‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ

ಸಮಂತಾ ಅವರು ತಮ್ಮ ನಿರ್ಮಾಣ ಸಂಸ್ಥೆ ತ್ರಲಾಲಾ ಪ್ರೊಡಕ್ಷನ್ಸ್ ಮೂಲಕ 'ಶುಭಂ' ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ಎಲ್ಲಾ ಕಲಾವಿದರಿಗೂ ಸಮಾನ ಸಂಭಾವನೆ ನೀಡುವುದರ ಮೇಲೆ ಒತ್ತು ನೀಡುತ್ತಿದ್ದಾರೆ. ಸ್ಟಾರ್ ನಟ-ನಟಿಯರಿಗೆ ಹೆಚ್ಚಿನ ಸಂಭಾವನೆ ನೀಡುವುದನ್ನು ವಿರೋಧಿಸುವ ಸಮಂತಾ, ಈ ನಿರ್ಧಾರದಿಂದ ಚಿತ್ರರಂಗದಲ್ಲಿ ಒಂದು ಹೊಸ ಆದರ್ಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.

‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
ಸಮಂತಾ

Updated on: May 07, 2025 | 7:33 AM

ನಟಿ ಸಮಂತಾ (Samantha) ಅವರು ಈಗ ನಿರ್ಮಾಪಕಿ ಕೂಡ ಹೌದು. ಅವರ ನಿರ್ಮಾಣದ ‘ಶುಭಂ’ ಸಿನಿಮಾ ಮೇ 9ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಸಮಂತಾ ಅವರು ತಮ್ಮ ‘ತ್ರಲಾಲಾ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಕಂಡ್ರೆಗುಲಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷ ಎಂದರೆ ಮುಂದಿನ ದಿನಗಳಲ್ಲಿ ಸ್ಟಾರ್ ಹೀರೋಗಳ ಚಿತ್ರವನ್ನು ನಿರ್ದೇಶನ ಮಾಡಲು ಅವರು ರೆಡಿ ಇದ್ದಾರೆ. ಆದರೆ ಕೆಲವು ಷರತ್ತುಗಳಿಗೆ ಅವರು ಒಪ್ಪಬೇಕಿದೆ. ‘ಎಲ್ಲರಿಗೂ ಸಮಾನ ಸಂಭಾವನೆ’ ಎಂಬುದು ಸಮಂತಾ ಅವರ ಪ್ರಮುಖ ನಿಯಮ.

ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ಸಂಭಾವನೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಹೀರೋಗಳಿಗೆ 10 ಕೋಟಿ ರೂಪಾಯಿ ಸಿಕ್ಕರೆ ನಟಿಯರಿಗೆ 1 ಕೋಟಿ ರೂಪಾಯಿಯೂ ಸಿಗೋದಿಲ್ಲ. ಇನ್ನು ಪೋಷಕ ವರ್ಗದಲ್ಲಿ ಕಾಣಿಸಿಕೊಂಡವರ ಕಥೆಯಂತೂ ಕೇಳೋದೇ ಬೇಡ. ಆದರೆ, ಇದರ ಮೇಲೆ ಸಮಂತಾ ಅವರು ನಂಬಿಕೆ ಹೊಂದಿಲ್ಲ. ಸಮಾನ ಸಂಭಾವನೆ ನೀಡುವ ಬಗ್ಗೆ ಅವರು ನಂಬಿಕೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಹೀರೋಗಳು ಒಪ್ಪಿಗೆ ಕೊಟ್ಟರೆ ಮಾತ್ರ ಸಿನಿಮಾ ಮಾಡೋದಾಗಿ ಅವರು ಹೇಳಿದ್ದಾರೆ.

‘ಸ್ಟಾರ್ ಸಿನಿಮಾಗಳಿಗೆ ನಾನು ಎಂದಿಗೂ ಇಲ್ಲ ಎಂದು ಹೇಳೋದಿಲ್ಲ. ನಮ್ಮ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಸಿದ್ಧವಾಗುವ ಸಿನಿಮಾಗಳ ಕುರಿತ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ. ನಾನು ಸಮಾನ ಕೌಶಲ್ಯ, ಸಮಾನ ಸಂಭಾವನೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಎಲ್ಲರೂ ಹೊಸಬರೇ ಆದರೆ ಸಿನಿಮಾ ಮಾಡೋದು ಸುಲಭ. ಬೇರೆ ಬೇರೆ ಸಿನಿಮಾಗಳು ಬೇರೆ ಬೇರೆ ವಿಚಾರಗಳನ್ನು ಕೇಳುತ್ತವೆ. ನಾನು ಎಲ್ಲಾ ಸಿನಿಮಾಗಳಲ್ಲಿ ಒಂದೇ ರೀತಿಯ ಸಂಭಾವನೆ ನೀಡಲು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್

ಇದನ್ನೂ ಓದಿ: ಕಳಪೆ ಪ್ರದರ್ಶನ ಸಮಂತಾ ಶೋ ರದ್ದು ಮಾಡಿದ ಅಮೆಜಾನ್ ಪ್ರೈಂ

ಸಮಂತಾ ಅವರ ಆದರ್ಶ ಚಿತ್ರರಂಗದಲ್ಲಿ ಕೆಲಸ ಮಾಡೋದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಸ್ಟಾರ್ ಹೀರೋಗಳು ಹೆಚ್ಚಿನ ಸಂಭಾವನೆ ಕೊಟ್ಟರೆ ಮಾತ್ರ ನಟಿಸಲು ಬರುತ್ತಾರೆ. ಸಮಂತಾ ಆದರ್ಶದಂತೆ ಹೋದರೆ ಉಳಿದ ಕಲಾವಿದರಿಗೂ ಆಗ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಆಗ ಸಿನಿಮಾದ ಬಜೆಟ್ ಮೀರುತ್ತದೆ. ಉಳಿದ ಕಲಾವಿದರಿಗೆ ಕೊಟ್ಟಷ್ಟೇ ಸಂಭಾವನೆಯನ್ನು ಸ್ಟಾರ್​ಗಳಿಗೂ ನೀಡುತ್ತೇನೆ ಎಂದಾಗ ಅದು ಸಾಧ್ಯವಾಗುವುದಿಲ್ಲ. ಇದನ್ನು ಅವರು ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.