AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ತೆಲುಗು ಪ್ರೆಸ್​ಮೀಟ್​ನಲ್ಲಿ ಉಪ್ಪಿಗೆ ಸರ್​ಪ್ರೈಸ್ ನೀಡಿದ ‘ಎ’ ಸಿನಿಮಾದಲ್ಲಿ ನಟಿಸಿದ್ದ ಬಾಲಕ

ಉಪೇಂದ್ರ ನಟನೆಯ 'ಯುಐ' ಚಿತ್ರದ ಪ್ರಚಾರದ ವೇಳೆ ಆಸಕ್ತಿಕರ ಘಟನೆ ನಡೆದಿದೆ. 1998ರ 'ಎ' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ, ದೊಡ್ಡವನಾಗಿ ಉಪೇಂದ್ರರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

‘ಯುಐ’ ತೆಲುಗು ಪ್ರೆಸ್​ಮೀಟ್​ನಲ್ಲಿ ಉಪ್ಪಿಗೆ ಸರ್​ಪ್ರೈಸ್ ನೀಡಿದ ‘ಎ’ ಸಿನಿಮಾದಲ್ಲಿ ನಟಿಸಿದ್ದ ಬಾಲಕ
ಉಪೇಂದ್ರ
ರಾಜೇಶ್ ದುಗ್ಗುಮನೆ
|

Updated on:Dec 20, 2024 | 10:49 AM

Share

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇಂದು (ಡಿಸೆಂಬರ್ 20) ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರಭಾಷಿಗರು ಚಿತ್ರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಉಪೇಂದ್ರ ಅವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದರು. ಈ ವೇಳೆ ಅವರಿಗೆ ಒಂದು ಸರ್​ಪ್ರೈಸ್ ಕಾದಿತ್ತು. ‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಬಾಲಕ ಈಗ ಬೆಳೆದು ದೊಡ್ಡವನಾಗಿ ಉಪ್ಪಿ ಎದುರು ಬಂದು ನಿಂತಿದ್ದಾರೆ. ಈ ಅಪರೂಪದ ವಿಡಿಯೋ ವೈರಲ್ ಆಗಿದೆ.

‘ಎ’ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ‘ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್’ ಎಂದು ಹೇಳುತ್ತಾ ಸುತ್ತಾಡುತ್ತಾರೆ ಉಪ್ಪಿ. ಈ ಚಿತ್ರದ ಆರಂಭದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಉಪೇಂದ್ರ ಸಾಯಿಸೋ ದೃಶ್ಯ ಇದೆ. ಈ ವೇಳೆ ರೈಲ್ವೆ ಟ್ರ್ಯಾಕ್ ಬಳಿ ಉಪ್ಪಿ ಅವರು ನಡೆದು ಬರುವಾಗ, ಮಹಿಳೆ ಒಬ್ಬಳು ಪತಿಗೆ ‘ಸತ್ತೋಗು’ ಎಂದು ಹೇಳುತ್ತಾಳೆ. ಮರುಕ್ಷಣವೇ ಗುಂಡು ಹೊಡೆದು ಉಪ್ಪಿ ಆ ವ್ಯಕ್ತಿಯನ್ನು ಸಾಯಿಸುತ್ತಾರೆ.

ಈ ದಂಪತಿಯ ಮಗ ಅಲ್ಲಿಯೇ ಅಳುತ್ತಾ ಕೂತಿರುತ್ತಾನೆ. ಆ ಬಾಲಕನ ಬಳಿ ಬರೋ ಉಪ್ಪಿ, ‘ಅಳಬೇಡ, ಅವರ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ. ಸೆಂಟಿಮೆಂಟ್ ಇದ್ರೆ ಖಾಲಿ ತಟ್ಟೆನೇ ಗಟ್ಟಿ ಆಗಿಬಿಡುತ್ತದೆ. ಪ್ರಪಂಚ ವಿಶಾಲವಾಗಿದೆ. ಆರಾಮಗಿ ಹೋಗಿ ಬದುಕಿಕೋ’ ಎನ್ನುತ್ತಾರೆ ಉಪ್ಪಿ. ಆ ಕ್ಷಣವೇ ಬಾಲಕ ಓಡಿ ಹೋಗುತ್ತಾನೆ.

ಇದನ್ನೂ ಓದಿ: ‘ಯುಐ’ ಚಿತ್ರ ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಸವಾಲು ಹಾಕಿದ ಉಪೇಂದ್ರ; ಚಾಲೆಂಜ್ ಸ್ವೀಕರಿಸುತ್ತೀರಾ?

ಈ ವೇಳೆ ಉಪೇಂದ್ರ ಒಂದು ಮಾತು ಹೇಳುತ್ತಾರೆ. ‘ಈ ಹುಡುಗ ಓಡ್ತಿರೋ ಸ್ಪೀಡ್ ನೋಡಿದ್ರೆ ಸುಭಾಷ್ ಚಂದ್ರ ಬೋಸ್ ಆಗಬಹುದು’ ಎನ್ನುತ್ತಾರೆ. ಈಗ ಹುಡುಗ ದೊಡ್ಡವನಾಗಿ ಉಪ್ಪಿ ಎದುರು ಬಂದಿದ್ದಾರೆ. ‘ಯುಐ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಈ ವ್ಯಕ್ತಿ, ‘ಎ ಚಿತ್ರದಲ್ಲಿ ಇರೋ ಹುಡುಗ ನಾನೇ’ ಎಂದು ಅವರು ಪರಿಚಯಿಸಿಕೊಂಡರು. ಇದನ್ನು ಕೇಳಿ ಉಪ್ಪಿ ಶಾಕ್ ಆದರು, ‘ಅಲ್ಲಿ ಓಡಿ ಹೋದ ನೀವು, ಈಗ ಬಂದಿದ್ದೀರಾ’ ಎಂದು ಕೇಳಿ ನಕ್ಕರು ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:48 am, Fri, 20 December 24

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್