2019ರಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡಿದ್ವೋ. ವಿವಾದಗಳು ಕೂಡ ಅಷ್ಟೇ ಗದ್ದಲ ಎಬ್ಬಿಸಿದ್ವು. ತೆಲುಗು, ತಮಿಳು, ಹಿಂದಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ಕಾಂಟ್ರವರ್ಸಿಗಳದ್ದೇ ಕಾರುಬಾರು ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಯಾಱರು ಯಾವ್ಯಾವ ಕಾರಣಕ್ಕೆ ಕಿತ್ತಾಡ್ಕೊಂಡ್ರು..? ಸ್ಯಾಂಡಲ್ವುಡ್ನಲ್ಲಾದ ಐದು ಪ್ರಮುಖ ವಿವಾದಗಳು ಇಲ್ಲಿವೆ.
ಉರಿಯೋ ಬೆಂಕಿಗೆ ತುಪ್ಪ ಸುರಿಯೋದು. ಗಾಯದ ಮೇಲೆ ಉಪ್ಪು ಸವರೋದು ಎಲ್ಲಾ ಚಿತ್ರರಂಗದಲ್ಲೂ ನಡೀತಾನೇ ಇರುತ್ತೆ. ಕೆಲವೊಮ್ಮೆ ಗೊತ್ತಿದ್ದೋ.. ಗೊತ್ತಿಲ್ಲದೆಯೋ ತಾರೆಯರು ವಿವಾದಕ್ಕೆ ಸಿಕ್ಕಿಕೊಳ್ತಾರೆ. ಈ ವರ್ಷ ಸ್ಯಾಂಡಲ್ವುಡ್ ನಟ-ನಟಿಯರು ಕೂಡ ಹೀಗೆ ವಿವಾದಕ್ಕೆ ಸಿಲುಕಿದ್ರು. 2019ರಲ್ಲಿ ಕನ್ನಡ ಚಿತ್ರರಂಗವನ್ನ ಮುಜುಗರಕ್ಕೀಡು ಮಾಡಿದೆ, ಸಿನಿಪ್ರೇಮಿಗಳನ್ನ ಬೆಚ್ಚಿಬೀಳಿಸಿದ ಐದು ವಿವಾದಗಳನ್ನ ಒಂದೊಂದಾಗೇ ನಿಮ್ಮ ಮುಂದೆ ಇಡ್ತಾ ಹೋಗ್ತೀವಿ.
ಮದಕರಿಗಾಗಿ ದುರ್ಯೋಧನ.. ಪೈಲ್ವಾನ್ ಘೋರಯುದ್ಧ!
ರಾಕ್ಲೈನ್ ನಿರ್ಮಾಣದ ವೀರಮದಕರಿ ಕಿಚ್ಚ ಹಾಗೂ ದಾಸನ ಅಭಿಮಾನಿಗಳಿಗೆ ಕಿಚ್ಚು ಹಚ್ಚಿತ್ತು. ಇಬ್ಬರೂ ಕಿತ್ತಾಟಕ್ಕೆ ಇಳಿಯುತ್ತಿದ್ದಂತೆ ಕಿಚ್ಚನ ಪರ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ ಅಖಾಡಕ್ಕಿಳಿದಿದ್ರು. ಸುದೀಪ್ ವಾಲ್ಮೀಕಿ ಸಮುದಾಯದ ನಟ. ಹೀಗಾಗಿ ಸ್ವಾಮೀಜಿ ವೀರಮದಕರಿ ಪಾತ್ರದಲ್ಲಿ ಕಿಚ್ಚನೇ ಅಭಿನಯಿಸ್ಬೇಕು. ಅದನ್ನ ಬಿಟ್ಟು ಬೇರೆ ಯಾರೇ ನಟಿಸಿದ್ರೂ ತಮ್ಮ ವಿರೋಧವಿದೆ ಅಂತ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಗುಡುಗಿದ್ದರು. ಸ್ವಾಮೀಜಿ ಆಡಿದ ಈ ಮಾತುಗಳು ಮತ್ತಷ್ಟು ವಿವಾದಕ್ಕೆ ಸಿಲುಕಿಸಿತ್ತು. ಜಾತಿ ಆಧಾರದ ಮೇಲೆ ಸಿನಿಮಾದ ಪಾತ್ರಗಳನ್ನ ಆಯ್ಕೆ ಮಾಡ್ಬೇಕಾ ಅಂತ ಸಿನಿಪ್ರೇಮಿಗಳು ಕಿಡಿಕಾರಿದ್ರು.
ಇಷ್ಟೆಲ್ಲಾ ಆದ್ರೂ ರಾಕ್ಲೈನ್ ವೆಂಕಟೇಶ್ ವೀರ ಮದಕರಿ ಸಿನಿಮಾದಿಂದ ಹಿಂಜರಿಯಲಿಲ್ಲ. ಮದಕರಿ ನಾಯಕ ಇತಿಹಾಸ ಕಂಡ ನಾಯಕ. ಯಾರು ಬೇಕಾದ್ರೂ ಮದಕರಿ ಬಗ್ಗೆ ಸಿನಿಮಾ ಮಾಡ್ಬಹುದು. ಮದಕರಿ ಬಗ್ಗೆ ಒಟ್ಟು 9 ಪರಂಪರೆಗಳಿವೆ. ಅವುಗಳಲ್ಲಿ ಯಾರು ಯಾವ ಪರಂಪರೆಯನ್ನಾದ್ರೂ ಸಿನಿಮಾ ಮಾಡ್ಬಹುದು ಅಂತ ವಾದ ಮಂಡಿಸಿದ್ದರು. ಇತ್ತ ಸುದೀಪ್ ಕೂಡ ಮದಕರಿ ಸಿನಿಮಾಗಾಗಿ ತಯಾರಿ ನಡೆಸಿದ್ರು. ಹೀಗಾಗಿ ಸದ್ಯಕ್ಕೆ ವೀರಮದಕರಿ ನಾಯಕ ವಿವಾದ ಮುಗಿಯೋ ಲಕ್ಷಣಗಳು ಕಾಣಿಸಲೇ ಇಲ್ಲ. ಇಷ್ಟೆಲ್ಲ ಗದ್ದಲ ನಡೆಯೋ ಹೊತ್ತಿಗೆ 2019 ಕ್ಕೆ ಪಾದಾರ್ಪಣೆ ಮಾಡಿ ಆಗಿತ್ತು. ಅಷ್ಟರಲ್ಲೆ ಕಿಚ್ಚ ಸುದೀಪ್ ಒಂದು ತೀರ್ಮಾನಕ್ಕೆ ಬಂದಿದ್ರು.
ದರ್ಶನ್ ಮದಕರಿ ಆಗಲಿ ಎಂದ ಕಿಚ್ಚ:
ಉಪ್ಪಿಗೆ ಐ ಲವ್ ಯು ಹೇಳಿ ಕಣ್ಣೀರಿಟ್ಟ ಡಿಂಪಲ್ ಕ್ವೀನ್!
ಐ ಲವ್ ಯೂ ಸಿನಿಮಾದ ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಸಿಕ್ಕಿಕೊಂಡಿತ್ತು. ರಚಿತಾ ಅಭಿಮಾನಿಗಳು ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದನ್ನ ವಿರೋಧಿಸಿದ್ದರು. ಹೀಗಾಗಿ ರಚಿತಾ ರಾಮ್ ಇನ್ಮುಂದೆ ಬೋಲ್ಡ್ ಸೀನ್ಗಳಲ್ಲಿ ನಟಿಸೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ರು.
ಎಸ್.. ರಚಿತಾ ರಾಮ್ ಆಡಿದ ಈ ಮಾತು ಐ ಲವ್ ಯು ಚಿತ್ರತಂಡವನ್ನ ಮುಜುಗರಕ್ಕೆ ಒಳಪಡಿಸಿತ್ತು. ಇದರ ಹಿಂದೆನೇ ರಚಿತಾ ರಾಮ್, ಪ್ರಿಯಾಂಕ ಉಪೇಂದ್ರರನ್ನ ಕೆರಳಿಸಿದ್ರು. ಐ ಲವ್ ಯು ಚಿತ್ರದ ಮಾತನಾಡಿ ಮಾಯವಾದೆ ಹಾಡನ್ನ ಚಿನ್ನಿ ಪ್ರಕಾಶ್ ನಿರ್ದೇಶಿಸ್ಬೇಕಿತ್ತು. ಆದ್ರೆ ಈ ಹಾಡಿನಲ್ಲಿ ನಟಿಸುವಾಗ ನಾನು ಮುಜುಗರಕ್ಕೆ ಒಳಗಾಗಿದ್ದೆ. ಆ ವೇಳೆ ಉಪೇಂದ್ರ ಅವ್ರು ನೀನು ಧಾರ್ಮಿಕ, ನಾನು ಸಂತೋಷ್. ಇದು ಕೇವಲ ಪಾತ್ರವಷ್ಟೇ ಅಂತ ಹೇಳಿ ಒಪ್ಪಿಸಿದ್ರು. ಹೀಗಾಗಿ ಬೋಲ್ಡ್ ಆಗಿ ಸಾಂಗ್ನಲ್ಲಿ ನಟಿಸಿದೆ ಎಂದು ಹೇಳಿಕೆ ನೀಡಿದ್ರು. ಅದು ಉಪೇಂದ್ರ ಪತ್ನಿ ಪ್ರಿಯಾಂಕಾ ಕಣ್ಣುಗಳನ್ನ ಕೆಂಪಗಾಗಿಸಿತ್ತು. ಹೀಗಾಗಿ ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಕೆಂಡಕಾರಿದ್ದರು.
ರಚಿತಾ ಇಷ್ಟವಿಲ್ಲದಿದ್ದರೆ ಈ ಸಿನಿಮಾ ಮಾಡಬಾರದಿತ್ತು. ಅದನ್ನ ಬಿಟ್ಟು ಹೋದಲ್ಲೆಲ್ಲಾ ಉಪೇಂದ್ರ ಅವರ ಹೆಸರನ್ನ ಎಳೆದು ತರ್ತಿದ್ದಾರೆ ಎಂದು ಕಿಡಿಕಾರಿದ್ದರು. ಹಾಗಂತ ಈ ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಅಪ್ಪ ಅಮ್ಮನಿಗೂ ನನ್ನ ಬೋಲ್ಡ್ ಪಾತ್ರ ಇಷ್ಟ ಆಗಿಲ್ಲ ಅಂತ ರಚಿತಾ ಕಣ್ಣೀರು ಹಾಕಿದ್ರು. ಕೊನೆಗೂ ಐ ಲವ್ ಯು ವಿವಾದಗಳನ್ನ ಹೊತ್ತು ಬಿಡುಗಡೆ ಆಯ್ತು. ರಚಿತಾ ಮತ್ತೆ ಐ ಲವ್ ಯು ಚಿತ್ರತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ.
ಟ್ರೋಲ್ ಹೈಕ್ಳ ಕಾಟ.. ಗಾಂಚಲಿ ಗೀತಾ ಗಲಿಬಿಲಿ!
‘ನನಗೆ ಯಾವ ಭಾಷೆನೂ ಸರಿಯಾಗಿ ಬರೋದಿಲ್ಲ’ ಹೌದು.. ಇದೇ ಮಾತು.. ರಶ್ಮಿಕಾ ಕೊಟ್ಟ ಈ ಹೇಳಿಕೆಗೆ ಟ್ರೋಲಿಗರು ಉಗಿದು ಉಪ್ಪಿನಕಾಯಿ ಹಾಕಿದ್ರು. ಬೆಳೆಯೋಕೆ ಕನ್ನಡ ಬೇಕು. ಬೆಳೆದು ನಿಂತ್ಮೇಲೆ ಕನ್ನಡ ಬೇಡ್ವಾ ಅಂತ ಕಿಡಿಕಾರಿದ್ರು.
ರಶ್ಮಿಕಾ ಬಾಲ್ಯದ ಫೋಟೋಗಳಿಗೆ ಕಿಡಿಗೇಡಿಗಳು ಅಶ್ಲೀಲ ಪದ ಬಳಸಿದ್ರು. ಇದು ಕಿರಿಕ್ ಸುಂದರಿಯ ಕಣ್ಣನ್ನ ಕೆಂಪಗಾಗಿಸಿತ್ತು. ಹೀಗಾಗಿ ಟ್ರೋಲ್ ಮಾಡಿದ ಪೊರ್ಕಿಗಳನ್ನ ತನ್ನ ಪದಗಳಲ್ಲಿ ತಿವಿದು ಹಾಕಿದ್ರು.
ಪೈಲ್ವಾನ್ ಪೈರಸಿ.. ದಾಸನ ಅಭಿಮಾನಿಗಳೆಡೆಗೆ ಬೊಟ್ಟು:
ಪೈಲ್ವಾನ್ ಪೈರಸಿ ವೇಳೆ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ಕಿತ್ತಾಟ ತಾರಕಕ್ಕೇರುತ್ತಿತ್ತು. ಇತ್ತ ದಾಸ ಅನ್ನದಾತರನ್ನ ಕೆಣಕಿದ್ರೆ ಸುಮ್ಮನಿರೋದಿಲ್ಲ ಅಂತ ಟ್ವೀಟ್ ಮಾಡಿ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ರು. ಮತ್ತೊಂದ್ಕಡೆ ಕಿಚ್ಚ ಆಕ್ರೋಶದಲ್ಲಿ ಕೈಗೆ ಬಳೆತೊಟ್ಟಿಲ್ಲ ಅಂತ ಮಾಡಿದ ಟ್ವೀಟ್ ವಿವಾದಕ್ಕೆ ಸಿಲುಕಿತ್ತು.
ಸಂಜನಾ-ವಂದನಾ ಫೈಟ್.. ಏನಿದು ಗಲಾಟೆ:
Published On - 7:28 pm, Tue, 31 December 19