ಅರ್ಜುನ್ ಗುರೂಜಿ ಆಶೀರ್ವಾದ ಪಡೆದ ಕಾಶಿನಾಥ್ ಪುತ್ರ ಅಭಿಮನ್ಯು
‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಬಿಡುಗಡೆ ನಂತರ, ನಟ ಅಭಿಮನ್ಯು ಕಾಶಿನಾಥ್ ಮತ್ತು ಚಿತ್ರತಂಡ ಮೈಸೂರಿಗೆ ಭೇಟಿ ನೀಡಿ ಅವಧೂತ ಅರ್ಜುನ್ ಗುರೂಜಿಯವರಿಂದ ಆಶೀರ್ವಾದ ಪಡೆದಿದ್ದಾರೆ. ಗುರೂಜಿಯವರು ಚಿತ್ರದ ಯಶಸ್ಸಿಗೆ ಹಾರೈಸಿದ್ದು, ಅಭಿಮನ್ಯು ಅವರ ಭವಿಷ್ಯದ ಯಶಸ್ಸಿಗೂ ಶುಭ ಹಾರೈಸಿದ್ದಾರೆ. ಅಭಿಮನ್ಯು ಅವರು ತಮ್ಮ ತಂದೆಯ ಹೆಸರು ಅಜರಾಮರವಾಗಲೆಂದು ಪ್ರಾರ್ಥಿಸಿದ್ದಾರೆ.
ಅಭಿಮನ್ಯು ಕಾಶಿನಾಥ್ ನಟಿಸಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡ ಈ ಸಿನಿಮಾ ತಂಡ ಈಗ ಬೇರೆ ಬೇರೆ ಕಡೆಗಳಿಗೆ ಪಯಣ ಬೆಳೆಸಿದೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಚಿತ್ರತಂಡಕ್ಕೆ ಖುಷಿಯಾಗಿದೆ. ಈ ಖುಷಿಯ ನಡುವೆಯೇ ಅಭಿಮನ್ಯು ಕಾಶಿನಾಥ್ ಅವರು ಇಡೀ ಚಿತ್ರತಂಡದ ಜೊತೆ ಮೈಸೂರಿಗೆ ತೆರಳಿದ್ದಾರೆ. ಅಲ್ಲಿ, ಅವಧೂತ ಅರ್ಜುನ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ಗುರೂಜಿಯಿಂದ ಆಶೀರ್ವಾದ ಪಡೆದು ಬಂದಿದ್ದಾರೆ.
ಅರ್ಜುನ್ ಗುರೂಜಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಅಭಿಮನ್ಯು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಹಾಗೂ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರ ಮತ್ತಷ್ಟು ಯಶಸ್ಸು ಕಾಣಲಿ ಎಂದು ಆಶೀರ್ವಾದ ಮಾಡಿದರು. ಅವಧೂತ ಅರ್ಜುನ್ ಗುರೂಜಿ ನಿವಾಸಕ್ಕೆ ಚಿತ್ರತಂಡದ ಸದಸ್ಯರ ಜೊತೆ ಬಂದ ಅಭಿಮನ್ಯು ಕಾಶಿನಾಥ್ ಅವರು ತಮ್ಮ ತಂದೆ ಕಾಶಿನಾಥ್ ಹೆಸರು ಅಜರಾಮರ ಆಗಲೆಂದು ಬೇಡಿಕೊಂಡರು.
ಚಿತ್ರತಂಡದ ಭೇಟಿಯ ವೇಳೆ ಆಶೀರ್ವಚನ ನೀಡಿದ ಅವಧೂತ ಅರ್ಜುನ್ ಗುರೂಜಿ ಅವರು, ಈ ಸಿನಿಮಾ ಸಂಪೂರ್ಣ ಯಶಸ್ಸು ಗಳಿಸಲೆಂದು ಹಾರೈಸಿದರು. ಅಲ್ಲದೇ, ಯುವ ನಟ ಅಭಿಮನ್ಯು ಕಾಶಿನಾಥ್ ತಮ್ಮ ವೃತ್ತಿಜೀವನದಲ್ಲಿ ಒಳ್ಳೆಯ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಒಳ್ಳೆಯ ಸಂದೇಶ ದಾಟಿಸುವಂತಾಗಲಿ ಎಂದು ಆಶೀರ್ವಾದ ಮಾಡಿದರು. ಈ ವೇಳೆ ಅಭಿಮನ್ಯು ಕಾಶಿನಾಥ್ ಜೊತೆ ಸ್ಫೂರ್ತಿ ಉಡಿಮನೆ, ಡೈರೆಕ್ಟರ್ ಕಿರಣ್ ಎಸ್. ಸೂರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಳೆದ ವಾರ ಬಿಡುಗಡೆ ಆದ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾಯಕ ನಟ ಅಭಿಮನ್ಯು ಕಾಶಿನಾಥ್ ಅವರು ತಮ್ಮ ತಂಡದ ಜೊತೆ ಸೇರಿಕೊಂಡು ಪ್ರಮೋಷನ್ ಮಾಡುತ್ತಿದ್ದಾರೆ. ಇದರ ನಡುವೆಯೇ ಅವಧೂತ ಅರ್ಜುನ್ ಗುರೂಜಿ ಅವರನ್ನು ಭೇಟಿ ಮಾಡುವ ಮೂಲಕ ಆಧ್ಯಾತ್ಮಿಕ ಅನುಭೂತಿಯ ಜೊತೆ ಇನ್ನಷ್ಟು ಹುರುಪು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಎಲ್ಲಿಗೆ ಪಯಣ ಯಾವುದೋ ದಾರಿ: ಸುದೀಪ್ಗೆ ಇಷ್ಟವಾಯ್ತು ಕಾಶಿನಾಥ್ ಮಗನ ಸಿನಿಮಾ ಟ್ರೇಲರ್
‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾಗೆ ನಿರ್ದೇಶಕ ಕಿರಣ್ ಎಸ್. ಸೂರ್ಯ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ, ಬಲ ರಾಜವಾಡಿ, ಶೋಭನ್, ರವಿತೇಜ, ರಿನಿ ಬೋಪಣ್ಣ, ಅಯಾಂಕ್, ಪ್ರದೀಪ್, ಕಿಶೋರ್, ಪ್ರಿಯಾ, ಅಶ್ವಿನಿ ರಾವ್ ಮುಂತಾದವರು ನಟಿಸಿದ್ದಾರೆ. ಪ್ರಣವ್ ರಾವ್ ಅವರ ಸಂಗೀತ, ಸತ್ಯ ರಾಮ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.