AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್​ ಹೊಸ ಸಿನಿಮಾ ಅನೌನ್ಸ್; ‘ಎಂಬಿ’ ಚಿತ್ರಕ್ಕೆ ಮುಂಬೈ ನಿರ್ಮಾಣ ಸಂಸ್ಥೆ ಬಂಡವಾಳ

ನಟ ಶಿವರಾಜ್​ಕುಮಾರ್​ ಅವರು ಅನಾರೋಗ್ಯದ ಕಾರಣದಿಂದ ಸಿನಿಮಾದ ಕೆಲಸಗಳಿಗೆ ಸಣ್ಣ ಬ್ರೇಕ್​ ನೀಡಿದ್ದಾರೆ. ಅದರ ನಡುವೆಯೂ ಅಭಿಮಾನಿಗಳಿಗೆ ಖುಷಿ ನೀಡುವಂತಹ ಸುದ್ದಿಯೊಂದು ಸಿಕ್ಕಿದೆ. ಶಿವಣ್ಣ ನಟಿಸಲಿರುವ ಹೊಸ ಸಿನಿಮಾಗೆ ಮುಂಬೈ ಮೂಲದ ‘ADD-ONE ಫಿಲ್ಮ್ಸ್​’ ನಿರ್ಮಾಣ ಸಂಸ್ಥೆಯು ಬಂಡವಾಳ ಹೂಡಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಶಿವರಾಜ್​ಕುಮಾರ್​ ಹೊಸ ಸಿನಿಮಾ ಅನೌನ್ಸ್; ‘ಎಂಬಿ’ ಚಿತ್ರಕ್ಕೆ ಮುಂಬೈ ನಿರ್ಮಾಣ ಸಂಸ್ಥೆ ಬಂಡವಾಳ
Shivarajkumar With Mb Movie Team
ಮದನ್​ ಕುಮಾರ್​
|

Updated on: Dec 19, 2024 | 8:23 PM

Share

ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನು ಮಾಡುವಲ್ಲಿ ಶಿವರಾಜ್​ಕುಮಾರ್​ ಫೇಮಸ್​. ‘ಹ್ಯಾಟ್ರಿಕ್ ಹೀರೋ’ ಎನರ್ಜಿಯೇ ಅಂಥದ್ದು. ಸದ್ಯಕ್ಕೆ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ. ಅದರ ನಡುವೆಯೇ ಒಂದು ಗುಡ್ ನ್ಯೂಸ್​ ಸಿಕ್ಕಿದೆ. ಶಿವರಾಜ್​ಕುಮಾರ್​ ನಟಿಸಲಿರುವ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ‘ಎಂಬಿ’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ, ಶಿವಣ್ಣ ಜೊತೆ ಸಿನಿಮಾ ಮಾಡಲು ಮುಂಬೈನ ನಿರ್ಮಾಣ ಸಂಸ್ಥೆ ಮುಂದೆ ಬಂದಿದೆ.

ಮುಂಬೈ ಮೂಲದ ‘ADD-ONE ಫಿಲ್ಮ್ಸ್​’ ಸಂಸ್ಥೆಯ ಮೂಲಕ ‘ಎಂಬಿ’ ಸಿನಿಮಾ ನಿರ್ಮಾಣ ಆಗಲಿದೆ. ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಜಯಕಾಂತ್ ನಟನೆಯ ಯಶಸ್ವಿ ‘ವಲ್ಲರಸು’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದ ಎನ್. ಮಹಾರಾಜನ್ ಅವರು ಈಗ ‘ಎಂಬಿ’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

ಇಲ್ಲಿಯವರೆಗೆ 3 ತಮಿಳು ಮತ್ತು ಸನ್ನಿ ಡಿಯೋಲ್ ನಟನೆಯ ಹಿಂದಿ ಸಿನಿಮಾವೊಂದನ್ನು ನಿರ್ದೇಶನ ಮಾಡಿರುವ ಮಹಾರಾಜನ್ ಅವರು ‘ಎಂಬಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ADD-ONE ಫಿಲ್ಮ್ಸ್​’ ಸಂಸ್ಥೆಯ ವತಿಯಿಂದ ಅನೇಕ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ಗೆ ಹಾರೈಸಲು ತಮಿಳುನಾಡಿನಿಂದ ಬಂದ ಫ್ಯಾನ್ಸ್

ಮನೋಜ್ ಬನೋಡೆ, ಖೇಮ್ ಚಂದ್ ಖಡ್ಗಿ ಅವರು ತಮ್ಮ ಮೊದಲ ಸಿನಿಮಾವನ್ನು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಅಷ್ಟಕ್ಕೂ ‘MB’ ಎಂದರೆ ಏನು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ. ಮುಂದಿನ‌ ದಿನಗಳಲ್ಲಿ ಶೀರ್ಷಿಕೆಯ ವಿವರಣೆ ಮತ್ತು ಚಿತ್ರತಂಡದ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. 2025ರ ಮಧ್ಯದಲ್ಲಿ ‘MB’ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು