AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ಸಿನಿಮಾ ಅದ್ದೂರಿ ಬಿಡುಗಡೆ: ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ನೋಡಿ..

ನಟ ಉಪೇಂದ್ರ ಅವರು ‘ಯುಐ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ ಕಾರಣದಿಂದ ಸಖತ್ ಹೈಪ್ ಸೃಷ್ಟಿ ಆಗಿದೆ. ಇಂದು (ಡಿಸೆಂಬರ್​ 20) ಗ್ರ್ಯಾಂಡ್​ ಆಗಿ ‘ಯುಐ’ ಸಿನಿಮಾ ಬಿಡುಗಡೆ ಆಗಿದೆ. ಸದಾ ಡಿಫರೆಂಟ್​ ಆಗಿ ಸಿನಿಮಾ ಮಾಡುವ ಉಪೇಂದ್ರ ಅವರು ಈ ಬಾರಿ ಕೆಲವು ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಎದುರು ಬಂದಿದ್ದಾರೆ. ಸಿನಿಮಾದ ಫಸ್ಟ್​ ಹಾಫ್​ ವಿಮರ್ಶೆ ಇಲ್ಲಿದೆ..

‘ಯುಐ’ ಸಿನಿಮಾ ಅದ್ದೂರಿ ಬಿಡುಗಡೆ: ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ನೋಡಿ..
Upendra
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Dec 20, 2024 | 10:01 AM

ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ಖಂಡಿತವಾಗಿಯೂ ಡಿಫರೆಂಟ್​ ಆಗಿರುತ್ತದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಮೊದಲ ಸಿನಿಮಾದಿಂದಲೂ ಉಪೇಂದ್ರ ಆ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಯುಐ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಇಂದಿನ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂಬ ಸುಳಿವನ್ನು ಟ್ರೇಲರ್​ ಮೂಲಕ ನೀಡಲಾಗಿತ್ತು. ಇಂದು (ಡಿ.20) ಮುಂಜಾನೆಯೇ ಅಭಿಮಾನಿಗಳು ‘ಯುಐ’ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಈ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಹೈಲೈಟ್​ ಆಗಿರುವ ಅಂಶಗಳ ಬಗ್ಗೆ ಇಲ್ಲಿದೆ ವಿವರ..

  1. A, ಶ್ ರೀತಿ ‘ಯುಐ’ನಲ್ಲೂ ಸಿನಿಮಾದೊಳಗೊಂದು ಸಿನಿಮಾ ತೋರಿಸುತ್ತಿರುವ ಉಪೇಂದ್ರ. ಓಪನಿಂಗ್ ಸೀನ್ ತುಂಬ ಡಿಫರೆಂಟ್ ಆಗಿದೆ.
  2. ನಿರ್ದೇಶಕನಾಗಿಯೇ ಉಪೇಂದ್ರ ಪಾತ್ರ ಪರಿಚಯ. ‘ನೀವು ದಡ್ಡರಾಗಿದ್ರೆ ಮಾತ್ರ ಪೂರ್ತಿ ಸಿನಿಮಾ ನೋಡಿ’ ಎಂದು ಸವಾಲು ಹಾಕಿದ ಉಪೇಂದ್ರ.
  3. ಫ್ಯಾನ್ಸ್ ನಿರೀಕ್ಷಿಸೋದಕ್ಕಿಂತ ಡಿಫರೆಂಟ್ ಆಗಿ ಎಂಟ್ರಿ ನೀಡುವ ಹೀರೋ. ಪ್ರೇಕ್ಷಕರು ಆ್ಯಕ್ಷನ್ ಬಯಸುವಂತಹ ಸೀನ್‌ನಲ್ಲಿ ಶಾಂತಿ ಪಾಠ ಮಾಡುವ ಹೀರೋ.
  4. ಎರಡು ಬೇರೆ ಬೇರೆ ಶೇಡ್‌ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಸತ್ಯ ಮತ್ತು ಕಲ್ಕಿ ಭಗವಾನ್ ಪಾತ್ರದಲ್ಲಿ ಉಪೇಂದ್ರ ನಟನೆ ಮಾಡಿದ್ದಾರೆ.
  5. ಅಸಮಾನತೆ, ಬಡತನ ಇತ್ಯಾದಿ ಸಮಸ್ಯೆಗಳ ಹಿನ್ನೆಲೆಯಲ್ಲಿ ‘ಯುಐ’ ಸಿನಿಮಾ ಕಥೆ ಸಾಗುತ್ತದೆ. ಅಲ್ಲಲ್ಲಿ ಪ್ರೇಕ್ಷಕರಿಗೆ ಗೊಂದಲವನ್ನೂ ಮೂಡಿಸುತ್ತದೆ.
  6. ಚಿಕ್ಕದೊಂದು ಪಾತ್ರದಲ್ಲಿ ‘ಮಠ’ ಗುರುಪ್ರಸಾದ್ ನಟಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ಹೀರೋಯಿನ್ ರೀಷ್ಮಾ ನಾಣಯ್ಯ ಪಾತ್ರ ಹೆಚ್ಚು ಹೈಲೈಟ್ ಆಗಿಲ್ಲ.
  7. ಉಪೇಂದ್ರ ಅವರ ಪ್ರಜಾಕೀಯದ ವಿಚಾರಗಳೇ ‘ಯುಐ’ ಕಥೆ ಆದಂತಿದೆ. ಪ್ರಸ್ತುತ ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ಫಿಲ್ಮೀ ಟಚ್ ನೀಡಿದ ಉಪೇಂದ್ರ.
  8. ಮನರಂಜನೆಗಿಂತಲೂ ಗಂಭೀರವಾದ ವಿಷಯಗಳ ಮಂಡನೆಗೆ ಉಪೇಂದ್ರ ಹೆಚ್ಚು ಗಮನ ನೀಡಿದ್ದಾರೆ. ಹಾಗಾಗಿ ಇದು ಮಾಮೂಲಿ ಸಿನಿಮಾಗಳಿಗಿಂತ ಭಿನ್ನವಾಗಿದೆ.
  9. ಮಾಮೂಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್, ರೊಮ್ಯಾನ್ಸ್ ಹೊರತುಪಡಿಸಿ ಬೇರೆ ರೀತಿಯಲ್ಲಿ ಸಿನಿಮಾ ಕಟ್ಟಿಕೊಡಲು ಉಪೇಂದ್ರ ಪ್ರಯತ್ನಿಸಿದ್ದಾರೆ.
  10. ‘ಯುಐ’ ಎಂದರೆ ಏನು ಎಂಬ ಪ್ರಶ್ನೆ ಎಲ್ಲರಿಗೂ ಇದೆ‌. ಆದರೆ ಫಸ್ಟ್‌ಹಾಫ್‌ನಲ್ಲಿ ಅದಕ್ಕೆ ಉತ್ತರ ಸಿಗಲ್ಲ. ಉತ್ತರ ಸಿಗಬೇಕಿದ್ದರೆ ಸೆಕೆಂಡ್ ಹಾಫ್‌ಗೆ ಕಾಯಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:28 pm, Thu, 19 December 24

ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ