ಅಂಬರೀಷ್​ಗಾಗಿ ಆ ಸಿನಿಮಾ ಒಪ್ಪಿಕೊಂಡಿದ್ದ ವಿಷ್ಣುವರ್ಧನ್: ಹಿಟ್ ಆಯ್ತಾ, ಫ್ಲಾಪ್ ಆಯ್ತಾ?

ವಿಷ್ಣುವರ್ಧನ್ ಹಾಗೂ ಅಂಬರೀಶ್ ಗೆಳೆತನದ ಬಗ್ಗೆ ಹಲವು ಕತೆಗಳಿವೆ. ಇಬ್ಬರೂ ಬಹಳ ಆಪ್ತ ಗೆಳೆಯರಾಗಿದ್ದರು. ಇಬ್ಬರು ಒಟ್ಟಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಅಂದಹಾಗೆ ಅಂಬರೀಶ್ ಬಲವಂತಕ್ಕೆ ವಿಷ್ಣುವರ್ಧನ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಏನಾಯ್ತು ಆ ಸಿನಿಮಾ?

ಅಂಬರೀಷ್​ಗಾಗಿ ಆ ಸಿನಿಮಾ ಒಪ್ಪಿಕೊಂಡಿದ್ದ ವಿಷ್ಣುವರ್ಧನ್: ಹಿಟ್ ಆಯ್ತಾ, ಫ್ಲಾಪ್ ಆಯ್ತಾ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 17, 2024 | 5:01 PM

ವಿಷ್ಣುವರ್ಧನ್ ಹಾಗೂ ಅಂಬರೀಷ್ ಮಧ್ಯೆ ಗಾಢವಾದ ಫ್ರೆಂಡ್ಶಿಪ್ ಇತ್ತು ಎಂಬುದು ಗೊತ್ತಿರೋ ವಿಚಾರ. ಈ ಬಗ್ಗೆ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಅಂಬರೀಷ್ ಸಿನಿಮಾ ಒಪ್ಪಿಕೊಂಡಿದ್ದರು ಎನ್ನುವ ಕಾರಣಕ್ಕೆ ವಿಷ್ಣುವರ್ಧನ್ ಅವರು ಸಿನಿಮಾ ಒಂದನ್ನು ಮಾಡಿದ್ದರು. ಹಾಗಾದರೆ ಈ ಚಿತ್ರ ಹಿಟ್ ಆಯಿತೋ ಅಥವಾ ಇಲ್ಲವೋ? ಆ ಬಗ್ಗೆ ಈ ಸ್ಟೋರಿಯಲ್ಲಿ ನಾವು ಹೇಳುತ್ತಿದ್ದೇವೆ. ನಾಳೆ (ಸೆಪ್ಟೆಂಬರ್ 18) ವಿಷ್ಣುವರ್ಧನ್ ಜನ್ಮದಿನ. ಹೀಗಾಗಿ, ಅವರ ಬಗ್ಗೆ ಹೇಳುತ್ತಿದ್ದೇವೆ.

‘ನಾಗರಹಾವು’ ಸಿನಿಮಾದಲ್ಲಿ ಅಂಬರೀಷ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ವಿಷ್ಣು ಹೀರೋ ಆದರೆ, ಅಂಬರೀಷ್ ಅವರದ್ದು ವಿಲನ್ ಪಾತ್ರ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಿತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಿಂದ ವಿಷ್ಣು ಹಾಗೂ ಅಂಬರೀಷ್ ಮಧ್ಯೆ ಗೆಳೆತನ ಬೆಳೆಯಿತು. ಕೊನೆಯವರೆಗೂ ಈ ಗೆಳೆತನ ಹಾಗೆಯೇ ಇತ್ತು.

ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರು ‘ಹಬ್ಬ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡಿತು. ಆದರೆ, ಅಂಬರೀಷ್ಗೆ ಈ ಸಿನಿಮಾ ಖುಷಿ ಕೊಡಲೇ ಇಲ್ಲ. 1999ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ‘ನಾನು ಹಾಗೂ ವಿಷ್ಣುವರ್ಧನ್ ಅವರು ಒಟ್ಟಾಗಿ ನಟಿಸುತ್ತಿದ್ದೇವೆ ಎಂದರೆ ಅದು ಒಂದರ ಸಂಕೇತ ಆಗಿರಬೇಕು’ ಎನ್ನುವ ಭಾವನೆ ಇತ್ತಂತೆ. ಆಗ ಅಂಬರೀಷ್​ಗೆ ಬಂದಿದ್ದೇ ‘ದಿಗ್ಗಜರು’ ಸಿನಿಮಾ.

ಇದನ್ನೂ ಓದಿ:ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ

ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ರಾಕ್ಲೈನ್ ವೆಂಕಟೇಶ್ ಅವರು. 2001ರ ಜನವರಿ 26ರಂದು ಸಿನಿಮಾ ರಿಲೀಸ್ ಆಗಿತ್ತು. ವಿಷ್ಣು ಅವರು ದ್ವಿಪಾತ್ರದಲ್ಲಿ ನಟಿಸಿದ್ದರು. ಅವರ ಜೊತೆ ಅಂಬರೀಷ್ ಕೂಡ ಬಣ್ಣ ಹಚ್ಚಿದ್ದರು. ತಮಿಳು ಸಿನಿಮಾದ ರಿಮೇಕ್ ಇದಾಗಿತ್ತು. ಆರಂಭದಲ್ಲಿ ಈ ಸಿನಿಮಾದಲ್ಲಿ ನಟಿಸೋಕೆ ವಿಷ್ಣು ಆಸಕ್ತಿ ತೋರಿಸಿರಲಿಲ್ಲ. ಅಂಬರೀಷ್​ಗೆ ಕಥೆ ಇಷ್ಟ ಆಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ವಿಷ್ಣು ಅವರು ಖುಷಿಯಿಂದ ಸಿನಿಮಾ ಮಾಡಲು ಮುಂದೆ ಬಂದರು. ಈ ಚಿತ್ರ ರಿಲೀಸ್ ಆಗಿ ಯಶಸ್ಸು ಕಂಡಿತು.

ಇಂದು (ಸೆಪ್ಟೆಂಬರ್ 18) ವಿಷ್ಣುವರ್ಧನ್​ಗೆ ಜನ್ಮದಿನ. ಅವರು ಇಲ್ಲದೆ ಇದ್ದರೂ ಅವರ ನೆನಪು ಸದಾ ಅಭಿಮಾನಿಗಳ ಜೊತೆ ಇರುತ್ತದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ