ಅಭಿಷೇಕ್ ಅಂಬರೀಷ್​ ಅವಿವಾ ಅದ್ದೂರಿ ಮದುವೆ; ಶುಭ ಮುಹೂರ್ತದಲ್ಲಿ ನೆರವೇರಿತು ಮಾಂಗಲ್ಯಧಾರಣೆ

|

Updated on: Jun 05, 2023 | 2:58 PM

Abhishek Ambareesh Aviva Wedding: ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿದೆ. ಅಂಬಿ ಪುತ್ರನ ಮದುವೆಗೆ ಖ್ಯಾತ ನಟಿ ಸುಹಾಸಿನಿ ಮೊದಲಾದವರು ಆಗಮಿಸಿದ್ದಾರೆ.

ಅಭಿಷೇಕ್ ಅಂಬರೀಷ್​ ಅವಿವಾ ಅದ್ದೂರಿ ಮದುವೆ; ಶುಭ ಮುಹೂರ್ತದಲ್ಲಿ ನೆರವೇರಿತು ಮಾಂಗಲ್ಯಧಾರಣೆ
ಅಭಿ-ಅವಿವಾ ಮದುವೆ
Follow us on

ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಈಗ ಪತಿ-ಪತ್ನಿಯರು. ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅವರು ಅವಿವಾಗೆ (Aviva Bidapa)  ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆಯುತ್ತಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು. ಅಭಿಷೇಕ್ ಅಂಬರೀಷ್ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿದೆ. ಅಂಬಿ ಪುತ್ರನ ಮದುವೆಗೆ ಖ್ಯಾತ ನಟಿ ಸುಹಾಸಿನಿ ಆಗಮಿಸಿದ್ದಾರೆ. ಟಾಲಿವುಡ್ ನಟ ಮೋಹನ್ ಬಾಬು, ಮನೋಜ್ ಮಂಚು ಮೊದಲಾದವರು ಆಗಮಿಸಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಅನೇಕರು ಈ ವಿವಾಹ ಕಾರ್ಯಕ್ಕೆ ಬರಲಿದ್ದಾರೆ.

ಇದನ್ನೂ ಓದಿ: Abhishek Ambareesh Wedding: ಮದುವೆ ಸ್ಥಳಕ್ಕೆ ಹೇಗಿತ್ತು ನೋಡಿ ಅಭಿಷೇಕ್ ಅಂಬರೀಷ್ ಎಂಟ್ರಿ

ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಇಂದು ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಿ ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Mon, 5 June 23