‘ದುರ್ವರ್ತನೆ ಬೇಡ’; ಜೈಲಲ್ಲಿರುವ ಆರೋಪಿ ದರ್ಶನ್ಗೆ ಪತ್ರ ಬರೆದು ವಕೀಲರ ನೀತಿಪಾಠ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್, ಕಳೆದ ಮೂರು ತಿಂಗಳಿನಿಂದಲೂ ಜೈಲು ವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅನ್ನು, ಬಳ್ಳಾರಿ ಶಿಫ್ಟ್ ಮಾಡಲಾಗಿದೆ. ಅಲ್ಲಿ ಅವರಿಗೆ ಶಿಸ್ತಿನ ಪಾಠ ಮಾಡಲಾಗಿದೆ. ಸ್ವತಃ ಅವರ ಪರ ವಕಲೀರು ಸುಮ್ಮನಿರುವಂತೆ ಸೂಚಿಸಿದ್ದಾರೆ.
ನಟ ದರ್ಶನ್ ಅವರು ಜೈಲು ಸೇರಿದರೂ ಒಂದಾದಮೇಲೆ ಒಂದರಂತೆ ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಅವರು ಕೇಂದ್ರ ಕಾರಾಗೃಹದಲ್ಲಿ ಇದ್ದಾಗ ಸಿಗರೇಟ್ ಸೇದಿ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರಿಂದ ಅವರು ಬಳ್ಳಾರಿ ಜೈಲಿಗೆ ಎತ್ತಂಗಡಿ ಆಗುವಂತೆ ಆಯಿತು. ಈಗ ಬಳ್ಳಾರಿಯಲ್ಲೂ ಅವರು ವಿವಾದ ಮಾಡಿಕೊಂಡಿದ್ದಾರೆ. ಅವರು ಮಾಧ್ಯಮಗಳಿಗೆ ಅಶ್ಲೀಲ ಸನ್ನೆ ತೋರಿಸಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಅವರಿಗೆ ವಕೀಲರಿಂದ ಕಿವಿಮಾತು ಬಂದಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಈ ಚಾರ್ಜ್ಶೀಟ್ನಲ್ಲಿ ಹಲವು ವಿಚಾರಗಳು ಉಲ್ಲೇಖ ಆಗಿವೆ. ಈವರೆಗೆ ದರ್ಶನ್ ಪರ ವಕೀಲರು ಜಾಮೀನು ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಜಾಮೀನು ಅರ್ಜಿ ಸಲ್ಲಿಕೆ ಆಗಿದ್ದೇ ಹೌದಾದಲ್ಲಿ ದರ್ಶನ್ ಕಾಂಟ್ರವರ್ಸಿ ವಿಚಾರಗಳು ಹೈಲೈಟ್ ಆಗುವ ಸಾಧ್ಯತೆ ಇರುತ್ತದೆ. ಅದುವೇ ದರ್ಶನ್ ಜಾಮೀನಿಗೆ ತೊಂದರೆ ಮಾಡಬಹುದು. ಈ ಕಾರಣಕ್ಕೆ ಅವರ ಪರ ವಕೀಲರು ದರ್ಶನ್ಗೆ ಕಿವಿಮಾತು ಹೇಳಿದ್ದಾರೆ.
‘ಜೈಲಿನಲ್ಲಿ ವಿವಾದ ಮಾಡಿಕೊಳ್ಳಬೇಡಿ. ಪದೇಪದೆ ಕಿರಿಕ್ ಮಾಡಿಕೊಂಡರೆ ಜಾಮೀನಿಗೆ ಸಮಸ್ಯೆ ಆಗುತ್ತದೆ. ಕಾನೂನು ಹೋರಾಟಕ್ಕೆ ತೊಡಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಂಡು ದರ್ಶನ್ ದುರ್ನಡತೆ ತೋರಿದ್ದರು. ಅಲ್ಲದೇ ಟಿವಿಗಾಗಿ ಸಿಬ್ಬಂದಿ ಜತೆ ಪದೇಪದೇ ಕಿರಿಕ್ ಆಗುತ್ತಿತ್ತು. ಸದ್ಯ ಜೈಲಿಗೆ ಬಂದ ಪತ್ರವನ್ನು ಸಿಬ್ಬಂದಿ ದರ್ಶನ್ಗೆ ನೀಡಿದ್ದಾರೆ.
ಇದನ್ನೂ ಓದಿ: ಜೈಲಧಿಕಾರಿಗಳ ಬಳಿ ಮತ್ತೊಂದು ಬೇಡಿಕೆ ಇಟ್ಟ ದರ್ಶನ್, ಆದರೆ ನಿರಾಕರಣೆ
ಫಾಸ್ಟ್ಟ್ರ್ಯಾಕ್ ಕೋರ್ಟ್ನಲ್ಲಿ ದರ್ಶನ್ ಮನವಿ?
ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಫಾಸ್ಟ್ಟ್ರ್ಯಾಕ್ ಕೋರ್ಟ್ಗೆ ಮನವಿ ಮಾಡಲಿರುವ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೇರವಾಗಿ ಹೈಕೋರ್ಟ್ಗೆ ಮನವಿ ಮಾಡುವುದಕ್ಕೆ ತಯಾರಿ ನಡೆದಿದೆಯಂತೆ. ನ್ಯಾಯಮೂರ್ತಿಗಳಿಗೆ ಮನವಿ ಮಾಡಿ ಒಪ್ಪಿಗೆ ಪಡೆಯುವ ಚಿಂತನೆ ಪೊಲೀಸರಿಗೆ ಇದೆ. ಈ ಕಾರಣಕ್ಕೆ ಸರ್ಕಾರಕ್ಕೆ ಪೊಲೀಸರು ಯಾವುದೇ ಮನವಿ ಸಲ್ಲಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.