
ಕೆಲವು ಹೀರೋಯಿನ್ಗಳು ಎಲ್ಲರ ಫೇವರಿಟ್ ಎನಸಿಕೊಂಡು ಬಿಡುತ್ತಾರೆ. ಕೇವಲ ಹೀರೋಗಳಿಗೆ ಮಾತ್ರವಲ್ಲ, ಹೀರೋಯಿನ್ಗಳಿಗೂ ಆ ನಟಿಯರು ಇಷ್ಟ ಆಗುತ್ತಾರೆ. ಸೆಲೆಬ್ರಿಟಿಗಳಿಗೇ ಇಷ್ಟ ಆಗಿದ್ದಾರೆ ಎಂದಾದರೆ ಇನ್ನು ಅವರು ಜನ ಸಾಮಾನ್ಯರಿಗೆ ಇಷ್ಟ ಆಗದೆ ಇರಲು ಸಾಧ್ಯವೇ? ಅಷ್ಟಕ್ಕೂ ಯಾರು ಆ ನಟಿ? ಅವರೇ ಸಮಂತಾ. ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿ ಆಗಿರೋ ಸಮಂತಾ (Samantha) ಎಲ್ಲರ ಫೇವರಿಟ್. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿ ಗಮನ ಸೆಳೆದಿದೆ.
ಸಮಂತಾ ಅವರು ದಕ್ಷಿಣದ ಜೊತೆಗೆ ಹಿಂದಿಯಲ್ಲೂ ನಟಿಸಿದ್ದಾರೆ. ಅವರು ಅನೇಕರ ಫೇವರಿಟ್ ನಟಿ ಎನಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ, ಆಲಿಯಾ ಭಟ್, ರಾಮ್ ಚರಣ್ ಸೇರಿದಂತೆ ಅನೇಕರು ಸಮಂತಾ ಅವರನ್ನು ಹೊಗಳಿದ್ದಾರೆ ಮತ್ತು ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆಯನ್ನು ಹೊರಹಾಕಿದ್ದಾರೆ.
‘ಸಮಂತಾ ಎಂದರೆ ನಂಗೆ ಇಷ್ಟ’ ಎಂದು ಮೃಣಾಲ್ ಠಾಕೂರ್ ಹೇಳಿದ್ದರು. ಮೃಣಾಲ್ ದಕ್ಷಿಣದ ಬಹುಬೇಡಿಕೆಯ ನಟಿ. ನಂಗೆ ಯಾವ ನಟಿಯೂ ಇಷ್ಟ ಇಲ್ಲ ಎಂದು ಹೇಳಬಹುದಿತ್ತು. ಆದರೆ, ಅವರು ಸಮಂತಾ ಹೆಸರನ್ನು ತೆಗೆದುಕೊಂಡರು. ‘ನನಗೆ ಸಮಂತಾ ಜೊತೆ ಆ್ಯಕ್ಷನ್ ಸಿನಿಮಾ ಮಾಡಬೇಕು’ ಎಂದು ಆಲಿಯಾ ಭಟ್ ಅವರು ಈ ಮೊದಲು ಹೇಳಿದ್ದರು. ಆಲಿಯಾ ಭಟ್ ಅವರು ಆ್ಯಕ್ಷನ್ ಮಾಡೋದನ್ನು ಇಷ್ಟಪಡುತ್ತಾರೆ. ಸಮಂತಾ ಕೂಡ ಹಾಗೆಯೇ. ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಬರಲಿ ಎಂದು ಅನೇಕರು ಆಶಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕೂಡ ಸಮಂತಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಸಮಂತಾ ಅವರನ್ನು ಸ್ಯಾಮಿ ಎಂದು ಪ್ರಿತಿಯಿಂದ ಕರೆದರು ರಶ್ಮಿಕಾ. ‘ಸ್ಯಾಮಿ ಅದ್ಭುತ ನಟಿ’ ಎಂದು ಹೇಳಿದರು. ‘ಫೇವರಿಟ್ ನಟಿ ಎಂದರೆ ಅದು ಸಮಂತಾ’ ಎಂದು ರಾಮ್ ಚರಣ್ ಹೇಳಿದ್ದರು.
ಇದನ್ನೂ ಓದಿ: ಸಿನಿಮಾ ಮೇಲಿನ ಪ್ರೀತಿಗೆ ನಾಗ ಚೈತನ್ಯ ಜೊತೆ ಮತ್ತೆ ಒಂದಾಗ್ತಾರಾ ಸಮಂತಾ?
ಸಮಂತಾ ಅವರು ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡರು. ಅವರು ಹೆಚ್ಚಾಗಿ ಸಿನಿಮಾಮಾಡುತ್ತಿಲ್ಲ. 2023ರಲ್ಲಿ ಬಂದ ಅವರ ನಟನೆಯ ‘ಖುಷಿ’ ಅವರ ಅಭಿನಯದ ಕೊನೆಯ ಸಿನಿಮಾ. ಇದಾದ ಬಳಿಕ ಯಾವುದೇ ಚಿತ್ರಗಳು ರಿಲೀಸ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.