ಮಹಾರಾಷ್ಟ್ರದಲ್ಲಿ ಕನ್ನಡ ನಾಡಿನ ಧ್ವಜ ಸುಟ್ಟು ಹಾಕಿದ್ದರ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹೆಚ್ಚಾಗುತ್ತಿದೆ. ಹಲವು ತಾರೆಯರು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನ ಧ್ವಜ ಸುಟ್ಟು ಹಾಕಿದ್ದರ ಬಗ್ಗೆ ನಟ ದ್ರುವ ಸರ್ಜಾ ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ. ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ. ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು. ಇದು ನನ್ನಂತಹ ಕೋಟ್ಯಾಂತರ ಕನ್ನಡಿಗರ ಒತ್ತಾಯ ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡ ನಾಡಿನ ಭಾವುಟಕ್ಕೆ ಸೆಲ್ಯೂಟ್ ಮಾಡುವ ಫೋಟೋ ಹಂಚಿಕೊಂಡು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಧ್ವಜವನ್ನು ಸುಟ್ಟಿರುವುದು ಇದೀಗ ಕನ್ನಡಿಗರ ಸ್ವಾಭಿಮನಕ್ಕೆ ಅವಮಾನ ಮಾಡಿದಂತಾಗಿದೆ. ಈ ಬಗ್ಗೆ ನಟ ಶಿವರಾಜ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವು ನಟರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರವನ್ನು ಟ್ಯಾಗ್ ಮಾಡುವ ಮೂಲಕ ಕನ್ನಡಧ್ವಜ, ಕನ್ನಡ ನಾಡನ್ನು ಅವಮಾನಿಸುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಿರ್ದೇಶಕ ಆನಂದ್ ರಾಮ್ ಕೂಡ ನಮ್ಮ ಭಾಷೆ, ನಾಡು, ನೀರಿನ ಪರ ಧ್ವನಿಯಾಗಿರುವುದು ನಮ್ಮ ಕರ್ತವ್ಯ. ಬೆಳಗಾವಿ ಕರ್ನಾಟಕದ ಕಳಶ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ನಟ ಗಣೇಶ್ ಕೂಡ ಪ್ರತಿಕ್ರಿಯೆ ನೀಡಿದ್ದು, ಭಾಷೆ ದೊಡ್ಡದು. ಒಂದು ಭಾಷೆಯಿಂದ ನಾವು ಬೆಳೆದಿದ್ದೇವೆ. ಭಾವುಟವನ್ನು ಸುಟ್ಟಿರುವವರು ಯಾರೇ ಅಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರನ್ನು ಹುಡುಕಿ ಶಿಕ್ಷೆ ಕೊಡುವ ಕೆಲಸ ಆಗಬೇಕು. ಅವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಕನ್ನಡ ಧ್ವಜ ಸುಟ್ಟಿದ್ದರ ಬಗ್ಗೆ ಸ್ಯಾಂಡಲ್ವುಡ್ ನಟ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕನ್ನಡ ಭಾವುಟವನ್ನು ಮಂಗಳವಾರ ಸುಟ್ಟು ಹಾಕಿದ್ದರು.
ಇದನ್ನೂ ಓದಿ:
ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವಣ್ಣ, ಜಗ್ಗೇಶ್ ಆಕ್ರೋಶ; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್ವುಡ್ ಖಂಡನೆ
Published On - 1:16 pm, Thu, 16 December 21