಜಿಕ್ ವರ್ಕ್ ಆಯ್ತಾ?

Samantha Ruth Prabhu: ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣದ ಕೆಲವೆಡೆ ಬೆಳಿಗ್ಗೆ ಶೋಗಳು ಪ್ರದರ್ಶನಗೊಂಡಿವೆ. ವಿದೇಶದಲ್ಲೂ ಸಹ ಭಾರತಕ್ಕಿಂತಲೂ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೇಗನ್ನಿಸಿತು, ಅವರಿಗೆ ಇಷ್ಟವಾಯ್ತಾ? ಇಲ್ಲವಾ? ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ....

‘ಮಾ ಇಂಟಿ ಬಂಗಾರಂ’ ಟ್ವಿಟ್ಟರ್ ವಿಮರ್ಶೆ, ಸಮಂತಾ ಮ್ಯಾಜಿಕ್ ವರ್ಕ್ ಆಯ್ತಾ?
Maa Inti Bangaram
ಮಂಜುನಾಥ ಸಿ.
|

Updated on:Jun 19, 2026 | 11:45 AM

Share

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣದ ಕೆಲವೆಡೆ ಬೆಳಿಗ್ಗೆ ಶೋಗಳು ಪ್ರದರ್ಶನಗೊಂಡಿವೆ. ವಿದೇಶದಲ್ಲೂ ಸಹ ಭಾರತಕ್ಕಿಂತಲೂ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೇಗನ್ನಿಸಿತು, ಅವರಿಗೆ ಇಷ್ಟವಾಯ್ತಾ? ಇಲ್ಲವಾ? ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ….

ವೆಂಕಿ ರಿವ್ಯೂಸ್ ಎಂಬ ಟ್ವಿಟ್ಟರ್ ಚಾನೆಲ್ ‘ಮಾ ಇಂಟಿ ಬಂಗಾರಂ’ ಒಂದು ಸಾಧಾರಣ ಸಿನಿಮಾ ಎಂದಿದೆ. ‘ಫ್ಯಾಮಿಲಿ ಸ್ಟೋರಿಯನ್ನು ಕೆಟ್ಟದಾಗಿ ತೆರೆ ತರಲಾಗಿದೆ. ಆರಂಭದಿಂದ ಅಂತ್ಯದವರೆಗೆ ಬಹಳ ಸಾಧಾರಣ ರೀತಿಯಲ್ಲಿ ನಿರೂಪಿತವಾದ ಹಾಗೂ ಸುಲಭವಾಗಿ ಊಹಿಸಬಹುದಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ವೇಗ ಪಡೆದುಕೊಂಡರೂ, ಪರಿಣಾಮಕಾರಿಯಲ್ಲದ ಬ್ಯಾಕ್ ಸ್ಟೋರಿ, ದುರ್ಬಲ ಖಳನಾಯಕನ ಪಾತ್ರ ಮತ್ತು ಟ್ವಿಸ್ಟ್​​ಗಳ ಕೊರತೆ ಸಿನಿಮಾನಲ್ಲಿದೆ. ಸಿನಿಮಾದ ಎಮೋಷನ್ ಸೀನ್​​ಗಳು ಸಹ ಸರಿಯಾಗಿ ಟಚ್ ಆಗುವುದಿಲ್ಲ, ಸಮಂತಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಳಪೆ ಹಿನ್ನೆಲೆ ಸಂಗೀತ ಮತ್ತು ಕಳಪೆ ನಿರೂಪಣೆಯು ಚಿತ್ರವು ಹೆಚ್ಚಿನ ಪ್ರಭಾವ ಬೀರದಂತೆ ತಡೆಯುತ್ತದೆ’ ಎಂದಿದ್ದಾರೆ.

ದೀಪಕ್​ಸಿಂಗ್ ಅವರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಷ್ಟವಾಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಯನ್ನು ಅವರು ನೀಡಿದ್ದಾರೆ. ‘ಟಾಲಿವುಡ್​​ಗೆ ಅಗತ್ಯವಾಗಿದ್ದ ಹಿಟ್ ಅನ್ನು ಸಮಂತಾ ನೀಡಿದ್ದಾರೆ. ಸಮಂತಾ ಅವರು ರಾಣಿಯಂತೆ ಸಿನಿಮಾನಲ್ಲಿ ಮಿಂಚಿದ್ದಾರೆ. ಇಡೀ ಸಿನಿಮಾದ ಹೈಲೆಟ್ ಸಮಂತಾ ಅವರೇ ಎಂದಿದ್ದಾರೆ.

ಐತೇ ಎಂಟಿ ಎಂಬ ಟ್ವಿಟ್ಟರ್ ಪೇಜ್​​ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ‘ಸಿನಿಮಾದ ಮೊದಲಾರ್ಧ ಚೆನ್ನಾಗಿದೆ ಒಳ್ಳೆಯ ಕಾಮಿಡಿ ಇದೆ. ಆದರೆ ಇಂಟರ್ವೆಲ್ ಬಳಿಕ ಸಿನಿಮಾ ಸಪ್ಪೆಯಾಗಿದೆ. ಸಿನಿಮಾದ ಎಡಿಟಿಂಗ್ ಅಂತೂ ಬಹಳ ಕೆಟ್ಟದಾಗಿದೆ. ತಮ್ಮ ಮನಸ್ಸಿಗೆ ಬಂದಂತೆ ದೃಶ್ಯಗಳನ್ನು ಕಟ್ ಮಾಡಿ ಜೋಡಿಸಿದ್ದಾರೆ. ಒಂದು ನಿಯಮಿತ ಕ್ರಮವೇ ಇಲ್ಲ’ ಎಂದು ಅವರು ದೂರಿದ್ದಾರೆ.

ದಿಲೀಪ್ ಕುಮಾರ್ ಎಂಬುವರು ಟ್ವೀಟ್ ಮಾಡಿ, ಕುಟುಂಬ ಪ್ರೇಕ್ಷಕರು ಆರಾಮವಾಗಿ ಬಂದು ನೋಡಬಹುದಾದ ಸಿನಿಮಾ ‘ಮಾ ಇಂಟಿ ಬಂಗಾರಂ’. ಸಿನಿಮಾದ ಕತೆ ಹಿಡಿದಿಟ್ಟುಕೊಳ್ಳುತ್ತದೆ. ವಿಶೇಷವಾಗಿ ಸಿನಿಮಾದ ಆಕ್ಷನ್ ಸೀನ್​​ಗಳು ಅದ್ಭುತವಾಗಿವೆ. ಸಮಂತಾ ಅದ್ಭುತವಾಗಿ ಆಕ್ಷನ್ ಮಾಡಿದ್ದಾರೆ. ಈ ಸಿನಿಮಾದ ಬಳಿಕ ಸಮಂತಾಗೆ ಲೇಡಿ ಸೂಪರ್ ಸ್ಟಾರ್ ಟ್ಯಾಗ್ ಕೊಡಬಹುದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Fri, 19 June 26

Follow Us
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ