ಸದ್ದಿಲ್ಲದೆ ನಡೀತಿದೆ ಸಮಂತಾ ಎರಡನೇ ಮದುವೆ? ನಿರ್ದೇಶಕನ ಜೊತೆ ವಿವಾಹ

ನಟಿ ಸಮಂತಾ ಎರಡನೇ ಮದುವೆ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಸಮಂತಾ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ರಾಜ್ ಪತ್ನಿ ಶ್ಯಾಮಲಿ ಪೋಸ್ಟ್ ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಕುರಿತು ಸಮಂತಾ ಅಥವಾ ರಾಜ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ನಿಜವೇನು ತಿಳಿಯಲು ಕಾದು ನೋಡಬೇಕು.

ಸದ್ದಿಲ್ಲದೆ ನಡೀತಿದೆ ಸಮಂತಾ ಎರಡನೇ ಮದುವೆ? ನಿರ್ದೇಶಕನ ಜೊತೆ ವಿವಾಹ
Samantha
Updated By: ರಾಜೇಶ್ ದುಗ್ಗುಮನೆ

Updated on: Dec 01, 2025 | 11:42 AM

ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ (Samantha) ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿದಿಮೋರು ಅವರನ್ನು ಸಮಂತಾ ಮದುವೆಯಾಗುತ್ತಿದ್ದಾರಂತೆ. ಇಂದು (ಡಿಸೆಂಬರ್ 1) ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಿವಾಹ ನಡೆಯಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಸುದ್ದಿಯ ಬೆನ್ನಲ್ಲೇ, ರಾಜ್ ನಿದಿಮೋರು ಅವರ ಪತ್ನಿ ಶ್ಯಾಮಲಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಚರ್ಚೆಗೆ ಕಾರಣವಾಗಿದೆ.

ಸಮಂತಾ ಹಾಗೂ ರಾಜ್ ಅವರು ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ನಲ್ಲಿ ಒಟ್ಟಾಗಿ ನಟಿಸಿದರು. ಆ ಬಳಿಕ ಇವರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ಸಮಂತಾ ಮೊದಲ ಪತಿ ನಾಗ ಚೈತನ್ಯ ಈಗಾಗಲೇ ಶೋಭಿತಾ ಧುಲಿಪಾಲ್ ಜೊತೆ ಮದುವೆ ಆಗಿ ಹೊಸ ಬಾಳು ಆರಂಭಿಸಿದ್ದಾರೆ. ಅದೇ ರೀತಿ ಸಮಂತಾ ಕೂಡ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.

ರಾಜ್ ಮೊದಲ ಪತ್ನಿ ಪೋಸ್ಟ್

ರಾಜ್ ಅವರ ಮೊದಲ ಪತ್ನಿ ಶ್ಯಾಮಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ‘ಹತಾಶರಾದ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಂತಾ-ರಾಜ್ ಅವರ ವಿವಾಹದ ಸುದ್ದಿ ಚರ್ಚೆ ಆಗುತ್ತಿರುವ ಸಮಯದಲ್ಲಿ ಅವರು ಈ ಪೋಸ್ಟ್ ಅನ್ನು ಪೋಸ್ಟ್ ಮಾಡಿರೋದು ಚರ್ಚೆಗೆ ಕಾರಣ ಆಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ವಿಪರೀತ ತೆಳ್ಳಗಾಗಿದ್ದೀರಿ ಎಂದವರಿಗೆ ಫೋಟೋ ಮೂಲಕ ಖಡಕ್ ಉತ್ತರ ನೀಡಿದ ಸಮಂತಾ

ಇಶಾದಲ್ಲಿ ಮದುವೆ ಏಕೆ?

ಸಮಂತಾ ಮತ್ತು ರಾಜ್ ನಿಧಿಮೋರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸಿಟಾಡೆಲ್’ ನಂತಹ ಸರಣಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ ಅವರ ನಡುವಿನ ಆತ್ಮೀಯತೆ ಹೆಚ್ಚಾಯಿತು. ಸದ್ಗುರು ಜಗ್ಗಿ ವಾಸುದೇವ್ ಅವರ ಮೇಲಿನ ಭಕ್ತಿ ಮತ್ತು ಇಶಾ ಫೌಂಡೇಶನ್‌ನೊಂದಿಗಿನ ಅವರ ಒಡನಾಟದಿಂದಾಗಿ ಸಮಂತಾ ಅಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ವದಂತಿ ಇದೆ.ಸಮಂತಾ ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಇರುವ ಪೋಸ್ಟ್‌ಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಾಡುತ್ತಿದ್ದಾರೆ. ಈ ಮದುವೆಯ ಸುದ್ದಿಗೆ ಸಮಂತಾ ಅಥವಾ ರಾಜ್ ನಿಧಿಮೋರು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.