Abhishek Bachchan: ‘ಕಬ್ಜ’ ಟ್ರೇಲರ್​ ನೋಡಿ ಅಭಿಷೇಕ್​ ಬಚ್ಚನ್​ ಫಿದಾ; ವಿತರಕರಿಗೆ ಮೆಚ್ಚುಗೆ ಸಂದೇಶ ಕಳಿಸಿದ ನಟ

|

Updated on: Mar 06, 2023 | 3:34 PM

Kabzaa Movie | Upendra: ಆನಂದ್​ ಪಂಡಿತ್​ ಅವರು ಅಭಿಷೇಕ್​ ಬಚ್ಚನ್​ಗೆ ‘ಕಬ್ಜ’ ಚಿತ್ರದ ಟ್ರೇಲರ್​ ಕಳಿಸಿದ್ದಾರೆ. ಅದನ್ನು ನೋಡಿ ಅವರು ಪ್ರತಿಕ್ರಿಯೆ ತಿಳಿಸಿದ್ದಾರೆ.

Abhishek Bachchan: ‘ಕಬ್ಜ’ ಟ್ರೇಲರ್​ ನೋಡಿ ಅಭಿಷೇಕ್​ ಬಚ್ಚನ್​ ಫಿದಾ; ವಿತರಕರಿಗೆ ಮೆಚ್ಚುಗೆ ಸಂದೇಶ ಕಳಿಸಿದ ನಟ
ಅಭಿಷೇಕ್ ಬಚ್ಚನ್, ಉಪೇಂದ್ರ
Follow us on

ಉಪೇಂದ್ರ, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ ಮಾಡಿದ್ದು, ದೇಶಾದ್ಯಂತ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್​ (Kabzaa Trailer) ರಿಲೀಸ್​ ಆಯಿತು. ಅದನ್ನು ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲದೇ ಬಾಲಿವುಡ್​ ಮಂದಿ ಕೂಡ ಫಿದಾ ಆಗಿದ್ದಾರೆ. ಖ್ಯಾತ ನಟ ಅಭಿಷೇಕ್​ ಬಚ್ಚನ್​ ಅವರಿಗೆ ‘ಕಬ್ಜ’ ಸಿನಿಮಾದ ಟ್ರೇಲರ್​ ಇಷ್ಟ ಆಗಿದೆ. ಹಿಂದಿ ವಿತರಕರಾದ ಆನಂದ್​ ಪಂಡಿತ್​ ಅವರಿಗೆ ಅಭಿಷೇಕ್​ ಬಚ್ಚನ್ (Abhishek Bachchan) ಮೆಸೇಜ್​ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಸಖತ್​ ಖುಷಿ ಆಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ಸಿನಿಮಾ ಸದ್ದು ಮಾಡಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ತೆರೆಕಾಣಲಿದೆ. ಆನಂದ್​ ಪಂಡಿತ್​ ಅವರು ಈ ಚಿತ್ರವನ್ನು ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ. ಬಚ್ಚನ್​ ಕುಟುಂಬದ ಜೊತೆ ಅವರಿಗೆ ಒಡನಾಟ ಇದೆ. ಅಭಿಷೇಕ್​ ಬಚ್ಚನ್​ ಅವರಿಗೆ ಟ್ರೇಲರ್​ ಕಳಿಸಲಾಗಿದ್ದು, ಅದನ್ನು ನೋಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ತುಂಬ ದೊಡ್ಡದಾಗಿ. ಅಭಿನಂದನೆಗಳು ಆನಂದ್​ ಭಾಯ್​’ ಎಂದು ಅಭಿಷೇಕ್​ ಬಚ್ಚನ್​ ಮೆಸೇಜ್​ ಕಳಿಸಿದ್ದಾರೆ.

ಇದನ್ನೂ ಓದಿ: Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್​ನಲ್ಲಿ ಉಪ್ಪಿ

ಇದನ್ನೂ ಓದಿ
Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

ಮಾರ್ಚ್​ 4ರಂದು ‘ಕಬ್ಜ’ ಟ್ರೇಲರ್​ ಬಿಡುಗಡೆ ಆಯಿತು. ಅಮಿತಾಭ್​ ಬಚ್ಚನ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಲಿಂಕ್​ ಹಂಚಿಕೊಳ್ಳುವ ಮೂಲಕ ಟ್ರೇಲರ್​ ಅನಾವರಣ ಮಾಡಿದರು. ‘ನನ್ನ ಪ್ರೀತಿಯ ಸ್ನೇಹಿತ ಆನಂದ್​ ಪಂಡಿತ್​ ನಿರ್ಮಾಣ ಮಾಡಿರುವ ಮತ್ತು ಆರ್​. ಚಂದ್ರು ನಿರ್ದೇಶನ ಮಾಡಿರುವ ಕಬ್ಜ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲು ಹೆಮ್ಮೆ ಎನಿಸುತ್ತಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಹಾಗೂ ಶಿವರಾಜ್​ಕುಮಾರ್​ ಅವರಿಗೆ ಆಲ್​ ದಿ ಬೆಸ್ಟ್​’ ಎಂದು ಅಮಿತಾಭ್​​ ಬಚ್ಚನ್​ ಟ್ವೀಟ್​ ಮಾಡಿದರು. ಅದರ ಬೆನ್ನಲ್ಲೇ ಅಭಿಷೇಕ್​ ಬಚ್ಚನ್​ ಕೂಡ ಟ್ರೇಲರ್​ ನೋಡಿ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ

ಪುನೀತ್ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ ರಿಲೀಸ್​ ಆಗಲಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಬಗ್ಗೆ ಕ್ರೇಜ್​ ಸೃಷ್ಟಿ ಆಗಿದೆ. ಟ್ರೇಲರ್​ನಲ್ಲಿ ಕಾಣಿಸಿದ ತಾಂತ್ರಿಕ ಗುಣಮಟ್ಟ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.