ಉಪೇಂದ್ರ ಮೆಚ್ಚಿದ ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾ ಮಾರ್ಚ್​ 6ಕ್ಕೆ ಬಿಡುಗಡೆ

|

Updated on: Mar 04, 2025 | 7:36 PM

ಮಾರ್ಚ್​ 6ರಂದು ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾ ತೆರೆಕಾಣಲಿದೆ. ನಟ ಉಪೇಂದ್ರ ಅವರು ಈಗಾಗಲೇ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾಶಿನಾಥ್ ಪುತ್ರ ಅಭಿಮನ್ಯು ಹಾಗೂ ಅಪೂರ್ವಾ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಯಾದವ್ ರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಉಪೇಂದ್ರ ಮೆಚ್ಚಿದ ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾ ಮಾರ್ಚ್​ 6ಕ್ಕೆ ಬಿಡುಗಡೆ
Soori Loves Sandhya Poster
Follow us on

ಟ್ರೇಲರ್ ಮೂಲಕ ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಅಭಿಮನ್ಯು ಕಾಶಿನಾಥ್ (Abhimanyu Kashinath) ಮತ್ತು ಅಪೂರ್ವಾ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಬಿಡುಗಡೆಗೂ ಮುನ್ನವೇ ಅವರು ಈ ಚಿತ್ರವನ್ನು ನೋಡಿ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಮಾರ್ಚ್​ 6ಕ್ಕೆ ‘ಸೂರಿ ಲವ್ಸ್ ಸಂಧ್ಯಾ’ ತೆರೆಕಾಣಲಿದೆ. ಯಾದವ್ ರಾಜ್ ನಿರ್ದೇಶನ ಮಾಡಿದ ಈ ಸಿನಿಮಾವನ್ನು ಕೆ.ಟಿ. ಮಂಜುನಾಥ್‍ ಅವರು ನಿರ್ಮಾಣ ಮಾಡಿದ್ದಾರೆ.

‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾಗೆ ಯಾದವ್ ರಾಜ್‍ ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಭಿಮನ್ಯು ಕಾಶಿನಾಥ್‍, ಅಪೂರ್ವಾ ಜೊತೆಗೆ ಪ್ರತಾಪ್‍ ನಾರಾಯಣ್‍, ಭಜರಂಗಿ ಪ್ರಸನ್ನ, ಪ್ರದೀಪ್‍ ಕಾಬ್ರಾ, ಖುಷಿ ಆಚಾರ್‍ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಸ್‍.ಎನ್‍. ಅರುಣಗಿರಿ ಅವರು ಸಂಗೀತ ನೀಡಿದ್ದಾರೆ. ಶ್ರೀನಿವಾಸ್‍ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿನಿಮಾ ಬಗ್ಗೆ ಉಪೇಂದ್ರ ಹೇಳಿದ್ದೇನು?

‘ನಾನು ಹೃದಯ ತುಂಬಿ ಮಾತನಾಡುತ್ತಿದ್ದೇನೆ. ಇಂಥ ತಂಡದೊಂದಿಗೆ ನಿಲ್ಲುವುದಕ್ಕೆ ಹೆಮ್ಮೆ ಆಗುತ್ತದೆ. ಯಾಕಂದ್ರೆ, ಈ ಸಿನಿಮಾವನ್ನು ನಾನು ನೋಡಿದೇನೆ. ನಾಯಕ-ನಾಯಕಿ ಇಬ್ಬರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮನ್ಯು ತಂದೆ ಕಾಶಿನಾಥ್‍ ಅವರು ಇರಬೇಕಿತ್ತು. ಅವರು ಈ ಸಿನಿಮಾವನ್ನು ನೋಡಬೇಕಿತ್ತು. ಬಹಳ ಖುಷಿಪಟ್ಟಿರುತ್ತಿದ್ದರು. ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ಯಾವಾಗಲೂ ಜೊತೆಗೆ ಇರುತ್ತದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದರೆ ಹೃದಯ ಕಿತ್ತು ಬರುವಷ್ಟು ಫೀಲ್‍ ಆಗುತ್ತದೆ. ಕೊನೆಯ 20 ನಿಮಿಷ ನಾಯಕ-ನಾಯಕಿ ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎಂದಿದ್ದಾರೆ ಉಪೇಂದ್ರ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇದನ್ನೂ ಓದಿ: ಕಾಶಿನಾಥ್​ಗೆ ಆ್ಯಸಿಡ್ ಹಾಕಲು ಬಂದಿದ್ದರು: ಭಯಾನಕ ಘಟನೆ ನೆನೆದ ಉಪೇಂದ್ರ

‘ಈ ರೀತಿಯ ಸಿನಿಮಾಗಳನ್ನು ನೋಡಿ ಎಂದು ಕನ್ನಡಿಗರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ಅಭಿಮನ್ಯು ಮೇಲೆ ಅಪ್ಪನ ಆಶೀರ್ವಾದ ಹಾಗೂ ಅವರ ಅಭಿಮಾನಿಗಳ ಆಶೀರ್ವಾದ ಇದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ. ಚಿತ್ರ ತುಂಬ ನೈಜವಾಗಿದೆ. ನಾನು ಸಿನಿಮಾ ನೋಡಿ 2 ತಿಂಗಳಾಗಿದೆ. ಆದರೂ ನಿನ್ನೆ-ಮೊನ್ನೆ ನೋಡಿದಂತಿದೆ’ ಎಂದು ಉಪೇಂದ್ರ ಹೇಳಿದ್ದಾರೆ. ಅವರಿಂದ ಈ ಪರಿ ಹೊಗಳಿಗೆ ಸಿಕ್ಕಿದ್ದಕ್ಕೆ ಅಭಿಮನ್ಯು, ಅಪೂರ್ವಾ ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.