ಈ ವಾರ ತೆರೆಗೆ ಉಪ್ಪಿ ನಿರ್ದೇಶನದ ‘ಯುಐ’; ಸ್ಪರ್ಧೆಗೆ ಇಳಿದ ಇತರ ಸಿನಿಮಾಗಳ್ಯಾವವು?
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಪೈಕಿ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರ ಪ್ರಮುಖವಾಗಿದೆ. 2040ರಲ್ಲಿ ನಡೆಯುವ ಈ ಚಿತ್ರ, ನಿರುದ್ಯೋಗ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ವಿಷಯಗಳನ್ನು ಪ್ರಸ್ತಾಪಿಸುತ್ತದೆ. "ವಿಡುದಲೈ 2" ಮತ್ತು "ಮುಫಾಸಾ: ದಿ ಲಯನ್ ಕಿಂಗ್" ಚಿತ್ರಗಳೂ ಕೂಡ ಈ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುತ್ತಿವೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಗಳ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಅನೇಕ ಕಂಪನಿಗಳಿಗೆ ಸಾಲು ಸಾಲು ರಜೆ ಇರುತ್ತದೆ. ಎಲ್ಲರೂ ಜಾಲಿ ಮೂಡ್ನಲ್ಲಿ ಇರುತ್ತಾರೆ. ಹೀಗಾಗಿ ಈ ಸಂದರ್ಭಗಳಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಈ ಬಾರಿ ಕ್ರಿಸ್ಮಸ್ ಸಂದರ್ಭದಲ್ಲಿ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ಈ ಸಾಲಿನಲ್ಲಿ ‘ಯುಐ’ ಚಿತ್ರ ಕೂಡ ಇದೆ.
ಯುಐ
ಉಪೇಂದ್ರ ನಿರ್ದೇಶನದ ಸಿನಿಮಾಗಳು ಸಖತ್ ಭಿನ್ನವಾಗಿರುತ್ತವೆ. ಈ ಸಾಲಿಗೆ ‘ಯುಐ’ ಕೂಡ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ. ಟ್ರೇಲರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರು ನಟಿಸುವುದರ ಜೊತೆಗೆ ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ರೀಷ್ಮಾ ನಾಣಯ್ಯ, ಮುರುಳಿ ಶರ್ಮಾ, ಅಚ್ಯುತ್ ಕುಮಾರ್, ರವಿ ಶಂಕರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕೆಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಬಂಡವಾಳ ಹೂಡಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು ಮೊದಲಾದ ಭಾಷೆಗಳಲ್ಲೂ ಬಿಡುಗಡೆ ಕಾಣುತ್ತಿದೆ.
‘ಯುಐ’ ಚಿತ್ರದ ಕಥೆ 2040ರಲ್ಲಿ ಸಾಗಲಿದೆ. ನಿರುದ್ಯೋಗ, ಗ್ಲೋಬಲ್ ವಾರ್ಮಿಂಗ್ ಮೊದಲಾದ ವಿಚಾರಗಳನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನವನ್ನು ಉಪೇಂದ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ತಲೆಗೆ ಹುಳಬಿಡುವ ಕೆಲಸ ಆಗುವ ನಿರೀಕ್ಷೆ ಇದೆ. ಈ ಚಿತ್ರ ಸೈನ್ಸ್ ಫಿಕ್ಷನ್ ಕಥೆ ಹೊಂದಿದೆ. ಈ ವಾರ ರಿಲೀಸ್ ಆಗುತ್ತಿರುವ ಪ್ರಮುಖ ಚಿತ್ರಗಳಲ್ಲಿ ‘ಯುಐ’ ಮುಂಚೂಣಿಯಲ್ಲಿ ಇದೆ.
‘ವಿಡುದಲೈ 2’
‘ವಿಡುದಲೈ’ ಯಶಸ್ಸು ಕಂಡ ಬಳಿಕ ‘ವಿಡುದಲೈ 2’ ಸಿನಿಮಾನ ತೆರೆಗೆ ತರುವ ಕೆಲಸ ಆಗಿದೆ. ವೆಟ್ರಿಮಾರನ್ ನಿರ್ದೇಶನದ ಈ ಚಿತ್ರದಲ್ಲಿ ಸೂರಿ, ವಿಜಯ್ ಸೇತುಪತಿ, ಇಳವರಸು ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: ಚಿರಂಜೀವಿಗೆ ನಿರ್ದೇಶನ ಮಾಡಬೇಕಿತ್ತು ಉಪೇಂದ್ರ; ಆ ಸಿನಿಮಾ ಸೆಟ್ಟೇರಲಿಲ್ಲ ಏಕೆ?
ಮುಫಾಸ: ದಿ ಲಯನ್ ಕಿಂಗ್
ಹಾಲಿವುಡ್ನ ‘ಮುಫಾಸ: ದಿ ಲೈನ್ ಕಿಂಗ್’ ಚಿತ್ರ ಕೂಡ ತೆರೆಗೆ ಬರುತ್ತಿದೆ. ಇದು ಅನಿಮೇಷನ್ ಸಿನಿಮಾ. ಆದಾಗ್ಯೂ ಭಾರತದಲ್ಲಿ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.