AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ ಸಿಎಂ ಆದರೆ ಮೊದಲು ಮಾಡೋ ಕೆಲಸ ಏನು? ಅವರೇ ಹೇಳಿದ್ರು ಕೇಳಿ

ಉಪೇಂದ್ರ ನಟನೆಯ ಹೊಸ ಚಿತ್ರ 'ಯುಐ' ಬಿಡುಗಡೆಯಾಗಿದೆ. ಅವರ ಹಳೆಯ ವೈರಲ್ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಉಪೇಂದ್ರ ಅವರು ತಮ್ಮ ಆಲೋಚನೆಗಳ ಬಗ್ಗೆ ಹೇಳಿಕೊಂಡಿದ್ದರು. ಅವರ ರಾಜಕೀಯ ಆಕಾಂಕ್ಷೆಗಳು ಮತ್ತು ಮುಖ್ಯಮಂತ್ರಿಯಾದರೆ ಮಾಡುವ ಕೆಲಸಗಳ ಬಗ್ಗೆ ಮಾತನಾಡಿದ್ದರು.

ಉಪೇಂದ್ರ ಸಿಎಂ ಆದರೆ ಮೊದಲು ಮಾಡೋ ಕೆಲಸ ಏನು? ಅವರೇ ಹೇಳಿದ್ರು ಕೇಳಿ
ಉಪೇಂದ್ರ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 20, 2024 | 7:43 AM

Share

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರವನ್ನು ಜನರು ನೋಡಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈಗ ಉಪೇಂದ್ರ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿದೆ. ಈ ವಿಡಿಯೋಗಳಲ್ಲಿ ಉಪೇಂದ್ರ ಅವರು ತಮ್ಮ ಆಲೋಚನೆಗಳ ಬಗ್ಗೆ ಹೇಳಿಕೊಂಡಿದ್ದರು.

ಉಪೇಂದ್ರ ಅವರು ‘ಪ್ರಾಜಾಕೀಯ’ ಹೆಸರಿನ ಪಕ್ಷ ಆರಂಭಿಸಿದ್ದಾರೆ. ಅವರ ಪಕ್ಷದವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಮುಂದೊಂದು ದಿನ ಸ್ಪರ್ಧೆ ಮಾಡಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಒಂದೊಮ್ಮೆ ಅವರು ಸಿಎಂ ಆದರೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉಪೇಂದ್ರ ಉತ್ತರಿಸಿದ್ದರು. ಶಿವರಾಜ್​ಕುಮಾರ್ ಜೊತೆ ಕಾರ್ಯಕ್ರಮ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದರು.

‘ನೀವು ಸಿಎಂ ಆದರೆ, ಮಾಡುವ ಮೊದಲ ಕೆಲಸ ಏನು’ ಎಂದು ಶಿವರಾಜ್​ಕುಮಾರ್ ಕೇಳಿದರು. ‘ನಾನು ಮೊದಲು ವಿಧಾನಸೌಧದ ಬಾಗಿಲು ಹಾಕಿಸುತ್ತೇನೆ. ನಂದು ಪ್ರಜಾಕೀಯ. ವಿಧಾನಸೌಧ ನೋಡಿದರೆ ರಾಜಕೀಯ ಎನಿಸುತ್ತದೆ. ರಾಜರು ತರ ಅರಮನೆ ಕಟ್ಟಿಕೊಂಡಿದ್ದಾರೆ’ ಎಂದಿದ್ದರು ಉಪೇಂದ್ರ.

‘ನನ್ನ ಪ್ರಕಾರ ಎಲ್ಲಾ ಶಾಸಕರು ಕ್ಷೇತ್ರಕ್ಕೆ ಬಂದು ಕೆಲಸ ಮಾಡಬೇಕು. ವಿಧಾನಸೌಧವನ್ನು ಮ್ಯೂಸಿಯಂ ಮಾಡಬೇಕು. ವೀಕೆಂಡ್​ನಲ್ಲಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು. ಪ್ರವಾಸಿ ತಾಣ ಮಾಡಬೇಕು’ ಎಂದು ಹೇಳಿದರು ಉಪೇಂದ್ರ. ಈ ಆಲೋಚನೆ ಶಿವರಾಜ್​ಕುಮಾರ್​ಗೆ ಇಷ್ಟ ಆಗಿತ್ತು. ‘ನೀವು ಸಿನಿಮಾ ರೀತಿ ಆಲೋಚನೆ ಮಾಡಿದ್ದೀರಿ ಅದು ನನಗೆ ಇಷ್ಟ ಆಯಿತು’ ಎಂದು ಶಿವಣ್ಣ ಹೇಳಿದ್ದಾರೆ.

View this post on Instagram

A post shared by Devu Uppi (@devu.uppi.33)

ಇದನ್ನೂ ಓದಿ: ಶಿವರಾಜ್​ಕುಮಾರ್​ ಹೊಸ ಸಿನಿಮಾ ಅನೌನ್ಸ್; ‘ಎಂಬಿ’ ಚಿತ್ರಕ್ಕೆ ಮುಂಬೈ ನಿರ್ಮಾಣ ಸಂಸ್ಥೆ ಬಂಡವಾಳ

ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಒಟ್ಟಾಗಿ ಕೆಲಸ ಮಾಡಿದ್ದಾರೆ. ಶಿವಣ್ಣ ನಟನೆಯ ‘ಓಂ’ ಸಿನಿಮಾಗೆ ಉಪೇಂದ್ರ ನಿರ್ದೇಶನ ಇತ್ತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈಗ ಶಿವಣ್ಣ ಅಮೆರಿಕ ತೆರಳಿದ್ದಾರೆ. ಕ್ಯಾನ್ಸರ್​ ಆಪರೇಷನ್​ಗೆ ಅವರು ಅಲ್ಲಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಯುಐ’ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಈ ಜೋಡಿ ‘ಕಬ್ಜಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿತ್ತು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.